
ಪುಣೆ(ಏ.22): ಭಾರತ ತಂಡದ ಮಾಜಿ ನಾಯಕ ಹಾಗೂ ಸ್ಟಾರ್ ಆಟಗಾರ ಮಹೇಂದ್ರ ಸಿಂಗ್ ಧೋನಿ ಕೊನೆಯ ಎಸತದಲ್ಲಿ ಎರಡು ರನ್ ಬೇಕಿದ್ದಾಗ ಬೌಂಡರಿ ಹೊಡೆಯುವ ಮೂಲಕ ವಿನ್ನಿಂಗ್ ಬ್ಯಾಟ್ಸ್'ಮೆನ್ ಆಗಿ ಮಿಂಚಿದರು. ಈ ಮೂಲಕ ರೈಸಿಂಗ್ ಪುಣೆ ಸೂಪರ್'ಜೈಂಟ್ ಹೈದರಾಬಾದ್ ವಿರುದ್ಧ 6 ವಿಕೇಟ್ ಜಯಗಳಿಸಿತು.
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ'ನಲ್ಲಿ ಐಪಿಎಲ್ ಆವೃತ್ತಿಯ 24 ಪಂದ್ಯದಲ್ಲಿ ಪುಣೆ ಹಾಗೂ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ನಾಯಕ ಸ್ಟೀವನ್ ಸ್ಮಿತ್ ಫೀಲ್ಡಿಂಗ್ ಆಯ್ದು ಕೊಂಡರು. ಬ್ಯಾಟಿಂಗ್ ಆರಂಭಿಸಿದ ಡೇವಿಡ್ ವಾರ್ನರ್ ನೇತೃತ್ವದ ಸನ್ ರೈಸರ್ಸ್ ತಂಡಕ್ಕೆ ಸ್ವತಃ ನಾಯಕ ವಾರ್ನರ್(43,40 ಎಸೆತ, 1 ಸಿಕ್ಸ್'ರ್ ಹಾಗೂ 3 ಬೌಂಡರಿ) ಬಿರುಸಿನ ಆಟಗಾರರಾದ ಶಿಖರ್ ಧವನ್ (30, 29 ಎಸೆತ, 5 ಬೌಂಡರಿ) ಹೇನ್ರಿಕ್ಯೂಸ್(55, 28 ಎಸೆತ, 2 ಸಿಕ್ಸ್'ರ್ ಹಾಗೂ 6 ಬೌಂಡರಿ) ಹಾಗೂ ಕೇನ್ ವಿಲಿಯಮ್ಸ್' 21 (14 ಎಸೆತ,1 ಸಿಕ್ಸ್'ರ್ ಹಾಗೂ 1 ಬೌಂಡರಿ) ರನ್ ಗಳಿಸುವ ಮೂಲಕ ತಂಡದ ಮೊತ್ತ 176/3 ಗಳಿಸಲು ನೆರವಾದರು.
ಈ ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಪುಣೆ ತಂಡ ಆರಂಭದಲ್ಲಿಯೇ ಬಿರುಸಿನ ಬ್ಯಾಟ್ಸ್'ಮೆನ್ ರಹಾನೆ ಅವರ ವಿಕೇಟ್ ಕಳೆದುಕೊಂಡಿತು. ತ್ರಿಪಾಟಿ(59,41 ಎಸೆತ, 3 ಸಿಕ್ಸ್'ರ್, 6 ಬೌಂಡರಿ ) ಹಾಗೂ ನಾಯಕ ಸ್ಟೀವನ್ ಸ್ಮಿತ್ (27, 21 ಎಸೆತ 2 ಸಿಕ್ಸ್'ರ್ ಹಾಗೂ 1 ಬೌಂಡರಿ) 10.5 ಓವರ್'ಗಳಲ್ಲಿ 2ನೇ ವಿಕೇಟ್'ಗೆ 87 ರನ್ ಪೇರಿಸಿದರು.ಸ್ಪಿತ್ ಔಟಾದ ನಂತರ ಆಟ ಮುಂದುವರಿಸಿದ ಮಹೇಂದ್ರ ಸಿಂಗ್ ಧೋನಿ ಬಿರುಸಿನ ಆಟವಾಡಿ(61, 34 ಎಸೆತ, 5 ಬೌಂಡರಿ, 3 ಸಿಕ್ಸ್'ರ್) ಕೊನೆಯವರೆಗೂ ಆಟವಾಡಿ ಟೀಂ ಗೆಲುವಿಗೆ ಕಾರಣಕರ್ತರಾದರು.
ಸ್ಕೋರ್
ಸನ್ ರೈಸರ್ಸ್ ಹೈದರಾಬಾದ್ : 176/3 (20/20 )
ಪುಣೆ ಸೂಪರ್ ಜೈಟ್ಸ್: 179/4 (20.0/20 )
ಪಂದ್ಯ ಶ್ರೇಷ್ಠ: ಮಹೇಂದ್ರ ಸಿಂಗ್ ಧೋನಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.