ಆಸ್ಕರ್ ಫರ್ನಾಂಡಿಸ್ ಒಂದು ವರ್ಷದಲ್ಲಿ ಪಡೆದ ಟಿಎಡಿಎ ಬರೋಬ್ಬರಿ 60 ಲಕ್ಷ..!

By Suvarna Web DeskFirst Published Sep 8, 2017, 12:36 PM IST
Highlights

ಕರ್ನಾಟಕದ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ 59,97,998 ರುಪಾಯಿ ಟಿಎಡಿಎ ಪಡೆದುಕೊಂಡಿದಾರೆ.

ನವದೆಹಲಿ(ಸೆ.08): ಸಂಸದರು ಪ್ರಯಾಣಭತ್ಯೆ ಮತ್ತು ತುಟ್ಟಿಭತ್ಯೆ (ಟಿಎ-ಡಿಎ) ಹೆಸರಿನಲ್ಲಿ ಸರ್ಕಾರದ ಬೊಕ್ಕಸಕ್ಕೆ ಭಾರಿ ಹೊರೆ ಮಾಡಿ ದಾರೆ. 2016-17 ವಿತ್ತೀಯ ವರ್ಷದಲ್ಲಿ 95 ಕೋಟಿ ರು. ಹೊರೆ ಮಾಡಿದ್ದಾರೆ ಎಂದು ಮಾಹಿತಿ ಹಕ್ಕು ಅಡಿ ಸಲ್ಲಿಸಿದ್ದ ಅರ್ಜಿಯಿಂದ ಬೆಳಕಿಗೆ ಬಂದಿದೆ.

ಈ ಪೈಕಿ ಕರ್ನಾಟಕದ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ 59,97,998 ರುಪಾಯಿ ಟಿಎಡಿಎ ಪಡೆದುಕೊಂಡಿದಾರೆ.

ಆಸ್ಕರ್ ಅವರು ಕೊನೇ ಕ್ಷಣದಲ್ಲಿ ‘ಸರ್ಜ್ ಪ್ರೈಸಿಂಗ್’ ಅಡಿ ದಿಲ್ಲಿಯಿಂದ ಬೆಂಗಳೂರಿಗೆ ವಿಮಾನ ಟಿಕೆಟ್ ಬುಕ್ ಮಾಡಿದ್ದು, ಒಂದೇ ಟಿಕೆಟ್'ಗೆ 69,218 ರುಪಾಯಿ ನೀಡಿ ಸರ್ಕಾರದ ಬೊಕ್ಕಸಕ್ಕೆ ಭಾರಿ ಹೊರೆ ಮಾಡಿದ್ದಾರೆ ಎಂದು ಮಾಹಿತಿ ಹಕ್ಕಿನಡಿ ಮಾಹಿತಿ ಲಭ್ಯವಾಗಿದೆ ಎಂದು ‘ಟೈಮ್ಸ್ ನೌ’ ವರದಿ ಮಾಡಿದೆ.

ಇನ್ನು ಕರ್ನಾಟಕದ ಕಾಂಗ್ರೆಸ್ ಉಸ್ತುವಾರಿ, ಕೇರಳ ಸಂಸದ ಕೆ.ಸಿ.ವೇಣುಗೋಪಾಲ್ ಅವರೂ ಒಂದು ವರ್ಷದಲ್ಲಿ 32 ಲಕ್ಷ ರು.ಗಳನ್ನು ಟಿಎಡಿಎ ರೂಪದಲ್ಲಿ ಪಡೆದಿದ್ದಾರೆ.

click me!