ದೇಶಕ್ಕೆ ಮೊದಲ ಪೂರ್ಣಪ್ರಮಾಣದ ಮಹಿಳಾ ರಕ್ಷಣಾ ಮಂತ್ರಿ; ಇಲ್ಲಿದೆ ಮೋದಿ ಸಂಪುಟದ ಸಂಪೂರ್ಣ ಪಟ್ಟಿ

Published : Sep 03, 2017, 02:55 PM ISTUpdated : Apr 11, 2018, 12:45 PM IST
ದೇಶಕ್ಕೆ ಮೊದಲ ಪೂರ್ಣಪ್ರಮಾಣದ ಮಹಿಳಾ ರಕ್ಷಣಾ ಮಂತ್ರಿ; ಇಲ್ಲಿದೆ ಮೋದಿ ಸಂಪುಟದ ಸಂಪೂರ್ಣ ಪಟ್ಟಿ

ಸಾರಾಂಶ

ಕರ್ನಾಟಕದಿಂದ ಮೋದಿ ಸಂಪುಟಕ್ಕೆ ಅಚ್ಚರಿಯ ಸೇರ್ಪಡೆಯಾದ ಅನಂತಕುಮಾರ್ ಹೆಗಡೆ ಅವರಿಗೆ ರಾಜ್ಯ ದರ್ಜೆಯ ಕೌಶಲ್ಯ ಅಭಿವೃದ್ಧಿ ಖಾತೆಯ ಜವಾಬ್ದಾರಿ ನೀಡಲಾಗಿದೆ. ವಿಜಯ್ ಗೋಯೆಲ್ ಅವರನ್ನು ಕ್ರೀಡಾ ಖಾತೆಯಿಂದ ನಿಯುಕ್ತಿಯೊಳಿಸಿ ರಾಜ್ಯ ದರ್ಜೆಯ ಸಂಸದೀಯ ವ್ಯವಹಾರಗಳ ಖಾತೆಯನ್ನು ನೀಡಲಾಗಿದೆ. ಮಾಜಿ ಕ್ರೀಡಾಪಟು ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರಿಗೆ ಕ್ರೀಡಾ ಖಾತೆ ಸ್ವತಂತ್ರ ರಾಜ್ಯ ಸಚಿವ ಸ್ಥಾನವನ್ನು ಕೊಡಲಾಗಿದೆ.

ನವದೆಹಲಿ(ಸೆ. 03): ಹಣಕಾಸು ಖಾತೆ ರಾಜ್ಯ ಸಚಿವೆಯಾಗಿದ್ದ ನಿರ್ಮಲಾ ಸೀತಾರಾಮನ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಬಹಳ ಮುಖ್ಯವಾದ ಜವಾಬ್ದಾರಿ ವಹಿಸಿದ್ದಾರೆ. ಆಂಧ್ರಪ್ರದೇಶದ ಸಂಸದೆ ನಿರ್ಮಲಾ ಅವರನ್ನು ರಕ್ಷಣಾ ಸಚಿವೆಯನ್ನಾಗಿ ಮಾಡಿದ್ದಾರೆ. ಈ ಮೂಲಕ ಇಂದಿರಾ ಗಾಂಧಿ ಬಳಿಕ ಭಾರತಕ್ಕೆ ಮೊದಲ ಮಹಿಳಾ ರಕ್ಷಣಾ ಸಚಿವರೊಬ್ಬರು ಆಡಳಿತ ನಡೆಸಲಿದ್ದಾರೆ. ವಾಸ್ತವವಾಗಿ ನಿರ್ಮಲಾ ಸೀತಾರಾಮನ್ ಅವರು ದೇಶದ ಮೊದಲ ಪೂರ್ಣಪ್ರಮಾಣದ ರಕ್ಷಣಾ ಸಚಿವೆಯಾಗಲಿದ್ದಾರೆ. 70ರ ದಶಕದಲ್ಲಿ ಇಂದಿರಾಗಾಂಧಿಯವರು ರಕ್ಷಣಾ ಖಾತೆಯನ್ನು ಹೆಚ್ಚುವರಿಯಾಗಿ ನಿಭಾಯಿಸಿದ್ದರು.

