ಬಲವಂತದ ವಿವಾಹ,ಕಳೆದ ವರ್ಷ 3400 ಮಧುಮಕ್ಕಳ ಅಪಹರಣ:ಇಲ್ಲಿ ಎಲ್ಲವೂ ಗನ್ ಪಾಯಿಂಟ್'ನಲ್ಲೇ ವ್ಯವಹಾರ

By Suvarna Web deskFirst Published Feb 4, 2018, 9:12 PM IST
Highlights

ಬಹುತೇಕ ಪ್ರಕರಣಗಳು ವರನ ಕುಟುಂಬಗಳಿಗೆ ಗನ್ ಪಾಯಿಂಟ್ ಹಾಗೂ ಜೀವ ಬೆದರಿಕೆಯೊಡ್ಡಿಯೇ ನಡೆಯುತ್ತದೆ'

ಪಾಟ್ನ(ಫೆ.04): ಕರಾಳ ವರ್ಷಗಳ ಭ್ರಷ್ಟಾಚಾರ ತಹಬದಿಗೆ ತರುವ ನಿಟ್ಟಿನಲ್ಲಿ ತಮ್ಮ ರಾಜ್ಯ ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಲವು ಸುಧಾರಣ ಕ್ರಮಗಳನ್ನು ಜಾರಿಗೊಳಿಸಿದ್ದಾರೆ. ಭ್ರಷ್ಟ ಅಧಿಕಾರಿಗಳಿಗೆ, ಅಪರಾಧಿಗಳಿಗೆ ಚುರುಕು ಮುಟ್ಟಿಸುತ್ತಿದ್ದಾರೆ. ಆದರೆ ಇಲ್ಲಿನ ಪೊಲೀಸರು ನೀಡಿದ ಒಂದು ವರದಿ ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದೆ.

2017ರಲ್ಲಿ ಬಿಹಾರದಲ್ಲಿ 3400 ಮಧುಮಕ್ಕಳನ್ನು ಅಪಹರಿಸಿ ಬಲವಂತವಾಗಿ ಮದುವೆ ಮಾಡಿರುವುದಾಗಿ ಪೊಲೀಸ್ ವರದಿ ತಿಳಿಸಿದೆ. ಈ ರೀತಿಯ ವಿವಾಹವನ್ನು ಇಲ್ಲಿ 'ಪಾಕದುವ ವಿವಾಹ್' ಎನ್ನುತ್ತಾರೆ. ಬಹುತೇಕ ಪ್ರಕರಣಗಳು ವರನ ಕುಟುಂಬಗಳಿಗೆ ಗನ್ ಪಾಯಿಂಟ್ ಹಾಗೂ ಜೀವ ಬೆದರಿಕೆಯೊಡ್ಡಿಯೇ ನಡೆಯುತ್ತದೆ'ಎಂದು ಪೊಲೀಸರು ವರದಿಯಲ್ಲಿ ತಿಳಿಸಿದ್ದಾರೆ.

ಕಳೆದ ತಿಂಗಳು ಇಂಜಿನಿಯರ್ ಒಬ್ಬರನ್ನು ಅಪಹರಿಸಿ ಗನ್ ಪಾಯಿಂಟ್'ನಲ್ಲಿ ವಿವಾಹ ಮಾಡಿದ್ದು ರಾಷ್ಟ್ರೀಯ  ಮಾಧ್ಯಮಗಳಲ್ಲಿ ಪ್ರಮುಖ ಸುದ್ದಿಯಾಗಿತ್ತು. 2016ರಲ್ಲಿ ಈ ರೀತಿಯ ವಿವಾಹಗಳು 3070 ನಡೆದಿದ್ದರೆ 2015ರಲ್ಲಿ 3000 ಹಾಗೂ 2014ರಲ್ಲಿ 2526 ವಿವಾಹಗಳು ನಡೆದಿವೆ.

ನಿತ್ಯವು 9 'ಪಾಕದುವ ವಿವಾಹ್'ಗಳು ನಡೆಯುತ್ತವೆ'ಎನ್ನುತ್ತವೆ ಪೊಲೀಸ್ ವರದಿಗಳು. ದಿನದಿಂದ ದಿನಕ್ಕೆ ಈ ರೀತಿಯ ವಿವಾಹಗಳು ಹೆಚ್ಚುತ್ತಿವೆ. ಈ ತಿಂಗಳು ಬಿಹಾರದ ಜನರಿಗೆ ವಿವಾಹ ಮಾಡುವ ತಿಂಗಳಾಗಿದ್ದು, ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸಿದ್ದು ಈ ರೀತಿಯ ವಿವಾಹಗಳನ್ನು ತಡೆಯುವುದಕ್ಕಾಗಿ ಬಿಗಿಕ್ರಮ ಜಾರಿಗೊಳಿಸಿದ್ದಾರೆ. ಎಲ್ಲ ಜಿಲ್ಲಾ ಎಸ್'ಪಿಗಳಿಗೆ ಆದೇಶ ನೀಡಲಾಗಿದೆ.

ಪ್ರಮುಖವಾಗಿ ಈ ರೀತಿಯ ವಿವಾಹಗಳು ನಡೆಯುವುದಕ್ಕೆ ಪ್ರಮುಖ ಕಾರಣ ವರದಕ್ಷಿಣೆಯಾಗಿದೆ. ಹಣಕ಻ಸಿಲ್ಲಿ ಸ್ಥಿತಿವಂತರಾಗದವರು ತಮ್ಮ ಹೆಣ್ಣು ಮಕ್ಕಳನ್ನು ವಿವಾಹ ಮಾಡಲು ಗನ್ ಪಾಯಿಂಟ್'ನಲ್ಲಿ ವ್ಯವಹಾರ ನಡೆಸುತ್ತಾರೆ. 18ರಿಂದ 30ರ ವಯೋಮಾನದ ವರರನ್ನು ಅಪಹರಿಸಿ ವಿವಾಹ ಮಾಡಲಾಗುತ್ತದೆ.

click me!