ಟ್ವೀಟರ್: ಮೋದಿ, ರಾಹುಲ್‌ಗೆಲ್ಲ ಇರೋದು ಬರೀ ಫೇಕ್ ಫಾಲೋಯರ್ಸ್‌!

By Suvarna Web DeskFirst Published Mar 14, 2018, 6:22 PM IST
Highlights

ಪ್ರಧಾನಿ ನರೇಂದ್ರ ಮೋದಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಸೇರಿ ದೇಶ-ವಿದೇಶದ ಅನೇಕ ಗಣ್ಯರನ್ನು ಲಕ್ಷಾಂತರ ಮಂದಿ ಟ್ವೀಟರ್‌ನಲ್ಲಿ ಫಾಲೋ ಮಾಡುತ್ತಿದ್ದಾರೆ. ಆದರೆ, ಇವೆಲ್ಲವೂ ಸತ್ಯವೇ ಅಲ್ಲವಂತೆ!

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಸೇರಿ ದೇಶ-ವಿದೇಶದ ಅನೇಕ ಗಣ್ಯರನ್ನು ಲಕ್ಷಾಂತರ ಮಂದಿ ಟ್ವೀಟರ್‌ನಲ್ಲಿ ಫಾಲೋ ಮಾಡುತ್ತಿದ್ದಾರೆ. ಆದರೆ, ಇವೆಲ್ಲವೂ ಸತ್ಯವಲ್ಲವಂತೆ!

ಒಮ್ಮೆಯಂತೂ ಮೋದಿಗಿಂತಲೂ ರಾಹುಲ್‌ ಟ್ವೀಟಿಗೆ ಸಿಕ್ಕ ಪ್ರತಿಕ್ರಿಯೆಗಳು ಹೆಚ್ಚಾಗಿದ್ದಕ್ಕಂತೆ, ವಿಪರೀತ ಟೀಕೆಗಳು ವ್ಯಕ್ತವಾಗಿದ್ದು, ನಕಲಿ ಖಾತೆಗಳ ಪ್ರಭಾವವೆಂದು ಹೇಳಲಾಗುತ್ತಿತ್ತು. ಇದೀಗ ಇದು ಸತ್ಯವೆಂದು ಖುದ್ದು ಟ್ವೀಟರ್ ಬಿಡುಗಡೆ ಮಾಡಿದ ದಾಖಲೆಗಳು ಹೇಳಿದ್ದು, ಕೇವಲ ರಾಹುಲ್‌ಗೆ ಮಾತ್ರವಲ್ಲ ಮೋದಿ, ಶಶಿ ತರೂರ್, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸೇರಿ ಅನೇಕ ಗಣ್ಯರನ್ನು ಫಾಲೋ ಮಾಡುತ್ತಿರುವವರಲ್ಲಿ ಅನೇಕರದ್ದು ನಕಲಿ ಖಾತೆಯಂತೆ.

ರಾಹುಲ್‌ ಗಾಂಧಿಗೆ ಶೇ.67 ಮಂದಿ ನಕಲಿ ಫಾಲೋಯರ್ಸ್ ಇದ್ದರೆ, 41 ದಶಲಕ್ಷ ಫೋಲೋಯರ್ಸ್ ಇರುವ ಮೋದಿಯನ್ನು ಹಿಂಬಾಲಿಸುತ್ತಿರುವ ಶೇ.61 ಮಂದಿ ನಕಲಿ ಖಾತೆ ಹೊಂದಿರುವವರಂತೆ. ಆದರೆ, ವಿಶ್ವದ ದೊಡ್ಡಣ್ಣ ಅಮೆರಿಕ ಅಧ್ಯಕ್ಷ ಟ್ರಂಪ್ ಮಾತ್ರ ಕೇವಲ ಶೇ.26ರಷ್ಟು ನಕಲಿ ಫಾಲೋಯರ್ಸ್‌ ಅನ್ನು ಹೊಂದಿದ್ದು, ಭಾರತೀಯ ನಾಯಕರಿಗಿಂತಲೂ ಹೆಚ್ಚು ನೈಜ ಫಾಲೋಯರ್ಸ್ ಹೊಂದಿದ್ದಾರೆ, ಎಂದು ಸಂಸ್ಥೆಯೊಂದು ನಡೆಸಿದ ಅಧ್ಯಯನ ತಿಳಿಸಿದೆ.
 

click me!