
ಬೆಂಗಳೂರು(ಅ.21):ಪ್ಲೇವಿನ್ ಒಂದಂಕಿ ಲಾಟರಿಗಳಂತಾ ಜೂಜಾಟಗಳು ರಾಜ್ಯದಲ್ಲಿ ಬ್ಯಾನ್ ಆಗಿವೆ. ಹೀಗಾಗಿ ಕರ್ನಾಟಕದಲ್ಲಿ ಈ ಲಾಟರಿಗಳ ದಂಧೆ ನಡೆಯುವುದಿಲ್ಲ ಅಂತಂದುಕೊಂಡರೆ ಸುವರ್ಣ ನ್ಯೂಸ್ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾದ ಈ ಕರಾಳ ದಂಧೆಯ ಕುರಿತಾದ ಮಾಹಿತಿ ಮಿಸ್ ಮಾಡಿಕೊಳ್ತೀರಾ. ಬೆಂಗಳೂರಿನಲ್ಲಿ ಎಲ್ಲ ನಿಂತಿದ್ದರೂ ಮಟ್ಕಾ ದಂಧೆ ನಡೆಯುವ ಸಾವಿರಾರು ಸ್ಥಳಗಳಿದ್ದು, ಇವುಗಳ ಪೈಕಿ ಒಂದು ರಹಸ್ಯ ಕಾರ್ಯಾಚರಣೆಯ ಮೂಲಕ ಬಯಲಾಗಿದೆ.
ಮಟ್ಕಾ ದಂಧೆ ಸಾಮಾನ್ಯವಾಗಿ ಹಳ್ಳಿಗಳಲ್ಲಿ ಇಂದಿಗೂ ಅಲ್ಲಲ್ಲಿ ನಡೆಯುತ್ತದೆ. ಆದರೆ, ಅದೇ ಮಟ್ಕಾ ದಂಧೆಕೋರರು ಸಿಲಿಕಾನ್ ಸಿಟಿಯಲ್ಲೂ ತಮ್ಮ ಕಾರ್ಯ ಪ್ರವೃತ್ತಿ ಇಂದಿಗೂ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ ಎಂದರೆ ನಿಜಕ್ಕೂ ಆಶ್ಚರ್ಯಪಡುವಂತಹದ್ದು. ಇನ್ನು ಈ ಕರಾಳ ದಂಧೆಯ ಕುರಿತು ಪೊಲೀಸರಿಗೆ ತಿಳಿದಿದ್ದರೂ ಸುಮ್ಮನಿದ್ದಾರೆಂಬುವುದು ನಿಜಕ್ಕೂ ವಿಪರ್ಯಾಸ
ಬೆಂಗಳೂರಿನ ಬಸವೇಶ್ವರನಗರ ಠಾಣೆ ಪೊಲೀಸ್ ವ್ಯಾಪ್ತಿಯ ಕಮಲಾನಗರದ ಗಲ್ಲಿಯೊಂದರ ಮನೆಯಲ್ಲಿ ಮಟ್ಕಾ ದಂಧೆ ನಡೆಯುತ್ತಿದ್ದು. ಆ ಮನೆ ಮುಂದೆ ಜನ ಒಬ್ಬನಿಗಾಗಿ ಕಾಯುತ್ತಿದ್ದರು. ಆ ಮನೆಯೊಳಗೆ ನಮ್ಮ ರಹಸ್ಯ ಕಾರ್ಯಾಚರಣೆಯ ತಂಡ ನುಗ್ಗಿದ್ದು, ಈ ವೇಳೆ ಅವರ ಅಸಲಿಯಾಟ ಬಯಲಾಗಿದೆ...!
ಅಲ್ಲಿ ನಡೆಯುತ್ತಿದ್ದದ್ದು, ಪೇಪರ್ ನೋಡಿ ಟ್ಯಾಲಿ ಮಾಡೋ ಮಟ್ಕಾ ಅಂಕಿ ಜೂಜು. ಹತ್ತು ರೂಪಾಯಿಗೆ 700 ರೂಪಾಯಿ ಬರುವ ಈ ಆಟದಲ್ಲಿ ಅದೃಷ್ಟ ಮಾತ್ರ ಇರಬೇಕಂತೆ. ಇನ್ನು ಈ ಮಟ್ಕಾ ದಂಧೆಯ ಮಾಸ್ಟರ್ ಶಾಂತರಾಮ್!. ಈ ದಂಧೆಯಲ್ಲಿ ಮನೆಯ ಹೆಣ್ಮಕ್ಕಳೂ ಸಕ್ರಿಯರಾಗಿದ್ದಾರೆ.
40 ವರ್ಷಗಳಿಂದ ಈ ಬಿಸಿನೆಸ್ ಮಾಡಿಕೊಂಡು ಬರುತ್ತಿದ್ದೇವೆಂದು ದಂಧೆಕೋರರೇ ಹೇಳಿಕೊಂಡಿದ್ದಾರೆ. ಹೀಗಾಗಿ ಇಷ್ಟು ವರ್ಷವಾದರೂ, ಈ ಧಂಧೆಗೆ ಬ್ರೇಕ್ ಹಾಕುವವರೇ ಇರಲಿಲ್ವಾ ಎನ್ನುವ ಪ್ರಶ್ನೆ ಕೂಡಾ ಕಾಡುತ್ತದೆ. ಬಸವೇಶ್ವರನಗರ ಠಾಣೆ ಪೊಲೀಸರಿಗೆ ಇದು ಗೊತ್ತಿದೆ. ಆದರೆ ಕಾಸು ಸಿಕ್ಕಮೇಲೆ ಕೆಮ್ತಾರ ನಮ್ಮ ಪೊಲೀಸರು ಅಂತಿದ್ದಾರೆ ದಂಧೆ ನಿರತರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.