ರಿಲಯನ್ಸ್ ತೆಕ್ಕೆಗೆ ಮತ್ತೊಂದು ಬೃಹತ್ ಉದ್ಯಮ?

Published : Oct 16, 2018, 03:14 PM IST
ರಿಲಯನ್ಸ್ ತೆಕ್ಕೆಗೆ ಮತ್ತೊಂದು ಬೃಹತ್ ಉದ್ಯಮ?

ಸಾರಾಂಶ

ಭಾರತದ ಬೃಹತ್ ಉದ್ಯಮ ಕ್ಷೇತ್ರವಾದ ರಿಲಯನ್ಸ್ ಇದೀಗ ಮತ್ತೊಂದು ಉದ್ಯಮವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ. 

ಮುಂಬೈ: ಕೇಬಲ್‌ ಟೀವಿ ಮತ್ತು ಅಂತರ್ಜಾಲ ಕ್ಷೇತ್ರವನ್ನು ದೊಡ್ಡದಾಗಿ ಪ್ರವೇಶಿಸಲು ಸಜ್ಜಾಗಿರುವ ರಿಲಯನ್ಸ್‌, ಇದೀಗ ಭಾರತದ ಅತಿದೊಡ್ಡ ಕೇಬಲ್‌ ಆಪರೇಟರ್‌ ಹಾಥ್‌ವೇ ಹಾಗೂ ಡಿಇಎನ್ ನಲ್ಲಿ ಶೇರು ಖರೀದಿಗೆ ಮುಂದಾಗಿದೆ.   

ಈ ಮೂಲಕ ತನ್ನ ಬ್ರಾಡ್‌ ಬಾಂಡ್‌ ಸೇವೆಯಾಗಿರುವ ಗಿಗಾಫೈಬರ್‌ ಸ್ಪೀಡ್‌ ಅನ್ನು ದೊಡ್ಡ ಮಟ್ಟದಲ್ಲಿ ಮತ್ತಷ್ಟುಹೆಚ್ಚಿಸಲು ನಿರ್ಧರಿಸಿದೆ. ಈ ಎರಡೂ ಕಂಪನಿಗಳಲ್ಲಿಯೂ ಕೂಡ ಶೇ. 25ರಷ್ಟು ಶೇರು ಖರೀದಿ ಮಾಡಲಿದೆ ಎನ್ನಲಾಗಿದೆ. 

ಹ್ಯಾಥ್‌ವೇ ಖರೀದಿಗೆ ರಿಲಯನ್ಸ್‌ ಮಾತುಕತೆ ನಡೆಸಿರುವುದು ಹೌದು ಎಂದು ಹೇಳುತ್ತವೆ ಮೂಲಗಳು. ಅಲ್ಲದೆ, ಕೇಬಲ್‌ ಟೀವಿ ಉದ್ಯಮದ ಮೇಲೆ ರಿಲಯನ್ಸ್‌ ಚಿತ್ತ ಹರಿ ಸಿರುವುದು ಇದೇ ಮೊದಲನೇ ಬಾರಿಯೇನಲ್ಲ. 

ಈ ಹಿಂದೆಯೂ ಡೆನ್‌ ನೆಟ್‌ವರ್ಕ್ ಅನ್ನು ರಿಲಯನ್ಸ್‌ ಖರೀದಿಸುವ ಸಾಧ್ಯತೆ ಬಗ್ಗೆ ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ವರದಿಯಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

BOYS NOT ALLOWED ಅಂತ ಸ್ಟಾಲ್‌ನಲ್ಲಿ ಬೋರ್ಡ್‌ ಹಾಕಿದ ಪಾನಿಪುರಿ ಭೈಯಾ: ನೆಟ್ಟಿಗರಿಂದ ತೀವ್ರ ಆಕ್ರೋಶ
ಮಾಜಿ ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ನಿಧನ