ಮುಖೇಶ್ ಅಂಬಾನಿ ಆಸ್ತಿ ಎಷ್ಟು ? ಐರೋಪ್ಯ ರಾಷ್ಟ್ರವೊಂದರ ಒಟ್ಟು ಸಂಪತ್ತಿಗೆ ಸಮ

By Web DeskFirst Published Oct 21, 2016, 7:40 AM IST
Highlights

ಭಾರತದ 4ನೇ ಅತೀ ಶ್ರೀಮಂತ ವ್ಯಕ್ತಿಯಾದ ವಿಪ್ರೋ ಅಧ್ಯಕ್ಷ ಅಜೀಮ್ ಪ್ರೇಮ್'ಜಿ ಒಟ್ಟು ಆಸ್ತಿ 1 ಲಕ್ಷ ಕೋಟಿ ರೂ.ಗೂ ಹೆಚ್ಚಿದ್ದು, ಇದು ಸಹ ಆಫ್ರಿಕಾ ಖಂಡದ ಮೊಜಾಬಿಂಕ್ ದೇಶದ ಒಟ್ಟು ಆಸ್ತಿಗೆ ಸಮನಾಗಿದೆ.

ನವದೆಹಲಿ(ಅ.21): ಭಾರತದ ನಂ 1 ಕೈಗಾರಿಕೋದ್ಯಮಿ, ವಿಶ್ವದ ಅತೀ ಹೆಚ್ಚು ಕೆಲವೇ ಶ್ರೀಮಂತರಲ್ಲಿ ಒಬ್ಬರಾಗಿರುವ ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಅಧ್ಯಕ್ಷ ಮುಖೇಶ್ ಅಂಬಾನಿ ಆಸ್ತಿ ಒಂದು ದೇಶದ ಒಟ್ಟು ಆಸ್ತಿಗೆ ಸಮನಾಗಿದೆ ಎಂದು ಫೋರ್ಬ್ಸ್ ಇಂಡಿಯಾ ವರದಿ ತಿಳಿಸಿದೆ.

ಮುಖೇಶ್ ಅಂಬಾನಿಯ ಒಟ್ಟು ಆಸ್ತಿ 1.51 ಲಕ್ಷ ಕೋಟಿ ರೂಪಾಯಿಗಳಿದ್ದು, ಇದು ಯೂರೋಪ್ ದೇಶದ 'ಎಸ್ಟೋನಿಯಾ' ದೇಶದ ಒಟ್ಟು ಆಸ್ತಿಗೆ ಸಮನಾಗಿದೆ. ಭಾರತದಲ್ಲಿ ನಂ.1 ಶ್ರೀಮಂತರು ಇವರೇ ಆಗಿದ್ದಾರೆ.

ಭಾರತದ ಅರ್ಧ ರಾಜ್ಯಗಳ ಆಸ್ತಿಗೂ ಸಮನಾಗಿದೆ ಅಂಬಾನಿ ಆಸ್ತಿ

ಭಾರತದ ರಾಜ್ಯಗಳಾದ ಚಂಡಿಘಡ,ತ್ರಿಪುರ, ಮೇಘಾಲಯ, ಪಾಂಡಿಚರಿ, ನಾಗಲ್ಯಾಂಡ್, ಮಣಿಪುರ, ಅರುಣಾಚಲ ಪ್ರದೇಶ,ಸಿಕ್ಕಿಂ, ಮಿಜೋರಾಂ, ಅಂಡಮಾನ್ ಮತ್ತು ನಿಕೋಬಾರ್ ರಾಜ್ಯಗಳ ಒಟ್ಟು ಸಂಪತ್ತಿಗೂ ಮುಖೇಶ್ ಅಂಬಾನಿ ಆಸ್ತಿ ಸಮನಾಗಿದೆ.

ಭಾರತದ 4ನೇ ಅತೀ ಶ್ರೀಮಂತ ವ್ಯಕ್ತಿಯಾದ ವಿಪ್ರೋ ಅಧ್ಯಕ್ಷ ಅಜೀಮ್ ಪ್ರೇಮ್'ಜಿ ಒಟ್ಟು ಆಸ್ತಿ 1 ಲಕ್ಷ ಕೋಟಿ ರೂ.ಗೂ ಹೆಚ್ಚಿದ್ದು, ಇದು ಸಹ ಆಫ್ರಿಕಾ ಖಂಡದ ಮೊಜಾಬಿಂಕ್ ದೇಶದ ಒಟ್ಟು ಆಸ್ತಿಗೆ ಸಮನಾಗಿದೆ.

ಸನ್ ಫಾರ್ಮಸಿಯ ದಿಲೀಪ್ ಸಾಂಘವಿ ಭಾರತದ ಎರಡನೇ ಅತೀ ಶ್ರೀಮಂತ ವ್ಯಕ್ತಿಯಾಗಿದ್ದು, 11 ಲಕ್ಷ ಕೋಟಿ ರೂಪಾಯಿಗಳಷ್ಟಿದೆ. ಹಿಂದೂಜಾ ಕುಟುಂಬವು ಮೂರನೇ ಸ್ಥಾನದಲ್ಲಿದ್ದು ಇವರ ಬಳಿ 10 ಲಕ್ಷ ಕೋಟಿಯಷ್ಟು ಆಸ್ತಿಯಿದೆ.  ಐದನೇ ಸ್ಥಾನದಲ್ಲಿ ಪಲ್ಲೋಂಜಿ ಮಿಸ್ತ್ರಿ ಅವರಿದ್ದು 89 ಸಾವಿರ ಕೋಟಿ ರೂಪಾಯಿ ಆಸ್ತಿಯಿದೆ ಎಂದು ಫೋರ್ಬ್ಸ್ ತನ್ನ ವರದಿಯಲ್ಲಿ ತಿಳಿಸಿದೆ.

18 ಬಾರಿ ಒಲಿಂಪಿಕ್ ನಡೆಸಬಹುದು

ಭಾರತದ ಅತೀ ಶ್ರೀಮಂತ ಐವರು ಶ್ರೀಮಂತರ ಬಳಿಯಿರುವ ಆಸ್ತಿ ಒಟ್ಟು 5.60 ಲಕ್ಷ ಕೋಟಿಗೂ ಹೆಚ್ಚಿದ್ದು,ಈ ಹಣದಿಂದ 1,230 ಬಾರಿ ಮಂಗಳ ಗ್ರಹಕ್ಕೆ ಉಪಗ್ರಹ ಉಡಾವಣೆ ಮಾಡಬಹುದು. ಅಲ್ಲದೆ 18 ಬಾರಿ 2016ರಂತೆ ರಿಯೋ ಒಲಿಂಪಿಕ್ಸ್ ಆಯೋಜಿಸಬಹುದು. ಈ ಬಾರಿ ಭಾರತದ 100 ಶ್ರೀಮಂತರ ಆಸ್ತಿ ಕಳೆದ ವರ್ಷಕ್ಕಿಂತ ಶೇ.10 ರಷ್ಟು ಏರಿಕೆ ಕಂಡಿದೆ.

click me!