3.4 ಲಕ್ಷ ಕೋಟಿ ರೂ. ಒಡೆಯ ಮುಕೇಶ್‌ ದೇಶದ ನಂ.1 ಸಿರಿವಂತ

By Web DeskFirst Published Oct 5, 2018, 9:26 AM IST
Highlights

ದೇಶದ ಸಿರಿವಂತ ಮುಕೇಶ್ ಅಂಬಾನಿ ಮತ್ತೆ ನಂ.ಶ್ರೀಮಂತರಾಗಿಯೇ ಹೊರಹೊಮ್ಮಿದ್ದಾರೆ. ಸತತವಾಗಿ ಕಳೆದ 11 ವರ್ಷಗಳಿಂದ ಮುಕೇಶ್ ಭಾರತದ ಅತ್ಯಂತ ಸಿರವಂತ ಉದ್ಯಮಿ.

ಮುಕೇಶ್‌ ಅಂಬಾನಿ 3.4 ಲಕ್ಷ ಕೋಟಿ ರೂ. ಅಜೀಂ ಪ್ರೇಮ್‌ಜಿ 1.51 ಲಕ್ಷ ಕೋಟಿ ರೂ. ಲಕ್ಷ್ಮೇ ಮಿತ್ತಲ್‌ 1.31 ಲಕ್ಷ ಕೋಟಿ ರೂ.

ನವದೆಹಲಿ: ಅಮೆರಿಕದ ಫೋಬ್ಸ್‌ರ್‍ ನಿಯತಕಾಲಿಕೆ ಭಾರತದ ಟಾಪ್‌ 100 ಶ್ರೀಮಂತರ ಪಟ್ಟಿಬಿಡುಗಡೆ ಮಾಡಿದೆ. ಇದರಲ್ಲಿ 3.4 ಲಕ್ಷ ಕೋಟಿ ರು. ಸಂಪತ್ತಿನೊಂದಿಗೆ ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ ನಂ.1 ಸ್ಥಾನ ಪಡೆದಿದ್ದಾರೆ.

ಕಳೆದ ಸಲಕ್ಕಿಂತ ಅವರ ಆಸ್ತಿ ಮೌಲ್ಯ 67 ಸಾವಿರ ಕೋಟಿ ರು. ಹೆಚ್ಚಾಗಿದೆ. 1.51 ಲಕ್ಷ ಕೋಟಿ ರು.ಸಂಪತ್ತಿನೊಂದಿಗೆ ಬೆಂಗಳೂರಿನ ವಿಪ್ರೋ ಸಂಸ್ಥಾಪಕ ಅಜೀಂ 2ನೇ ಸ್ಥಾನ ಪಡೆದಿದ್ದಾರೆ. 1.31 ಲಕ್ಷ ಕೋಟಿ ರು. ಸಂಪತ್ತಿನೊಂದಿಗೆ ಆರ್ಸೆಲರ್‌ ಮಿತ್ತಲ್‌ನ ಲಕ್ಷ್ಮೇ ಮಿತ್ತಲ್‌ 3ನೇ ಸ್ಥಾನ ಪಡೆದಿದ್ದಾರೆ. ನಂತರದ ಸ್ಥಾನಗಳಲ್ಲಿ ಹಿಂದೂಜಾ ಬ್ರದರ್ಸ್‌ (1.29 ಲಕ್ಷ ಕೋಟಿ ರು.), ಪಲ್ಲೋನ್‌ಜಿ ಮಿಸ್ತ್ರಿ (1.13 ಲಕ್ಷ ಕೋಟಿ ರು.), ಶಿವ ನಾಡಾರ್‌ (1.05 ಲಕ್ಷ ಕೋಟಿ ರು.), ಗೋದ್ರೆಜ್‌ ಕುಟುಂಬ (1 ಲಕ್ಷ ಕೋಟಿ ರು.), ದಿಲೀಪ್‌ ಸಾಂಘ್ವಿ (90 ಸಾವಿರ ಕೋಟಿ ರು.) ಹಾಗೂ ಗೌತಮ್‌ ಅದಾನಿ (85 ಸಾವಿರ ಕೋಟಿ ರು.) ಇದ್ದಾರೆ. ಬಯೋಕಾನ್‌ ಮುಖ್ಯಸ್ಥೆ ಕಿರಣ್‌ ಮಜುಂದಾರ್‌ ಶಾ ಸೇರಿ ಟಾಪ್‌ 100ರಲ್ಲಿ 4 ಮಹಿಳೆಯರು ಸ್ಥಾನ ಪಡೆದಿದ್ದಾರೆ.

ಅಂಬಾನಿ ವರ್ಷದ ವೇತನವೆಷ್ಟು?

