ಮೋಹನ್’ದಾಸ್ ಪೈ ಪುತ್ರನ ಹೋಟೆಲ್’ನಲ್ಲಿ ಗೋಮಾಂಸ ತಿನಿಸು! ಸೋಶಿಯಲ್ ಮೀಡಿಯಾದಲ್ಲಿ ವಾದ ಪ್ರತಿವಾದ

By Suvarna Web DeskFirst Published Jun 2, 2017, 3:50 PM IST
Highlights

ಮೋಹನ್'ದಾಸ್ ಪೈ ಪುತ್ರ ಬೆಂಗಳೂರಿನ ಕೋರಮಂಗಲದಲ್ಲಿ 154 ಬ್ರೇಕ್ ಫಾಸ್ಟ್ ಕ್ಲಬ್ ಎಂಬ ಹೋಟೆಲ್ ಹೊಂದಿದ್ದು,  ಅಲ್ಲಿ ಗೋಮಾಂಸದ ತಿನಿಸುಗಳು ಲಭ್ಯವಿದೆ ಎನ್ನಲಾಗಿದೆ. ವಿಚಾರವನ್ನು ಮುಂದಿಟ್ಟುಕೊಂಡು ನೆಟಿಜನ್’ಗಳು ಪೈಯವರ ಮೇಲೆ ಹರಿಹಾಯ್ದಿದ್ದಾರೆ. 

ಬೆಂಗಳೂರು: ಖ್ಯಾತ ವಾಣಿಜ್ಯ ವ್ಯವಹಾರ ತಜ್ಞ ಹಾಗೂ ಇನ್ಫೋಸಿಸ್ ಮಾಜಿ ನಿರ್ದೇಶಕ ಟಿ.ವಿ. ಮೋಹನ್ ದಾಸ್ ಪೈ ಗೋಮಾಂಸ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ.

ಮೋಹನ್ ದಾಸ್ ಪೈ ಲಿಶಿಯಸ್  ಎಂಬ ಮಾಂಸ ಮಾರಾಟ ಕಂಪನಿಯ ಪಾಲುದಾರರಾಗಿದ್ದಾರೆನ್ನಲಾಗಿದೆ. 

ಅವರ ಪುತ್ರ ಬೆಂಗಳೂರಿನ ಕೋರಮಂಗಲದಲ್ಲಿ 154 ಬ್ರೇಕ್ ಫಾಸ್ಟ್ ಕ್ಲಬ್ ಎಂಬ ಹೋಟೆಲ್ ಹೊಂದಿದ್ದು,  ಅಲ್ಲಿ ಗೋಮಾಂಸದ ತಿನಿಸುಗಳು ಲಭ್ಯವಿದೆ ಎನ್ನಲಾಗಿದೆ.

ಆ ವಿಚಾರವನ್ನು ಮುಂದಿಟ್ಟುಕೊಂಡು ನೆಟಿಜನ್’ಗಳು ಪೈಯವರ ಮೇಲೆ ಹರಿಹಾಯ್ದಿದ್ದಾರೆ. ಒಂದು ಕಡೆ ಗೋಹತ್ಯೆ ಮೇಲೆ ನಿಷೇಧ ಹೇರಬೇಕೆನ್ನುವುದು, 

ಇನ್ನೊಂದು ಕಡೆ ಕುಟುಂಬ ಸದಸ್ಯರುಗೋಮಾಂಸ ತಿನಿಸುಗಳನ್ನು ಮಾರುವುದು ಕಪಟತನವಲ್ಲವೇ ಎಂದು ಕೇಳಿದ್ದಾರೆ.

ಅದಕ್ಕೆ ಪ್ರತಿಕ್ರಿಯಿಸಿರುವ ಮೋಹನ್ ದಾಸ್ ಪೈ, ತಾನು ಅಕ್ರಮ ಗೋಹತ್ಯೆಯನ್ನು ಮಾತ್ರ ವಿರೋಧಿಸುವುದಾಗಿ ಹೇಳಿಕೊಂಡಿದ್ದಾರೆ.

ಆಹಾರವು ವ್ಯಕ್ತಿಯ ವೈಯುಕ್ತಿಕ ಆಯ್ಕೆಯಾಗಿದೆ ಎಂದಿರುವ ಮೋಹನ್ ದಾಸ್ ಪೈ,  ತನ್ನ ಪುತ್ರ  ಆ ಹೋಟೆಲ್’ನಲ್ಲಿ ಹೂಡಿಕೆದಾರ ಮಾತ್ರ, ಆತ ಅದನ್ನು ನಡೆಸುತ್ತಿಲ್ಲವೆಂದಿದ್ದಾರೆ.

 

What hypocrisy?People have every right eat what they want!am opposed to illegal slaughter,but not in lawful abattoirs,support ban on cow STR https://t.co/LMjJ5u9CNi

— Mohandas Pai (@TVMohandasPai) June 1, 2017

perfectly legal!I have no objection to people eating what they want!individual choice!not my restaurant,son is investor only does not run! https://t.co/Oz29DeCvtO

— Mohandas Pai (@TVMohandasPai) June 1, 2017

Maan these are personal choices; I do not decide for you, got it; https://t.co/a70mssp7Ws

— Mohandas Pai (@TVMohandasPai) June 1, 2017

We live in a free world, should not impose views on others. Food is a personal choice. Eating beef or not a personal choice!i do not eat! https://t.co/BJD0I9ChpR

— Mohandas Pai (@TVMohandasPai) June 1, 2017
click me!