ಇನ್ನು, ಕರ್ನಾಟಕದಿಂದ ಮೋದಿ ಸಂಪುಟಕ್ಕೆ ಅಚ್ಚರಿಯ ಸೇರ್ಪಡೆಯಾದ ಅನಂತಕುಮಾರ್ ಹೆಗಡೆ ಅವರಿಗೆ ರಾಜ್ಯ ದರ್ಜೆಯ ಕೌಶಲ್ಯ ಅಭಿವೃದ್ಧಿ ಖಾತೆಯ ಜವಾಬ್ದಾರಿ ನೀಡಲಾಗಿದೆ. ವಿಜಯ್ ಗೋಯೆಲ್ ಅವರನ್ನು ಕ್ರೀಡಾ ಖಾತೆಯಿಂದ ನಿಯುಕ್ತಿಯೊಳಿಸಿ ರಾಜ್ಯ ದರ್ಜೆಯ ಸಂಸದೀಯ ವ್ಯವಹಾರಗಳ ಖಾತೆಯನ್ನು ನೀಡಲಾಗಿದೆ. ಮಾಜಿ ಕ್ರೀಡಾಪಟು ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರಿಗೆ ಕ್ರೀಡಾ ಖಾತೆ ಸ್ವತಂತ್ರ ರಾಜ್ಯ ಸಚಿವ ಸ್ಥಾನವನ್ನು ಕೊಡಲಾಗಿದೆ.

ನರೇಂದ್ರ ಮೋದಿ: ಪ್ರಧಾನ ಮಂತ್ರಿ, ಸಿಬ್ಬಂದಿ ಖಾತೆ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಖಾತೆ, ಅಣು ಶಕ್ತಿ, ಬಾಹ್ಯಾಕಾಶ ಹಾಗೂ ಇತರ ಅನಿಯೋಜಿತ ಖಾತೆಗಳು

ಸಂಪುಟ ದರ್ಜೆ ಸಚಿವರು:
1) ರಾಜನಾಥ್ ಸಿಂಗ್: ಗೃಹ ಖಾತೆ
2) ನಿರ್ಮಲಾ ಸೀತಾರಾಮನ್: ರಕ್ಷಣಾ ಖಾತೆ
3) ಸುಷ್ಮಾ ಸ್ವರಾಜ್: ವಿದೇಶ ವ್ಯವಹಾರಗಳ ಖಾತೆ
4) ಅರುಣ್ ಜೈಟ್ಲಿ: ವಿತ್ತ ಖಾತೆ; ಕಾರ್ಪೊರೇಟ್ ವ್ಯವಹಾರಗಳ ಖಾತೆ
5) ನಿತಿನ್ ಗಡ್ಕರಿ: ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ; ಹಡಗು ಖಾತೆ; ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ನದಿ ಪುನಶ್ಚೇತನ ಖಾತೆ ಸಚಿವ
6) ಸುರೇಶ್ ಪ್ರಭು: ವಾಣಿಜ್ಯ ಮತ್ತು ಉದ್ಯಮ ಖಾತೆ
7) ಡಿ.ವಿ. ಸದಾನಂದಗೌಡ: ಅಂಕಿ ಅಂಶ ಮತ್ತು ಯೋಜನೆ ಅನುಷ್ಠಾನ ಖಾತೆ
8) ಉಮಾ ಭಾರತಿ: ಕುಡಿಯುವ ನೀರು ಮತ್ತು ಒಳಚರಂಡಿ ಖಾತೆ
9) ರಾಮವಿಳಾಸ್ ಪಾಸ್ವಾನ್: ಗ್ರಾಹಕ ವ್ಯವಹಾರ, ಆಹಾರ ಖಾತೆ
10) ಮನೇಕಾ ಗಾಂಧಿ: ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಖಾತೆ
11) ಅನಂತಕುಮಾರ್: ರಾಸಾಯನಿಕ ಮತ್ತು ರಸಗೊಬ್ಬರ ಖಾತೆ; ಸಂಸದೀಯ ವ್ಯವಹಾರಗಳ ಖಾತೆ
12) ರವಿಶಂಕರ್ ಪ್ರಸಾದ್: ಕಾನೂನು ಮತ್ತು ನ್ಯಾಯ ಖಾತೆ; ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ-ತಂತ್ರಜ್ಞಾನ ಖಾತೆ
13) ಜೆ.ಪಿ.ನಾಡ್ಡಾ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ
14) ಅಶೋಕ್ ಗಜಪತಿ ರಾಜು: ನಾಗರಿಕ ವಿಮಾನಯಾನ ಖಾತೆ
15) ಅನಂತ್ ಗೀತೆ: ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ ಖಾತೆ
16) ಹರ್'ಸಿಮ್ರತ್ ಕೌರ್ ಬಾದಲ್: ಆಹಾರ ಸಂಸ್ಕರಣಾ ಉದ್ಯಮಗಳ ಖಾತೆ
17) ನರೇಂದ್ರ ಸಿಂಗ್ ತೋಮರ್: ಗ್ರಾಮೀಣಾಭಿವೃದ್ಧಿ ಖಾತೆ; ಪಂಚಾಯತ್ ರಾಜ್ ಖಾತೆ; ಗಣಿಗಾರಿಕೆ ಖಾತೆ
18) ಬಿರೇಂದರ್ ಸಿಂಗ್ ಚೌಧರಿ: ಉಕ್ಕು ಖಾತೆ
19) ಜುವಾಲ್ ಓರಮ್: ಬುಡಕಟ್ಟು ವ್ಯವಹಾರಗಳ ಖಾತೆ
20) ರಾಧಾಮೋಹನ್ ಸಿಂಗ್: ಕೃಷಿ ಮತ್ತು ರೈತರ ಕಲ್ಯಾಣ ಖಾತೆ
21) ಸ್ಮೃತಿ ಇರಾನಿ: ಜವಳಿ ಖಾತೆ; ಮಾಹಿತಿ ಮತ್ತು ಪ್ರಸರಣ ಖಾತೆ
22) ಡಾ. ಹರ್ಷ್ ವರ್ಧನ್: ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ; ಭೂ ವಿಜ್ಞಾನ ಖಾತೆ; ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ
23) ತಾವರ್'ಚಂದ್ ಗೆಹ್ಲೋಟ್: ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ
24) ಪ್ರಕಾಶ್ ಜಾವಡೇಕರ್: ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ
25) ಧರ್ಮೇಂದ್ರ ಪ್ರಧಾನ್: ಪೆಟ್ರೋಲಿಯಮ್ ಮತ್ತು ನೈಸರ್ಗಿಕ ಅನಿಲ ಖಾತೆ; ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಖಾತೆ
26) ಪೀಯುಶ್ ಗೋಯಲ್: ರೈಲ್ವೆ ಖಾತೆ; ಕಲ್ಲಿದ್ದಲು ಖಾತೆ
27) ಮುಕ್ತಾರ್ ಅಬ್ಬಾಸ್ ನಖ್ವಿ: ಅಲ್ಪಸಂಖ್ಯಾತ ವ್ಯವಹಾರಗಳ ಖಾತೆ.

