
ನವದೆಹಲಿ : ಭಾರತದ ವಾಣಿಜ್ಯ ನಗರ ಎಂದೇ ಖ್ಯಾತವಾಗಿರುವ ಮುಂಬೈ ಜಾಗತಿಕವಾಗಿ 950 ಶತಕೋಟಿ ಡಾಲರ್ ಸಂಪತ್ತು ಹೊಂದುವ ಮೂಲಕ ವಿಶ್ವದ 15 ಶ್ರೀಮಂತ ನಗರಗಳಲ್ಲಿ ಸ್ಥಾನ ಪಡೆದಿದೆ.
ನ್ಯೂ ವರ್ಲ್ಡ್ ವೆಲ್ತ್ ಸಲ್ಲಿಸಿರುವ ವರದಿಯಲ್ಲಿ ಮುಂಬೈ ವಿಶ್ವದ 12ನೇ ಶ್ರೀಮಂತ ನಗರ ಎನಿಸಿಕೊಂಡಿದೆ. ಪ್ರತೀ ನಗರಗಳಲ್ಲಿ ವಾಸಿಸುವ ಜನರ ವೈಯಕ್ತಿಕ ಸಂಪತ್ತನ್ನು ಆಧಾರವಾಗಿರಿಸಿಕೊಂಡು ಈ ವರದಿಯನ್ನು ತಯಾರಿ ಮಾಡಲಾಗಿದೆ.
ಇಲ್ಲಿನ ಜನರ ಎಲ್ಲಾ ಆಸ್ತಿಗಳನ್ನೂ ಕೂಡ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಅಲ್ಲದೇ ಬಿಲಿಯನೇರ್’ಗಳು ವಾಸವಾಗಿರುವ 10 ನಗರಗಳಲ್ಲಿಯೂ ಕೂಡ ಮುಂಬೈ ಕೂಡ ಸ್ಥಾನ ಪಡೆದಿದೆ. ಅಲ್ಲದೇ ಇಲ್ಲಿ ವಾಸಿಸುವವರ ಆದಾಯದ ಪ್ರಮಾಣದಲ್ಲಿಯೂ ಕೂಡ ಏರಿಕೆ ಕಂಡು ಬರುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.