ಮದಿರೆ ಎಂಬ ಮತ್ತಿನ ಕುದುರೆ ಏರಿ: ಜಾನಿ ವಾಕರ್ ಯಶೋಗಾಥೆ..!

First Published Jun 3, 2018, 1:30 PM IST
Highlights

‘ಕಳ್ಳಗೊಂದು ಪಿಳ್ಳೆ ನೆವ’ಎಂಬಂತೆ ಸುರಪಾನ ಪ್ರೀಯರಿಗೆ ತಮ್ಮ ಫೆವರಿಟ್ ಬ್ರ್ಯಾಂಡ್ ನ್ನು ಗಂಟಲೊಳಗಿಳಿಸಲು ವಿಶೇಷ ಕಾರಣವೇನು ಬೇಕಿಲ್ಲ. ವಿಕೆಂಡ್ ನಲ್ಲಿ ಗೆಳೆಯರು ಬಂದರೆಂದೋ, ಪತ್ನಿ ತವರಿಗೆ ಹೋಗಿದ್ದಾಳೆಂದೋ,  ಆಫೀಸ್ ನಲ್ಲಿ ಕೆಲ್ಸ ಜಾಸ್ತಿಯಾಯ್ತೆಂದೋ, ಸಂಬಳ ಬಂದಿತೆಂದೋ ಹೀಗೆ ಮದಿರೆಯನ್ನು ಆಲಂಗಿಸಲು ಹತ್ತು ಹಲವು ಕಾರಣಗಳು.

ಬೆಂಗಳೂರು(ಜೂ.3): ‘ಕಳ್ಳಗೊಂದು ಪಿಳ್ಳೆ ನೆವ’ಎಂಬಂತೆ ಸುರಪಾನ ಪ್ರೀಯರಿಗೆ ತಮ್ಮ ಫೆವರಿಟ್ ಬ್ರ್ಯಾಂಡ್ ನ್ನು ಗಂಟಲೊಳಗಿಳಿಸಲು ವಿಶೇಷ ಕಾರಣವೇನು ಬೇಕಿಲ್ಲ. ವಿಕೆಂಡ್ ನಲ್ಲಿ ಗೆಳೆಯರು ಬಂದರೆಂದೋ, ಪತ್ನಿ ತವರಿಗೆ ಹೋಗಿದ್ದಾಳೆಂದೋ,  ಆಫೀಸ್ ನಲ್ಲಿ ಕೆಲ್ಸ ಜಾಸ್ತಿಯಾಯ್ತೆಂದೋ, ಸಂಬಳ ಬಂದಿತೆಂದೋ ಹೀಗೆ ಮದಿರೆಯನ್ನು ಆಲಂಗಿಸಲು ಹತ್ತು ಹಲವು ಕಾರಣಗಳು.

ಮದ್ಯಪಾನ ಆರೋಗ್ಯಕ್ಕೆ ಹಾನಿಕರ ಎಂಬುದು ನಿಜವಾದರೂ, ಆಧುನಿಕ ಒತ್ತಡದ ಜೀವನ ಶೈಲಿಯಲ್ಲಿ ದೇಹಕ್ಕೂ ಮನಸ್ಸಿಗೂ ತುಸು ಹಿತ ನೀಡುವ ಭ್ರಮೆಯಲ್ಲಿರುವುದು ಸುಳ್ಳಲ್ಲ. ಕೆಲವರು ಮದ್ಯಪಾನವನ್ನು ಜೀವನದ ಅವಿಭಾಜ್ಯ ಅಂಗವಾಗಿ ಮಾಡಿಕೊಂಡಿದ್ದರೆ, ಇನ್ನೂ ಕೆಲವರಿಗೆ ಒತ್ತಡ ನಿವಾರಿಸುವ ಮದ್ದಾಗಿ ಮದ್ಯ ಕೆಲಸ ಮಾಡುತ್ತದೆ. ಅದರಲ್ಲೂ ಸಿರಿವಂತ ಮದ್ಯಪ್ರೀಯರು ವಿಶ್ವದ ಅತ್ಯಂತ ದುಬಾರಿ ಬ್ಲೆಂಡೆಡ್ ಮದ್ಯಗಳನ್ನು ಶೇಖರಿಸುವುದನ್ನೇ ಹವ್ಯಾಸ ಮಾಡಿಕೊಂಡಿರುತ್ತಾರೆ.