ರಾಜ್ಯ ದರ್ಜೆ ಸ್ವತಂತ್ರ ಖಾತೆ ಸಚಿವರು:
1) ಇಂದರ್'ಜೀತ್ ಸಿಂಗ್ ರಾವ್: ಯೋಜನಾ ಖಾತೆ; ರಾಸಾಯನಿಕ ಮತ್ತು ರಸಗೊಬ್ಬರ ಖಾತೆ.
2) ಸಂತೋಷ್ ಕುಮಾರ್ ಗಂಗಾವರ್: ಕಾರ್ಮಿಕ ಮತ್ತು ಉದ್ಯೋಗ ಖಾತೆ
3) ಶ್ರೀಪಾದ್ ನಾಯ್ಕ್: ಆಯುರ್ವೇದ, ಯೋಗ, ನ್ಯಾಚುರೋಪಥಿ, ಯುನಾನಿ, ಸಿದ್ಧ ಮತ್ತು ಹೋಮಿಯೋಪಥಿ (ಆಯುಶ್) ಖಾತೆ
4) ಡಾ. ಜಿತೇಂದ್ರ ಸಿಂಗ್: ಈಶಾನ್ಯ ಪ್ರದೇಶ ಅಭಿವೃದ್ಧಿ ಖಾತೆ; ಪ್ರಧಾನಿ ಕಚೇರಿ; ಸಿಬ್ಬಂದಿ, ಸಾರ್ಜನಿಕ ಕುಂದುಕೊರತೆ, ಪಿಂಚಣಿ ಖಾತೆ; ಅಣು ಶಕ್ತಿ ಇಲಾಖೆ; ಬಾಹ್ಯಾಕಾಶ ಇಲಾಖೆ
5) ಡಾ. ಮಹೇಶ್ ಶರ್ಮಾ: ಸಂಸ್ಕೃತಿ ಖಾತೆ; ಪರಿಸರ ಖಾತೆ; ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ
6) ಗಿರಿರಾಜ್ ಸಿಂಗ್: ಅತೀ ಸಣ್ಣ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಖಾತೆ
7) ಮನೋಜ್ ಸಿನ್ಹಾ: ಸಂವಹನ ಖಾತೆ; ರೈಲ್ವೆ ಖಾತೆ
8) ಕರ್ನಲ್ ರಾಜ್ಯವರ್ಧನ್ ಸಿಂಗ್ ರಾಥೋಡ್: ಯುವ ವ್ಯವಹಾರಗಳು ಹಾಗೂ ಕ್ರೀಡಾ ಖಾತೆ; ಮಾಹಿತಿ ಮತ್ತು ಪ್ರಸರಣ ಖಾತೆ
9) ರಾಜ್'ಕುಮಾರ್ ಸಿಂಗ್: ವಿದ್ಯುತ್ ಖಾತೆ; ಹೊಸ ಮತ್ತು ಪುವರ್ಬಳಕೆ ಇಂಧನ ಖಾತೆ
10) ಹರದೀಪ್ ಸಿಂಗ್ ಪುರಿ: ವಸತಿ ಮತ್ತು ನಗರ ವ್ಯವಹಾರಗಳ ಖಾತೆ
11) ಆಲ್ಫೋನ್ಸ್ ಕಣ್ಣಾಂಧಾನಂ: ಪ್ರವಾಸೋದ್ಯಮ ಖಾತೆ; ಎಲೆಕ್ಟ್ರಾನಿಕ್ಸ್ ಮತ್ತು ಇಟಿ ಖಾತೆ ರಾಜ್ಯ ಸಚಿವ.

