ಚುನಾವಣೆ ಮುಗಿದರೂ ರಿಲ್ಯಾಕ್ಸ್ ಮಾಡದ ಪ್ರತಾಪಸಿಂಹ..!

By Web DeskFirst Published Apr 25, 2019, 10:39 AM IST
Highlights

ಲೋಕಸಭಾ ಚುನಾವಣೆ ಮುಕ್ತಾಯವಾಗಿದ್ದು, ಅಭ್ಯರ್ಥಿಗಳೆಲ್ಲಾ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ. ಆದರೆ ಸಂಸದ ಪ್ರತಾಪ್ ಸಿಂಹ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. 

ಮೈಸೂರು : ಲೋಕಸಭಾ ಚುನಾವಣೆ ಮುಕ್ತಾಯವಾಗಿದ್ದು, ಇದೇ ವೇಳೆ ಸಂಸದರ ಪ್ರತಾಪ್ ಸಿಂಹ ಮಳೆ ಅನಾಹುತದಿಂದ ತತ್ತರಿಸಿದ ಪ್ರದೇಶಗಳಿಗೆ ತೆರಳಿ ಜನರ ಸಹಾಯಕ್ಕೆ ನಿಂತಿದ್ದಾರೆ. 

ಫಲಿತಾಂಶದ ಬಗ್ಗೆ ತಲೆಕೆಡಿಸಿಕೊಳ್ಳದೆ ಜನರ ಸಂಕಷ್ಟಕ್ಕೆ ಸ್ಪಂದಿಸಿ ಔದಾರ್ಯ ಮೆರೆಯುತ್ತಿದ್ದಾರೆ. 

ಮೈಸೂರಿನ ಹುಣಸೂರು, ಪಿರಿಯಾಪಟ್ಟಣ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗಿದ್ದು, ಮಳೆಯ ಆರ್ಭಟಕ್ಕೆ ವೃದ್ಧೆಯೋರ್ವರು ಬಲಿಯಾಗಿದ್ದು, ಹಲವಾರು ಮನೆಗಳ ಛಾವಣಿ ಹಾರಿವೆ.

ಅನಾಹುತದಿಂದ ತತ್ತರಿಸಿದ ಮನೆಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಿದ್ದಾರೆ. ಇದೇ ವೇಳೆ ಸ್ಥಳೀಯ ತಹಶೀಲ್ದಾರ್ ಗಮನಕ್ಕೆ ತಂದು ರಾಷ್ಟ್ರೀಯ ವಿಪತ್ತು ಪರಿಹಾರ ‌ನಿಧಿಯಿಂದ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.

ಚುನಾವಣೆ ಮುಗಿದರೂ ಕೂಡ ರಿಲ್ಯಾಕ್ಸ್ ಮಾಡದೇ ತೊಂದರೆಗೊಳಗಾದ ಜನರನ್ನು ಭೇಟಿ ಮಾಡಿ ಸಮಸ್ಯೆ ಆಲಿಸಿದ್ದಕ್ಕೆ ಸ್ಥಳೀಯರಿಂದ ಶ್ಲಾಘನೆ ವ್ಯಕ್ತವಾಗಿದೆ. 

 

ಹುಣಸೂರು ತಾಲ್ಲೂಕಿನ ಕಲ್ಲಹಳ್ಳಿಯಲ್ಲಿ ಮನೆ ಜಖಂಗೊಂಡು ಮೃತಪಟ್ಟಿರುವ ದೊಡ್ಡತಾಯಮ್ಮರವರ ಕುಟುಂಬಕ್ಕೆ ನಾಳೆ ಕೇಂದ್ರ ಸರ್ಕಾರದಿಂದ 4 ಲಕ್ಷ ಮತ್ತು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 1 ಲಕ್ಷ ಪರಿಹಾರವನ್ನು ಹಾಗು ಮನೆ ಜಖಂಗೊಂಡವರಿಗೆ ಹಾನಿಯ ಪ್ರಮಾಣಕ್ಕನುಗುಣವಾಗಿ ಕೇಂದ್ರದಿಂದ 95 ಸಾವಿರದವರೆಗೂ ಪರಿಹಾರವನ್ನು ನಾಳೆ ವಿತರಣೆ ಮಾಡಲಾಗುವುದು. pic.twitter.com/HkxCAyd8SS

— Chowkidar Pratap Simha (@mepratap)
click me!