ಮಹಿಳಾ ಮಿಲಿಟರಿ ರ್ಯಾಲಿ; 200 ಮಹಿಳೆಯರು ಪಾಸ್

By Web DeskFirst Published Aug 5, 2019, 10:09 AM IST
Highlights

ಮಿಲಿಟರಿ ನೇಮಕಾತಿ: 200 ಮಹಿಳೆಯರು ಉತ್ತೀರ್ಣ |  ಕಳೆದೊಂದು ವಾರದಿಂದ ನಡೆದ ದೈಹಿಕ ಪರೀಕ್ಷೆ |  ಮಹಿಳಾ ಮಿಲಿಟರಿ ರ್ಯಾಲಿ ದೇಶದಲ್ಲಿ ಇದೇ ಮೊದಲು

ಬೆಳಗಾವಿ (ಆ. 05): ದೇಶದಲ್ಲಿಯೇ ಮೊದಲ ಬಾರಿಗೆ ನಡೆದ ಮಹಿಳಾ ಮಿಲಿಟರಿ ನೇಮಕಾತಿ ರಾರ‍ಯಲಿಯು ಯಶಸ್ವಿಗೊಂಡಿದ್ದು, 200 ಯುವತಿಯರು ದೈಹಿಕ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ ಎಂದು ನೇಮಕಾತಿ ವಿಭಾಗದ ಬ್ರಿಗೇಡಿಯರ್‌ ದೀಪೇಂದ್ರ ರಾವತ್‌ ತಿಳಿಸಿದ್ದಾರೆ.

 ದೇಶದಲ್ಲಿ ಮೊದಲ ಬಾರಿಗೆ ಮಹಿಳಾ ಸೈನಿಕರ ನೇಮಕಾತಿ ಪ್ರಕ್ರಿಯೆ ನಡೆಸಲಾಗುತ್ತಿದೆ. 100 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು, ದಕ್ಷಿಣ ವಲಯದ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಮೂರು ಕೇಂದ್ರಾಡಳಿತ ಪ್ರದೇಶಗಳಾದ ಅಂಡಮಾನ್‌ ನಿಕೋಬಾರ್‌, ಲಕ್ಷ್ಮದ್ವೀಪ, ಪಾಂಡಿಚೇರಿಯ 15 ಸಾವಿರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು.

ಈ ಪೈಕಿ 3 ಸಾವಿರ ಅಭ್ಯರ್ಥಿಗಳಿಗೆ ಆ.1ರಿಂದ ಆ.4ರ ವರೆಗೆ ಬೆಳಗಾವಿಯಲ್ಲಿ ದೈಹಿಕ ಪರೀಕ್ಷೆಗೆ ಹಾಜರಾಗುವಂತೆ ಪ್ರವೇಶ ಪತ್ರ ನೀಡಲಾಗಿತ್ತು, ಇದರಲ್ಲಿ 1 ಸಾವಿರ ಮಂದಿ ಹಾಜರಾಗಿದ್ದರು ಎಂದು ತಿಳಿಸಿದರು.

ಈ ಸಾವಿರ ಅಭ್ಯರ್ಥಿಗಳಲ್ಲಿ 200 ಮಂದಿ ದೈಹಿಕ ಪರೀಕ್ಷೆ ಉತ್ತೀರ್ಣರಾಗಿದ್ದು, ಸೋಮವಾರ ಬೆಳಗಾವಿಯ ಮಿಲಿಟರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಗುವುದು. ಆ.27ರಂದು ಲಿಖಿತ ಪರೀಕ್ಷೆ ನಡೆಸಲಾಗುವುದು ಎಂದರು.

click me!