ರಾಜ್ಯ ದರ್ಜೆ ಸಚಿವರು:
1) ವಿಜಯ್ ಗೋಯೆಲ್: ಸಂಸದೀಯ ವ್ಯವಹಾರಗಳ ಖಾತೆ; ಅಂಕಿಅಂಶ ಮತ್ತು ಯೋಜನೆ ಅನುಷ್ಠಾನ ಖಾತೆ
2) ಪಿ.ರಾಧಾಕೃಷ್ಣನ್: ಹಣಕಾಸು ಖಾತೆ; ಶಿಪ್ಪಿಂಗ್ ಖಾತೆ
3) ಎಸ್.ಎಸ್.ಅಹ್ಲುವಾಲಿಯಾ: ಕುಡಿಯುವ ನೀರು ಮತ್ತು ಒಳಚರಂಡಿ ಖಾತೆ
4) ರಮೇಶ್ ಜಿಗಜಿಣಗಿ: ಕುಡಿಯುವ ನೀರು ಮತ್ತು ಒಳಚರಂಡಿ ಖಾತೆ
5) ರಾಮದಾಸ್ ಅಥಾವಳೆ: ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ
6) ವಿಷ್ಣು ದೇವೋ: ಉಕ್ಕು ಖಾತೆ
7) ರಾಮ್'ಕೃಪಾಲ್ ಯಾದವ್; ಗ್ರಾಮೀಣಾಭಿವೃದ್ಧಿ ಖಾತೆ
8) ಹನ್ಸ್'ರಾಜ್ ಗಂಗಾರಾಮ್ ಆಹಿರ್: ಗೃಹ ವ್ಯವಹಾರಗಳ ಖಾತೆ
9) ಹರಿಭಾಯ್ ಚೌಧರಿ: ಗಣಿಗಾರಿಕೆ ಖಾತೆ; ಕಲ್ಲಿದ್ದಲು ಖಾತೆ
10) ರಾಜನ್ ಗೋಹೇನ್: ರೈಲ್ವೆ ಖಾತೆ
11) ಜನರಲ್ ವಿ.ಕೆ.ಸಿಂಗ್: ವಿದೇಶ ವ್ಯವಹಾರಗಳ ಖಾತೆ
12) ಪರುಷೋತ್ತಮ್ ರುಪಾಲಾ: ಕೃಷಿ ಮತ್ತು ರೈತರ ಕಲ್ಯಾಣ ಖಾತೆ; ಪಂಚಾಯತ್ ರಾಜ್ ಖಾತೆ
13) ಕೃಷನ್ ಪಾಲ್: ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ
14) ಜಸ್ವಂತ್'ಸಿನ್ಹ್ ಭಾಬೋರ್: ಬುಡಕಟ್ಟು ವ್ಯವಹಾರಗಳ ಖಾತೆ
15) ಶಿವಪ್ರತಾಪ್ ಶುಕ್ಲಾ: ಹಣಕಾಸು ಖಾತೆ
16) ಅಶ್ವಿನಿ ಕುಮಾರ್ ಚೌಬೆ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ
17) ಸುದರ್ಶನ್ ಭಗತ್: ಬುಡಕಟ್ಟು ವ್ಯವಹಾರಗಳ ಖಾತೆ
18) ಉಪೇಂದ್ರ ಕುಶ್ವಾಹಾ: ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ
19) ಕಿರಣ್ ರಿಜಿಜು: ಗೃಹ ವ್ಯವಹಾರಗಳ ಖಾತೆ
20) ಡಾ. ವಿರೇಂದ್ರ ಕುಮಾರ್: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ; ಅಲ್ಪಸಂಖ್ಯಾತ ವ್ಯವಹಾರಗಳ ಖಾತೆ
21) ಅನಂತಕುಮಾರ್ ಹೆಗಡೆ: ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಖಾತೆ
22) ಎಂ.ಜೆ.ಅಕ್ಬರ್: ವಿದೇಶ ವ್ಯವಹಾರಗಳ ಖಾತೆ
23) ಸಾಧ್ವಿ ನಿರಂಜನ್ ಜ್ಯೋತಿ: ಆಹಾರ ಸಂಸ್ಕರಣ ಉದ್ಯಮಗಳ ಖಾತೆ