ಅಸಲಿಗೆ ಮದ್ಯಪಾನ ಎಂಬುದು ಅವರವರ ಅರ್ಥ(ಹಣಕಾಸು)ವ್ಯವಸ್ಥೆಗೆ ತಕ್ಕಂತೆ ಬದಲಾಗುತ್ತಾ ಹೋಗುತ್ತದೆ. ನಿಮ್ಮ ಜೇಬು ಎಷ್ಟು ಭಾರ ಇರುತ್ತದೆಯೋ ಅಷ್ಟೇ ದುಬಾರಿ ಮದ್ಯ ನಿಮ್ಮದಾಗುತ್ತದೆ. ಹಾಗೆ ನೋಡಿದರೆ ಮಾರುಕಟ್ಟೆಯಲ್ಲಿ ತರಹೇವಾರಿ ಮದ್ಯದ ಬ್ರ್ಯಾಂಡ್ ಗಳು ಸಿಗುತ್ತವಾದರೂ, ಕೆಲವೇ ಕೆಲವು ಬ್ರ್ಯಾಂಡ್ ಗಳು ವಿಶ್ವ ಪ್ರಸಿದ್ದಿ ಪಡೆದಿವೆ.

ಇವೆಲ್ಲವುಗಳಲ್ಲಿ ಜಾನಿ ವಾಕರ್ ಅಗ್ರ ಸ್ಥಾನದಲ್ಲಿ ನಿಲ್ಲುತ್ತದೆ. ಜಾನಿ ವಾಕರ್ ಸ್ಕಾಚ್ ವಿಸ್ಕಿಯ ಬ್ರಾಂಡ್ ಆಗಿದ್ದು, ಸ್ಕಾಟಿಷ್ ಪಟ್ಟಣದ ಕಿಲ್ಮಾರ್ನೋಕ್ ಈಸ್ಟ್ ಆಯಿರ್ಶೈರ್ನಲ್ಲಿ 1820 ರಲ್ಲಿ ಉತ್ಪಾದನೆ ಪ್ರಾರಂಭವಾಯಿತು. ಜಾನ್ ವಾಕರ್ ಎಂಬುವವರೇ ಈ ಕಂಪನಿಯನ್ನು ಪ್ರಾರಂಭಿಸಿದ್ದು. ಇದು ಪ್ರಪಂಚದಾದ್ಯಂತ ಅತ್ಯಧಿಕ ಮಾರಾಟವಾಗುವ ಬ್ರ್ಯಾಂಡೆಡ್ ಸ್ಕಾಚ್ ವಿಸ್ಕಿ ಎಂಬ ಹೆಗ್ಗಳಿಕೆ ಪಡೆದಿದೆ. ವಿಶ್ವದ ಪ್ರತಿಯೊಂದು ದೇಶದಲ್ಲೂ ಜಾನಿ ವಾಕರ್ ಮಾರಾಟವಾಗುತ್ತದೆ ಎಂಬುದೇ ಇದರ ಜನಪ್ರೀಯತೆಗೆ ಸಾಕ್ಷಿ. ಇದು ಸುಮಾರು ಪ್ರತಿ ದೇಶದಲ್ಲಿಯೂ ಮಾರಾಟವಾಗಿದೆ.

1857ರಲ್ಲಿ ಜಾನ್ ವಾಕರ್ ನಿಧನ ಹೊಂದಿದರು. ಬಳಿಕ ಅವರ ಮಗ ಅಲೆಕ್ಸಾಂಡರ್ ವಾಕರ್ ಮತ್ತು ಮೊಮ್ಮಗ ಅಲೆಕ್ಸಾಂಡರ್ ವಾಕರ್-2 ಈ ಕಂಪನಿಯನ್ನು ಮುಂದುವರೆಸಿಕೊಂಡು ಬಂದರು. 1862ರಷ್ಟರಲ್ಲಿ ಪ್ರತಿ ವಷರ್ಷಕ್ಕೆ 4, 50.000 ಲೀಟರ್ ಜಾನಿ ವಾಕರ್ ವಿಸ್ಕಿ ಮಾರಾಟವಾಗುತ್ತಿತ್ತು. 2016ರಲ್ಲಿ ವಿವಿಧ ಬಗೆಯ ಬ್ಲೆಂಡ್ ನ 770 ಎಂ.ಎಲ್ ನ ಒಟ್ಟು 156.6 ಮಿಲಿಯನ್ ಲೀಟರ್ ಮದ್ಯ ಮಾರಾಟವಾಗಿದೆ.