ದೇಶದ ಟಾಪ್‌ 100 ಶೀಮಂತರಲ್ಲಿ 6 ಕನ್ನಡಿಗರು

ಟಾಪ್‌-100 ಶ್ರೀಮಂತರ ಪಟ್ಟಿಯಲ್ಲಿ 6 ಕನ್ನಡಿಗರು ಸ್ಥಾನ ಪಡೆದಿದ್ದಾರೆ. ಈ ಪೈಕಿ 1.51 ಲಕ್ಷ ಕೋಟಿ ರು. ಸಂಪತ್ತಿನೊಂದಿಗೆ ಅಜೀಂ ಪ್ರೇಮ್‌ಜಿ ಶ್ರೀಮಂತ ಕನ್ನಡಿಗರಾಗಿ ಹೊರಹೊಮ್ಮಿದ್ದಾರೆ. ನಂತರದ ಸ್ಥಾನದಲ್ಲಿರುವ ದಕ್ಷಿಣ ಕನ್ನಡ ಮೂಲದ ದುಬೈ ಉದ್ಯಮಿ ಬಿ.ಆರ್‌. ಶೆಟ್ಟಿ27 ಸಾವಿರ ಕೋಟಿ ರುಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಬೆಂಗಳೂರಿನ ಬಯೋಕಾನ್‌ ಮುಖ್ಯಸ್ಥೆ ಕಿರಣ್‌ ಮಜುಂದಾರ್‌ ಶಾ 26 ಸಾವಿರ ಕೋಟಿ ರು. ಆಸ್ತಿ ಹೊಂದಿದ್ದು, ಮೂರನೇ ಸ್ಥಾನ ಅಲಂಕರಿಸಿದ್ದಾರೆ. ಇನ್ನು 4ನೇ ಸ್ಥಾನದಲ್ಲಿ ಇಸ್ಫೋಸಿಸ್‌ ಸಂಸ್ಥಾಪಕ ಎನ್‌.ಆರ್‌. ನಾರಾಯಣಮೂರ್ತಿ 16 ಸಾವಿರ ಕೋಟಿ, 5ನೇ ಸ್ಥಾನದಲ್ಲಿ ಇಸ್ಫೋಸಿಸ್‌ ಕಾರ್ಯನಿರ್ವಾಹಕೇತರ ಅಧ್ಯಕ್ಷ ನಂದನ್‌ ನಿಲೇಕಣಿ 14 ಸಾವಿರ ಕೋಟಿ ಹಾಗೂ 6ನೇ ಸ್ಥಾನದಲ್ಲಿ ಮಣಿಪಾಲ ಮೂಲದ ಉದ್ಯಮಿ ರಂಜನ್‌ ಪೈ 13 ಸಾವಿರ ಕೋಟಿ ರುಪಾಯಿ ಮೌಲ್ಯದ ಆಸ್ತಿ ದಾಖಲಿಸಿದ್ದಾರೆ.

ಮುಕೇಶ್ ಡ್ರೈವರ್ ವೇತನ ಎಷ್ಟು?

ಟಾಪ್‌ ಶ್ರೀಮಂತ ಕನ್ನಡಿಗರು ಧನಿಕರು ಆಸ್ತಿ ಮೌಲ್ಯ (ರು.ಗಳಲ್ಲಿ)

ಅಜೀಂ ಪ್ರೇಮ್‌ಜಿ 1.51 ಲಕ್ಷ ಕೋಟಿ

ಬಿ.ಆರ್‌. ಶೆಟ್ಟಿ 27 ಸಾವಿರ ಕೋಟಿ

ಕಿರಣ್‌ ಮಜುಂದಾರ್‌ ಶಾ 26 ಸಾವಿರ ಕೋಟಿ

ಎನ್‌.ಆರ್‌. ನಾರಾಯಣಮೂರ್ತಿ 16 ಸಾವಿರ ಕೋಟಿ

ನಂದನ್‌ ನಿಲೇಕಣಿ 14 ಸಾವಿರ ಕೋಟಿ

ರಂಜನ್‌ ಪೈ 13 ಸಾವಿರ ಕೋಟಿ

ಶೇಕಡಾವಾರು ಏರಿಕೆಯಲ್ಲಿ ಶಾ ನಂ.1

ಬೆಂಗಳೂರಿನ ಬಯೋಕಾನ್‌ ಮುಖ್ಯಸ್ಥೆ ಕಿರಣ್‌ ಮಜುಂದಾರ್‌ ಶಾ ಅವರು ಶೇಕಡಾವಾರು ಆಸ್ತಿ ಏರಿಕೆಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ಅವರ ಆಸ್ತಿ ಮೌಲ್ಯ ಕಳೆದ ಸಲಕ್ಕಿಂತ ಶೇ.66.7ರಷ್ಟು ಏರಿದೆ. ಮಜುಂದಾರ್‌ ಆಸ್ತಿ ಸುಮಾರು 26 ಸಾವಿರ ಕೋಟಿ ರುಪಾಯಿ ಇದೆ. ಅವರು ಟಾಪ್‌-100ರಲ್ಲಿ 39ನೇ ಸ್ಥಾನ ಪಡೆದಿದ್ದಾರೆ.

click me!