ಧರ್ಮ ಕ್ಷೇತ್ರದಲ್ಲಿ ಇಂದು ‘ನಮೋ’ ಸಂಚಾರ..!: ನಕ್ಸಲ್ ಭೀತಿ ಹಿನ್ನೆಲೆಯಲ್ಲಿ 3 ಸ್ತರದ ಭದ್ರತೆ

Published : Oct 29, 2017, 09:26 AM ISTUpdated : Apr 11, 2018, 12:47 PM IST
ಧರ್ಮ ಕ್ಷೇತ್ರದಲ್ಲಿ ಇಂದು ‘ನಮೋ’ ಸಂಚಾರ..!: ನಕ್ಸಲ್ ಭೀತಿ ಹಿನ್ನೆಲೆಯಲ್ಲಿ 3 ಸ್ತರದ ಭದ್ರತೆ

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಇವತ್ತು ಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ಉಜಿರೆಗೆ ಭೇಟಿ ನೀಡಲಿದ್ದಾರೆ.  ದಕ್ಷಿಣ ಭಾರತದ  ಪವರ್ ಫುಲ್ ಶೈವ ಕ್ಷೇತ್ರವಾದ  ಧರ್ಮಸ್ಥಳದ ಮಂಜುನಾಥ ಸ್ವಾಮಿಯ ದರ್ಶನ ಪಡೆಯಲಿರುವ ಮೋದಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

ಮಂಗಳೂರು(ಅ.29): ಪ್ರಧಾನಿ ನರೇಂದ್ರ ಮೋದಿ ಇವತ್ತು ಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ಉಜಿರೆಗೆ ಭೇಟಿ ನೀಡಲಿದ್ದಾರೆ.  ದಕ್ಷಿಣ ಭಾರತದ  ಪವರ್ ಫುಲ್ ಶೈವ ಕ್ಷೇತ್ರವಾದ  ಧರ್ಮಸ್ಥಳದ ಮಂಜುನಾಥ ಸ್ವಾಮಿಯ ದರ್ಶನ ಪಡೆಯಲಿರುವ ಮೋದಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

ದೆಹಲಿಯಿಂದ ಮಂಗಳೂರಿಗೆ ವಿಶೇಷ ವಿಮಾನದ ಮೂಲಕ ಆಗಮಿಸುವ ಮೋದಿ ಹೆಲಿಕಾಪ್ಟರ್ ಮೂಲಕ ಧರ್ಮಸ್ಥಳಕ್ಕೆ ಆಗಮಿಸಲಿದ್ದಾರೆ. ಅಲ್ಲಿಂದ ರಸ್ತೆ ಮಾರ್ಗವಾಗಿ ಉಜಿರೆಗೆ ತೆರಳಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ 12 ಲಕ್ಷ ಜನ್ ಧನ್ ಖಾತೆ ತೆರೆದಿದ್ದು, ಅದನ್ನು ಇಂದು ಪ್ರಧಾನಿ ಲೋಕಾರ್ಪಣೆ ಮಾಡಲಿದ್ದಾರೆ.

ಇನ್ನು, ಮೋದಿ ಭೇಟಿ ಹಿನ್ನೆಲೆ ಭಾರೀ ಭದ್ರತೆ ಕೈಗೊಳ್ಳಲಾಗಿದ್ದು, ಧರ್ಮಸ್ಥಳದಲ್ಲಿ ಮೂರು ಹೆಲಿಪ್ಯಾಡ್ ನಿರ್ಮಾಣ ಮಾಡಲಾಗಿದೆ. ಹೆಲಿಪ್ಯಾಡ್ ನಿಂದ ದೇವಾಲಯ ಮತ್ತು ಉಜಿರೆಗೆ ಸಾಗುವ ಮಾರ್ಗದಲ್ಲಿ ನಕ್ಸಲರ ಭೀತಿ ಇರುವ ಹಿನ್ನೆಲೆ, ಮೋದಿ ಸಂಚರಿಸುವ ರಸ್ತೆಯುದ್ದಕ್ಕೂ ಮೂರು ಸ್ತರದ ಭದ್ರತೆಯನ್ನ ಒದಗಿಸಲಾಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಇದೇ ಮೊದಲ ಬಾರಿಗೆ ಅತೀ ದುಬಾರಿಯಾದ ಬೆಳ್ಳಿ, ಚಿನ್ನಕ್ಕಿಂತ ವೇಗದಲ್ಲಿ ಸಾಗುತ್ತಿದೆ ಸಿಲ್ವರ್
ರಾಜ್ಯದ ತಾಪಮಾನ 12°Cಗೆ ಕುಸಿತ-ಕರುನಾಡಿಗೆ ಶೀತ ಕಂಟಕ ಖಚಿತ-ಬೆಂಗಳೂರು ಜನತೆಗೆ ಮೈನಡುಕ ಉಚಿತ!