ಸದ್ಯ ಜಾನಿ ವಾಕರ್ ಕಂಪನಿಯನ್ನು ಡಿಯಾಜಿಯೊ ಸಂಸ್ಥೆ ಕೊಂಡುಕೊಂಡಿದ್ದು,  2012ರಲ್ಲಿ ಕಿಲ್ಮಾರ್ನೋಕ್ ನಗರದ ಮೂಲ ಉತ್ಪಾದನಾ ಘಟಕವನ್ನು ಈ ಸಂಸ್ಥೆ ಇದೀಗ ಮುಚ್ಚಿದೆ. ಈ ನಿರ್ಧಾರದ ವಿರುದ್ದ ಸ್ಕಾಟಲ್ಯಾಂಡ್ ನಲ್ಲಿ ಪ್ರತಿಭಟನೆಗಳು ಕೂಡ ನಡೆದಿರುವುದು ವಿಶೇಷ.

ಕಾಲಕ್ಕೆ ತಕ್ಕಂತೆ ಜಾನಿ ವಾಕರ್ ನ ವಿವಿಧ ಬ್ಲೆಂಡ್ ನ ಸ್ಕಾಚ್ ವಿಸ್ಕಿ ಮಾರುಕಟ್ಟೆಗೆ ಬಂದಿವೆ. ಬ್ರಿಟನ್ ಮಾಜಿ ಪ್ರಧಾನಿ ವಿನ್ಸಂಟ್ ಚರ್ಚಿಲ್ ಸೇರಿದಂತೆ ಜಗತ್ತಿನ ಹಲವು ಪ್ರಮುಖರು ಈ ದುಬಾರಿ ವಿಸ್ಕಿಯ ಅಭಿಮಾನಿಗಳಾಗಿದ್ದಾರೆ. ಜನಿ ವಾಕರ್ ನ ವಿವಿಧ ಬಗೆಯ ಬ್ಲೆಂಡೆಡ್ ವಿಸ್ಕಿಗಳನ್ನು ನೊಡುವುದಾದರೆ..

1. ರೆಡ್ ಲೆಬಲ್-1945ರಲ್ಲಿ ಮಾರುಕಟ್ಟೆಗೆ ಪರಿಚಯ
2. ಬ್ಲ್ಯಾಕ್ ಲೆಬಲ್-12 ವರ್ಷಗಳಷ್ಟು ಹಳೆಯ ಬ್ಲೆಂಡೆಡ್ ಸ್ಕಾಚ್
3. ಡಬಲ್ ಬ್ಲ್ಯಾಕ್ ಲೆಬಲ್-2011 ರಲ್ಲಿ ಮಾರುಕಟ್ಟೆಗೆ ಪರಿಚಯ-15 ವರ್ಷಗಳಷ್ಟು ಹಳೆಯ ಬ್ಲೆಂಡೆಡ್ ಸ್ಕಾಚ್
4. ಗ್ರೀನ್ ಲೆಬೆಲ್-1997 ರಲ್ಲಿ ಮಾರುಕಟ್ಟೆಗೆ ಪರಿಚಯ-15 ವರ್ಷಗಳಷ್ಟು ಹಳೆಯ ಬ್ಲೆಂಡೆಡ್ ಸ್ಕಾಚ್
5. ಗೋಲ್ಡ್ ಲೆಬಲ್-18 ವರ್ಷಗಳಷ್ಟು ಹಳೆಯ ಬ್ಲೆಂಡೆಡ್ ಸ್ಕಾಚ್
6. ಪ್ಲ್ಯಾಟಿನಂ ಲೆಬಲ್-18 ವರ್ಷಗಳಷ್ಟು ಹಳೆಯ ಬ್ಲೆಂಡೆಡ್ ಸ್ಕಾಚ್
7. ಬ್ಲೂ ಲೆಬಲ್
8. ಜಾನಿ ವಾಕರ್ ಸ್ವಿಂಗ್

click me!