24) ವೈ.ಎಸ್.ಚೌಧರಿ: ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ; ಭೂ ವಿಜ್ಞಾನ ಖಾತೆ
25) ಜಯಂತ್ ಸಿನ್ಹ: ನಾಗರಿಕ ವಿಮಾನಯಾನ ಖಾತೆ
26) ಬಾಬುಲ್ ಸುಪ್ರಿಯೋ: ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಖಾತೆ
27) ವಿಜಯ್ ಸಾಂಪ್ಲಾ: ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ
28) ಅರ್ಜುನ್ ರಾಮ್ ಮೇಘವಾಲ್: ಸಂಸದೀಯ ವ್ಯವಹಾರಗಳ ಖಾತೆ; ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನಶ್ಚೇತನ ಯೋಜನೆ ಖಾತೆ.
29) ಅಜಯ್ ತಾಮಟ: ಜವಳಿ ಖಾತೆ
30) ಕೃಷ್ಣ ರಾಜ್: ಕೃಷಿ ಮತ್ತು ರೈತರ ಕಲ್ಯಾಣ ಖಾತೆ
31) ಮನ್'ಸುಖ್ ಮಾಂಡವಿಯಾ: ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ; ಹಡಗು ಸಾಗಣೆ ಖಾತೆ; ರಾಸಾಯನಿಕ ಮತ್ತು ರಸಗೊಬ್ಬರ ಖಾತೆ
32) ಅನುಪ್ರಿಯಾ ಪಟೇಲ್: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ
33) ಸಿ.ಆರ್. ಚೌಧರಿ: ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಖಾತೆ; ವಾಣಿಜ್ಯ ಮತ್ತು ಉದ್ಯಮ ಖಾತೆ
34) ಪಿ.ಪಿ.ಚೌಧರಿ: ಕಾನೂನು ಮತ್ತು ನ್ಯಾಯ ಖಾತೆ; ಕಾರ್ಪೊರೇಟ್ ವ್ಯವಹಾರಗಳ ಖಾತೆ
35) ಡಾ. ಸುಭಾಷ್ ರಾಮರಾವ್ ಭಾಮ್ರೆ: ರಕ್ಷಣಾ ಖಾತೆ
36) ಗಜೇಂದ್ರ ಸಿಂಗ್ ಶೆಖಾವತ್: ಕೃಷಿ ಮತ್ತು ರೈತರ ಕಲ್ಯಾಣ ಖಾತೆ
37) ಡಾ. ಸತ್ಯಪಾಲ್ ಸಿಂಗ್: ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ; ಜಲಸಂಪನ್ಮೂಲ ಖಾತೆ; ನದಿ ಅಭಿವೃದ್ಧಿ ಮತ್ತು ಗಂಗಾ ಪುನಶ್ಚೇತನ ಯೋಜನೆ ಖಾತೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಯಚೂರು: ತಾಯಿ ಬುದ್ದಿವಾದ ಹೇಳಿದಕ್ಕೆ ತುಂಗಭದ್ರಾ ಕಾಲುವೆಗೆ ಹಾರಿ ದುಡುಕಿದ ಮಗಳು!
ಬೆಂಗಳೂರಿನಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ!