
ಮಂಗಳೂರು: ಇತ್ತೀಚೆಗಷ್ಟೇ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಶಾಲೆಗಳಿಗೆ ರಾಜ್ಯ ಸರ್ಕಾರ ಅನುದಾನ ಕಡಿತ ಮಾಡಿತ್ತು. ಈ ಹಿನ್ನೆಲೆಯಲ್ಲಿ ಕಲ್ಲಡ್ಕ ಭಟ್ ಅಭಿಮಾನಿಗಳು ಮತ್ತು ಬಿಜೆಪಿಯು ಭಿಕ್ಷಾಂದೇಹಿ ಎಂಬ ಆಂದೋಲನ ಮೂಲಕ ಭಟ್ಟರ ಶಾಲೆಯ ಮಕ್ಕಳಿಗೆ ನೆರವಿನ ಹಸ್ತ ಚಾಚುವ ಕೆಲಸ ಮಾಡ್ತಿದ್ದಾರೆ.
ಈ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಅನುದಾನ ಕಡಿತದ ಬೆನ್ನಲ್ಲೇ ಇದೀಗ ನೆರವಿನ ಮಹಾಪೂರವೇ ಹರಿದು ಬರ್ತಾ ಇದೆ, ಅದ್ರಲ್ಲೂ ಸಾಮಾಜಿಕ ತಾಣಗಳ ಮೂಲಕ ಆರಂಭವಾಗಿರೋ ಭಿಕ್ಷಾಂದೇಹಿ ಅಭಿಯಾನಕ್ಕೆ ಭಾರೀ ಜನ ಬೆಂಬಲ ವ್ಯಕ್ತವಾಗಿದೆ.
ಹೀಗಾಗಿ ಲಕ್ಷಾಂತರ ರೂ. ಹಣದ ಜೊತೆಗೆ ಕೆ.ಜಿ.ಗಟ್ಟಲೇ ಅಕ್ಕಿ ಮತ್ತು ಅಡುಗೆ ಸಾಮಾಗ್ರಿಗಳು ಕಲ್ಲಡ್ಕ ಶಾಲೆಗೆ ನೆರವಿನ ರೂಪದಲ್ಲಿ ಬಂದು ಸೇರ್ತಿದೆ.
ಸದ್ಯ ಆಂದೋಲನ ರೂಪಿಸಿದವರು ಮುಂದಿನ ಎರಡು ವರ್ಷಗಳಿಗೆ ಆಗುವಷ್ಟು ಹಣವನ್ನು ಸಂಗ್ರಹಿಸುವ ಗುರಿ ಹೊಂದಿದ್ದಾರೆ. ಅದ್ರಂತೆ 80 ಲಕ್ಷ ನಗದು ಮತ್ತು ಒಂದಷ್ಟು ಅಕ್ಕಿ ಸಂಗ್ರಹದ ಗುರಿ ಹೊಂದಲಾಗಿದೆ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.