ಮಲ್ಯ ಮನೆಯಾಗಲಿದೆ ಅರ್ಥರ್ ರಸ್ತೆಯ ಜೈಲು : ಇಂಗ್ಲೆಂಡ್'ಗೆ ಭಾರತ ಹೇಳಿಕೆ

By suvarna Web DeskFirst Published Nov 26, 2017, 6:33 PM IST
Highlights

ಭಾರತದ ಜೈಲುಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಅವರ ಜೀವಕ್ಕೂ ಕೂಡ ಅಪಾಯವಿದೆ ಎಂದು ಮಲ್ಯ ಪರ ವಕೀಲರು ಹೇಳಿದ್ದ ಸಂಬಂಧ ಅರ್ಥರ್ ರಸ್ತೆಯಲ್ಲಿರುವ ಜೈಲಿನಲ್ಲಿ ಇರಿಸುವ ವ್ಯವಸ್ಥೆ ಮಾಡಲಾಗುವುದು. ಈ ಜೈಲಿನಲ್ಲಿ ಸೂಕ್ತ ವೈದ್ಯಕೀಯ ಸೌಲಭ್ಯದ ವ್ಯವಸ್ಥೆ ಇದ್ದು, ಅತ್ಯಂತ ಭದ್ರತೆಯನ್ನೂ ಕೂಡ  ಹೊಂದಿದೆ ಎಂದು ಹೇಳಿದೆ.

ಹೊಸದಿಲ್ಲಿ(ನ.26): ದೇಶದ ವಿವಿಧ ಬ್ಯಾಂಕ್'ಗಳಲ್ಲಿ ಸಾವಿರಾರು ಕೋಟಿ ರು. ಸಾಲ ಮಾಡಿ ಇಂಗ್ಲೆಂಡ್'ನಲ್ಲಿ ಅವಿತು ಕೊಂಡಿರುವ ಮದ್ಯ ದೊರೆ ವಿಜಯ್ ಮಲ್ಯರನ್ನು ಅಲ್ಲಿಂದ ಗಡಿ ಪಾರು ಮಾಡಿದರೆ ಮುಂಬೈನ ಅರ್ಥರ್ ರಸ್ತೆಯಲ್ಲಿರುವ ಜೈಲು ಅವರ ನಿವಾಸವಾಗಲಿದೆ. ಈ ಬಗ್ಗೆ ಭಾರತವು  ಮುಂದಿನ ವಾರ ಕ್ರೌನ್ ಪ್ರಾಸಿಕ್ಯೂಷನ್ ಮೂಲಕ ಬ್ರಿಟನ್ ಕೋರ್ಟ್'ನಲ್ಲಿ ತಿಳಿಸಲಿದೆ.

ಲಂಡನ್'ನ ವೆಸ್ಟ್'ಮಿನಿಸ್ಟರ್  ಮ್ಯಾಜಿಸ್ಟ್ರೇಟ್ ಕೋರ್ಟ್'ನಲ್ಲಿ  ಭಾರತದಲ್ಲಿ ಮಲ್ಯ ಅವರನ್ನು ಇರಿಸಲು  ಯಾವ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕೇಳಿದ್ದಕ್ಕೆ ಭಾರತ ಪ್ರತಿಕ್ರಿಯಿಸಿದೆ.

ಅಲ್ಲದೇ ಭಾರತದ ಜೈಲುಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಅವರ ಜೀವಕ್ಕೂ ಕೂಡ ಅಪಾಯವಿದೆ ಎಂದು ಮಲ್ಯ ಪರ ವಕೀಲರು ಹೇಳಿದ್ದ ಸಂಬಂಧ ಅರ್ಥರ್ ರಸ್ತೆಯಲ್ಲಿರುವ ಜೈಲಿನಲ್ಲಿ ಇರಿಸುವ ವ್ಯವಸ್ಥೆ ಮಾಡಲಾಗುವುದು. ಈ ಜೈಲಿನಲ್ಲಿ ಸೂಕ್ತ ವೈದ್ಯಕೀಯ ಸೌಲಭ್ಯದ ವ್ಯವಸ್ಥೆ ಇದ್ದು, ಅತ್ಯಂತ ಭದ್ರತೆಯನ್ನೂ ಕೂಡ  ಹೊಂದಿದೆ ಎಂದು ಹೇಳಿದೆ.

ಆದರೆ ಭಾರತದ ಗೃಹ ಸಚಿವಾಲಯದ ಅಧಿಕಾರಿಗಳು ಇಂತಹ  ಆರೋಪ ಮಾಡುವ ಮೂಲಕ ಗಡಿ ಪಾರು ಮಾಡುವುದನ್ನು ತಪ್ಪಿಸಲು ಯತ್ನಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಅಲ್ಲದೇ ಈ ಪ್ರಕರಣವನ್ನು ವೆಸ್ಟ್'ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ಡಿಸೆಂಬರ್ 4ರಿಂದ ವಿಚಾರಣೆ ನಡೆಸಲಿದೆ.

click me!