ಜನಧನ್‌ ಖಾತೆಯಲ್ಲಿ 1 ಲಕ್ಷ ಕೋಟಿಗೂ ಹೆಚ್ಚು ಠೇವಣಿ

Published : Jul 11, 2019, 07:53 AM ISTUpdated : Jul 11, 2019, 09:09 AM IST
ಜನಧನ್‌ ಖಾತೆಯಲ್ಲಿ 1 ಲಕ್ಷ ಕೋಟಿಗೂ ಹೆಚ್ಚು ಠೇವಣಿ

ಸಾರಾಂಶ

ಕೇಂದ್ರ ಸರ್ಕಾರ ಆಂದೋಲನದ ರೂಪದಲ್ಲಿ ಜಾರಿಗೆ ತಂದಿದ್ದ ಜನಧನ್ ಯೋಜನೆಯಲ್ಲಿ ಭರ್ಜರಿ 1 ಲಕ್ಷ ಕೋಟಿ ರುಪಾಯಿಗೂ ಹೆಚ್ಚು ಮೊತ್ತ ಠೇವಣಿಯಾಗಿದೆ.

ನವದೆಹಲಿ (ಜು.11): ದೇಶದ ಪ್ರತಿ ನಾಗರಿಕರಿಗೂ ಬ್ಯಾಂಕ್‌ ಖಾತೆ ಒದಗಿಸಬೇಕೆಂಬ ಕಾರಣಕ್ಕಾಗಿ ಕೇಂದ್ರ ಸರ್ಕಾರ ಆಂದೋಲನದ ರೂಪದಲ್ಲಿ ಜಾರಿಗೆ ತಂದಿದ್ದ ಜನಧನ್  ಯೋಜನೆಯಲ್ಲಿ ಭರ್ಜರಿ 1 ಲಕ್ಷ ಕೋಟಿ ರು. ಠೇವಣಿ ಸಂಗ್ರಹವಾಗಿದೆ. ಜನಧನ್‌ ಯೋಜನೆಯಡಿ ತೆರೆಯಲ್ಪಟ್ಟಿದ್ದ 36.06 ಕೋಟಿ ಉಳಿತಾಯ ಖಾತೆಗಳಲ್ಲಿ ಜೂ.6 ರವರೆಗೆ 99,649,84 ರು. ಠೇವಣಿ ಇತ್ತು. ಇದೀಗ ಜುಲೈ 3 ರ ಹೊತ್ತಿಗೆ ಠೇವಣಿ ಮೊತ್ತ 1,00,495 ಕೋಟಿ ರೂಪಾಯಿಗೆ ತಲುಪಿದೆ.

2014 ರಲ್ಲಿ ಕೇಂದ್ರ ಸರ್ಕಾರ ದೇಶದ ನಾಗರಿಕರು ಬ್ಯಾಂಕ್‌ ವ್ಯವಸ್ಥೆಯೊಳಗೆ ಬರಬೇಕು. ಬ್ಯಾಂಕ್‌ ಸೌಲಭ್ಯಗಳಿಂದ ಯಾರೂ ವಂಚಿತರಾಗಬಾರದೆಂಬ ಉದ್ದೇಶದೊಂದಿಗೆ ಶೂನ್ಯ ಮೊತ್ತದಲ್ಲಿ ಉಳಿತಾಯ ಖಾತೆ ಆರಂಭಿಸಲು ಅನುವು ಮಾಡಿಕೊಟ್ಟಿತ್ತು. ಈ ಯೋಜನೆಯಲ್ಲಿ 28.44 ಕೋಟಿ ಖಾತೆದಾರರಿಗೆ ಓವರ್‌ಡ್ರಾಫ್ಟ್‌ ಮತ್ತು ರುಪೇ ಕಾರ್ಡ್‌ ಸೌಲಭ್ಯ ನೀಡಲಾಗಿದೆ. ಯೋಜನೆ ಯಶಸ್ಸು ಕಂಡ ಪರಿಣಾಮ 2018 ಆಗಸ್ಟ್‌ 28 ರಿಂದ ನಂತರ ಅಪಘಾತ ಜೀವವಿಮೆ ಸೌಲಭ್ಯವನ್ನೂ 1 ಲಕ್ಷ ರು.ನಿಂದ 2 ಲಕ್ಷ ರು.ಗೆ ಏರಿಸಲಾಗಿದೆ. ಅಲ್ಲದೆ ಓವರ್‌ಡ್ರಾಫ್ಟ್‌ ಪ್ರಮಾಣವನ್ನು 5000 ರು.ನಿಂದ 10000 ರು.ಗೆ ಏರಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಖಾಲಿ ಇರುವ ವೈದ್ಯ, ಸಿಬ್ಬಂದಿ ಹುದ್ದೆ ತಿಂಗಳಲ್ಲಿ ಭರ್ತಿ: ಸಚಿವ ದಿನೇಶ್ ಗುಂಡೂರಾವ್ ಘೋಷಣೆ
3,600 ಪೊಲೀಸ್‌ ಕಾನ್‌ಸ್ಟೇಬಲ್‌ ನೇಮಕಾತಿಗೆ ಶೀಘ್ರ ಕ್ರಮ: ಗೃಹ ಸಚಿವ ಪರಮೇಶ್ವರ್‌