ದಾಳಿ ಮಾಡಿದ್ದೇ ತಪ್ಪೆಂದವರ ಝಾಡಿಸಿದ ಸಂಸದ ರಾಜೀವ್ ಚಂದ್ರಶೇಖರ್

Published : Feb 27, 2019, 09:36 PM ISTUpdated : Feb 27, 2019, 09:45 PM IST
ದಾಳಿ ಮಾಡಿದ್ದೇ ತಪ್ಪೆಂದವರ ಝಾಡಿಸಿದ ಸಂಸದ ರಾಜೀವ್ ಚಂದ್ರಶೇಖರ್

ಸಾರಾಂಶ

ಇಡೀ ದೇಶ ಸೈನಿಕರು ಮತ್ತು ರಾಷ್ಟ್ರದ ಸ್ಥಿತಿ ಬಗ್ಗೆ ಚಿಂತನೆ ಮಾಡುತ್ತಿದ್ದರೆ ಈ ಪಕ್ಷದ ಮುಖಂಡ ನೀಡುತ್ತಿರುವ ಹೇಳಿಕೆಗಳೆ ಬೇರೆಯಾಗಿದೆ. ದೇಶ ವಿರೋಧಿ ಹೇಳಿಕೆ ನೀಡಿದವರಿಗೆ ಸಂಸದ ರಾಜೀವ್ ಚಂದ್ರೆಶೇಖರ್ ಸರಿಯಾದ ತಿರುಗೇಟು ನೀಡಿದ್ದಾರೆ.

ನವದೆಹಲಿ[ಫೆ. 27] ಪಾಕಿಸ್ತಾನಕ್ಕೆ ನುಗ್ಗಿ ಜೈಶ್ ಉಗ್ರ ಸಂಘಟನೆಗಳ ಅಡಗುತಾಣಗಳ ಮೇಲೆ ಭಾರತದ ವಾಯು ಸೇನೆ ದಾಳಿ ಮಾಡಿದ್ದನ್ನೇ ತಪ್ಪು ಎಂದು ಹೇಳಿದ್ದ  ಉತ್ತರ ಪ್ರದೇಶದ ಮಾಜಿ ಸಚಿವ , ಸಮಾಜವಾದಿ ಪಕ್ಷದ ಹಿರಿಯ ನಾಯಕ ವಿನೋದ್ ಕುಮಾರ್ ಅವರಿಗೆ ಸಂಸದ ರಾಜೀವ್ ಚಂದ್ರಶೇಖರ್ ತಿರುಗೇಟು ನೀಡಿದ್ದಾರೆ.

‘ಯಾವ ಸಂದರ್ಭದಲ್ಲಿ ಭಾರತದ  ಮಹಿಳೆ, ಮಕ್ಕಳು ಆದಿಯಾಗಿ ಪ್ರತಿಯೊಬ್ಬರು ದೇಶಕ್ಕೆ ಬೆಂಬಲ ನೀಡುತ್ತಾ, ಉಗ್ರರ ವಿರುದ್ಧ ದನಿ ಎತ್ತುತ್ತಿದ್ದರೆ ನೀವು ಮಾತ್ರ ವೋಟ್ ಬ್ಯಾಂಕ್ ರಾಜಕಾರಣದಲ್ಲಿ ಮುಳುಗದ್ದಿರೋ ಅಥವಾ ಮಾನಸಿಕವಾಗಿ ಸ್ಥಿಮಿತ ಕಳೆದುಕೊಂಡಿದ್ದಿರೋ ಅಥವಾ ಮಾರ್ಕಿಸ್ಟ್ ವಾದದ ಹೆಸರಿನಲ್ಲಿ ಕೀಳು ಮಟ್ಟಕ್ಕೆ ಇಳಿದಿರೋ....'

ಪೈಲೆಟ್ ಮಾಹಿತಿ ನೀಡಿ: ಪಾಕ್ ಗೆ ಸಮನ್ಸ್ ಜಾರಿ!

ಹೌದು.. ಈ ರೀತಿ ಟ್ವೀಟ್ ಮಾಡಿರುವ ಸಂಸದ ರಾಜೀವ್ ಚಂದ್ರಶೇಖರ್ ದೇಶ ವಿರೋಧಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಪಿಲ್ ಸಿಬಲ್, ಅಖಿಲೇಶ್ ಯಾದವ್ ಅಂಥವರನ್ನು ಹಿಂದಕ್ಕೆ ಹಾಕುವಂತಹ ಹೇಳಿಕೆ ಇದು. ಇಂಥವರನ್ನು ಬೇರು ಸಮೇತ ಕಿತ್ತೆಸೆಯುವ ಕಾಲ ಬಂದಿದೆ ಎಂದು ಟ್ವೀಟ್ ಮಾಡಿದ್ದಾರೆ. ತಮ್ಮ ಟ್ವೀಟ್ ಮೂಲಕ ಚಾಟಿ ಬೀಸಿದ್ದು ಟ್ವೀಟ್ ಗೆ ಅನೇಕ ಪ್ರತಿಕ್ರಿಯೆಗಳು ಬಂದಿವೆ.

ಲೋಕಸಭಾ ಚುನಾವಣೆಯನ್ನು ಗೆಲ್ಲಲು ಬಿಜೆಪಿ ಉದ್ದೇಶ ಪೂರ್ವಕವಾಗಿ ದಾಳಿ ಮಾಡಿದೆ ಎಂದು ಹೇಳಿಕೆ ನೀಡಿದ್ದ ಸಿಪಿಐಎಂ ಮುಖಂಡ ಕೋಡಿಯೇರಿ ಬಾಲಕೃಷ್ಣನ್ ಅವರನ್ನು ರಾಜೀವ್ ತರಾಟೆಗೆ ತೆಗೆದುಕೊಂಡಿದ್ದಾರೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಶಿಕ್ಷಕನಿಗೆ ಪೋಷಕರಿಂದ ಧರ್ಮದೇಟು!
ವೇದಿಕೆಯಲ್ಲಿ ವಧು ಸದ್ದಿಲ್ಲದೆ ಮಾಡಿದ ಅದೊಂದು ಕೆಲಸ ಇಂಟರ್‌ನೆಟ್‌ನಲ್ಲಿ ಫುಲ್ ವೈರಲ್ ಆಯ್ತು..