ಜಿಯೋ ಸೇವೆ ಕ್ಲಿಕ್ ಆಯ್ತು, ಈಗ ಜಿಯೋ ಕಾಯಿನ್'ನತ್ತ ಅಂಬಾನಿ ಚಿಂತನೆ

By Suvarna Web DeskFirst Published Jan 22, 2018, 9:21 AM IST
Highlights

ವಿಶ್ವಾದ್ಯಂತ ಭಾರೀ ಸದ್ದು ಮಾಡಿರುವ ಪರ್ಯಾಯ ಹಣ ಎನಿಸಿರುವ ಬಿಟ್ ಕಾಯಿನ್ ರೀತಿ ಜಿಯೋ ಕಾಯಿನ್ ಡಿಜಿಟಲ್ ಕರೆನ್ಸಿ ಸೃಷ್ಟಿಸಲು ಮುಕೇಶ್ ಸಜ್ಜಾಗುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.

ಮುಂಬೈ (ಜ.22): ವಿಶ್ವಾದ್ಯಂತ ಭಾರೀ ಸದ್ದು ಮಾಡಿರುವ ಪರ್ಯಾಯ ಹಣ ಎನಿಸಿರುವ ಬಿಟ್ ಕಾಯಿನ್ ರೀತಿ ಜಿಯೋ ಕಾಯಿನ್ ಡಿಜಿಟಲ್ ಕರೆನ್ಸಿ ಸೃಷ್ಟಿಸಲು ಮುಕೇಶ್ ಸಜ್ಜಾಗುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.

ಈಗಾಗಲೇ ಈ ಬಗ್ಗೆ ರಿಲಯನ್ಸ್‌ನ 50 ಮಂದಿ ತಂಡ ದುಡಿಯುತ್ತಿದೆ.  ಜಿಯೋ ಸೇವೆ ಆರಂಭಿಸಿದ 18 ತಿಂಗಳಲ್ಲೇ  ರಿಲಯನ್ಸ್ ಜಿಯೋ 4 ಜಿ ಮೊಬೈಲ್ ದೂರ ಸಂಪರ್ಕ ಸೇವೆಯನ್ನು ಲಾಭದ ಹಳಿಗೆ ಏರಿಸಿದ ರಿಲಯನ್ಸ್ ಸಮೂಹ ಕಂಪನಿಗಳ ಒಡೆಯ ಮುಕೇಶ್ ಅಂಬಾನಿ ಕಣ್ಣು ಇದೀಗ ಡಿಜಿಟಲ್ ಕರೆನ್ಸಿ ಕ್ಷೇತ್ರದತ್ತ ಹೊರಳಿದೆ.

ವಿಶ್ವಾದ್ಯಂತ ಬಿಟ್ ಕಾಯಿನ್ ಪ್ರಸಿದ್ಧಿ ಪಡೆದಿರುವಾಗಲೇ, ಅದೇ ರೀತಿಯ ಡಿಜಿಟಲ್ ಕರೆನ್ಸಿ ಸೃಷ್ಟಿಸಲು ಮುಕೇಶ್ ಸಜ್ಜಾಗುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.

ಈಗಾಗಲೇ ಡಿಜಿಟಲ್ ಕರೆನ್ಸಿ ತಂತ್ರಜ್ಞಾನ ತಯಾರಿಗಾಗಿ ರಿಲಯನ್ಸ್‌ನ 50 ಮಂದಿಯ ತಂಡ ದುಡಿಯುತ್ತಿದೆ. ಅದರ ಉಸ್ತುವಾರಿಯನ್ನು ಅಂಬಾನಿ ಅವರ ಹಿರಿಯ ಪುತ್ರ ಆಕಾಶ್ ಅಂಬಾನಿ ನೋಡಿಕೊಳ್ಳುತ್ತಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ಬಿಟ್ ಕಾಯಿನ್ ಬೆಲೆ ಸಾಕಷ್ಟು ವೃದ್ಧಿಯಾಗಿದೆ. ಅದೊಂದು ನಂಬಲನರ್ಹವಾದ ಕರೆನ್ಸಿ ಎಂದು ಜಾಗತಿಕ ಬ್ಯಾಂಕರ್‌'ಗಳು ಹೇಳಿದರೂ ಜನರು ಬಿಟ್ ಕಾಯಿನ್‌ಗೆ ಮುಗಿಬೀಳುತ್ತಿದ್ದಾರೆ. ಇದೊಂದು ಟೋಪಿ ಸ್ಕೀಂ. ಜನರು ಮೋಸ ಹೋದರೆ ಸರ್ಕಾರ ಜವಾಬ್ದಾರಿಯಲ್ಲ ಎಂದು ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಲೋಕಸಭೆಗೆ ತಿಳಿಸಿತ್ತು.

  

click me!