
ನವದೆಹಲಿ: ಟೆಲಿಕಾಂ ವಲಯದಕ್ಕೆ ಜಿಯೋ ಪ್ರವೇಶದಿಂದ ಗ್ರಾಹಕರಿಗೆ ವಾರ್ಷಿಕ ಅಂದಾಜು 65000 ಕೋಟಿ ರು.ನಷ್ಟುಹಣ ಉಳಿತಾಯವಾಗುತ್ತಿದೆ ಎಂದು ಇನ್ಸಿಸ್ಟಿಟ್ಯೂಟ್ ಫಾರ್ ಕಾಂಪಿಟೇಟಿವ್‌ನೆಸ್ (ಐಎಫ್‌ಸಿ) ವರದಿ ಮಾಡಿದೆ. ಅಲ್ಲದೆ ಜಿಯೋದಿಂದ ದೇಶದ ತಲಾದಾಯ ಕೂಡ ಶೇ.5.65ರಷ್ಟುಹೆಚ್ಚಾಗಿದೆ ಎಂದು ವರದಿ ಹೇಳಿದೆ.
ಈ ಮೊದಲು 1ಜಿಬಿ ಡಾಟಾಕ್ಕೆ 152 ರು. ದರ ಇದ್ದಿದ್ದು, ಜಿಯೋ ಅದನ್ನು ಕೇವಲ 10 ರು.ಗೆ ತಂದಿದೆ. ಹೀಗೆ ಕಡಿಮೆ ದರದ ಡಾಟಾ ಗ್ರಾಹಕರಿಗೆ ವಾರ್ಷಿಕ 65000 ಕೋಟಿ ರು.ಉಳಿಸಲಿದೆ. ಜೊತೆಗೆ ಟೆಲಿಕಾಂ ಕ್ಷೇತ್ರದ ಬೆಳವಣಿಗೆ ಮಾತ್ರವಲ್ಲದೆ, ಅಂತರ್ಜಾಲ ಆರ್ಥಿಕತೆಯ ಬೆಳವಣಿಗೆಗೆ ನೆರವಾಗಿದೆ. ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಿದೆ ಎಂದು ವರದಿ ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.