
ನವದೆಹಲಿ[ಜೂ.25): ಹಿರಿಯ ಕಾಂಗ್ರೆಸ್ ಮುಖಂಡ ಸೈಫುದ್ದೀನ್ ಸೊಜ್ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್ ಪಾಲ್ಗೊಳ್ಳುತ್ತಿಲ್ಲ ಎಂಬುದು ಮೂಲಗಳಿಂದ ತಿಳಿದು ಬಂದಿದೆ.
ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪವ್ರೇಜ್ ಮುಷರಫ್ ಅವರ ನಿಲುವನ್ನು ಬೆಂಬಲಿಸಿದ್ದ ಕಾರಣದಿಂದ ಸೈಫುದ್ದೀನ್ ತೀವ್ರ ವಿರೋಧ ಎದುರಿಸುವಂತಾಗಿದೆ. ಅಲ್ಲದೇ ಸೈಫುದ್ದೀನ್ ಅವರ ಕಾಶ್ಮೀರ , 'ಗ್ಲೀಂಪ್ಸ್ ಆಫ್ ಇಸ್ಟರಿ ಆ್ಯಂಡ್ ದಿ ಸ್ಟೋರಿ ಆಫ್ ಸ್ಟ್ರಗಲ್' ಪುಸ್ತಕದಲ್ಲಿ ಕಾಶ್ಮೀರ ವಿಚಾರದಲ್ಲಿ ಮುಷರಪ್ ಅವರ ನಿಲುವು ಇಂದಿಗೂ ಸರಿಯಾಗಿ ಕಾಣುತ್ತಿದೆ ಎಂದು ಹೇಳಲಾಗಿದೆ.
ಕಾಶ್ಮೀರಿಗಳು ಪಾಕಿಸ್ತಾನದೊಂದಿಗೆ ಸೇರಬೇಡಿ, ಸ್ವತಂತ್ರಕ್ಕೆ ಮೊದಲ ಆದ್ಯತೆ ನೀಡಿ ಎಂದು ಮುಷರಪ್ ಹೇಳಿಕೆ ನೀಡಿದ್ದು, ಈಗಲೂ ಕೂಡ ಪ್ರಸ್ತುತದಿಂದ ಕೂಡಿದೆ. ಆದರೆ, ಅದು ಸಾಧ್ಯವಿಲ್ಲ ಎಂಬುದು ತಮಗೆ ಗೊತ್ತು ಎಂದು ಸಂದರ್ಶನವೊಂದರಲ್ಲಿ ಸೈಫುದ್ದೀನ್ ಸೊಜ್ ಹೇಳಿಕೆ ನೀಡಿದ್ದರು.
ಈ ಸಂಬಂಧಿತ ಲೇಖನಗಳು ನಾಳೆ ಬಿಡುಗಡೆಯಾಗಲಿರುವ ಕಾಶ್ಮೀರ ಕುರಿತ ಪುಸ್ತಕದಲ್ಲಿಯೂ ಇವೆ. ಹೀಗಾಗಿ ಡಾ.ಮನಮೋಹನ್ ಸಿಂಗ್ ಆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.