‘ರೂ.2000 ನೋಟನ್ನು ಜಾರಿಗೆ ತರುವ ನಿರ್ಧಾರ ಜೂನ್’ನಲ್ಲೇ ಆಗಿತ್ತು’

By Suvarna Web DeskFirst Published May 11, 2017, 11:43 AM IST
Highlights

ಕಳೆದ ನ.8 ರಂದು ದೇಶದಾದ್ಯಂತ ರೂ.500 ಹಾಗೂ ರೂ. 1000 ನೋಟುಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿ ಆದೇಶ ಹೊರಡಿಸಿತ್ತು.  ಆ ಬಳಿಕ ರೂ. 200 ನೋಟನ್ನು ಪರಿಚಯಿಸಿತ್ತು. ಆದರೆ ನೋಟು ನಿಷೇಧ ಕ್ರಮದ ಬಗ್ಗೆ ವಿವರಗಳನ್ನು ಬಹಿರಂಗಪಡಿಸಲು ಭಾರತೀಯ ರಿಸರ್ವ್ ಬ್ಯಾಂಕ್ ನಿರಾಕರಿಸುತ್ತಾ ಬಂದಿದೆ.

ನವದೆಹಲಿ (ಮೇ.11): ದೇಶದಲ್ಲಿ ರೂ.2000 ನೋಟನ್ನು ಪರಿಚಯಿಸುವ ನಿರ್ಧಾರ ಕಳೆದ ವರ್ಷ ಜೂನ್’ನಲ್ಲೇ ಕೈಗೊಕಳ್ಳಲಾಗಿತ್ತು ಎಂದು ಆಂಗ್ಲ ಪತ್ರಿಕೆ ಬಿಸ್’ನೆಸ್’ ಲೈನ್ ವರದಿ ಮಾಡಿದೆ. ಅದಾದ ಬಳಿಕ ಶೀಘ್ರದಲ್ಲೇ ರೂ.2000 ನೋಟಿನ ಮುದ್ರಣ ಕೂಡಾ  ಆರಂಭವಾಗಿತ್ತು ಎಂದು ಹೇಳಲಾಗಿದೆ.

ಕಳೆದ ನ.8 ರಂದು ದೇಶದಾದ್ಯಂತ ರೂ.500 ಹಾಗೂ ರೂ. 1000 ನೋಟುಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿ ಆದೇಶ ಹೊರಡಿಸಿತ್ತು.  ಆ ಬಳಿಕ ರೂ. 200 ನೋಟನ್ನು ಪರಿಚಯಿಸಿತ್ತು. ಆದರೆ ನೋಟು ನಿಷೇಧ ಕ್ರಮದ ಬಗ್ಗೆ ವಿವರಗಳನ್ನು ಬಹಿರಂಗಪಡಿಸಲು ಭಾರತೀಯ ರಿಸರ್ವ್ ಬ್ಯಾಂಕ್ ನಿರಾಕರಿಸುತ್ತಾ ಬಂದಿದೆ.

ನೋಟು ವಾಪಾಸಾತಿಯ  ಪ್ರಕ್ರಿಯೆ ಸಂಪೂರ್ಣವಾಗಿ ಮುಗಿಯುವವರೆಗೆ ಯಾವುದೇ ವಿವರಗಳನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲವೆಂದು ಆರ್’ಬಿಐಯು  ಹಣಕಾಸು ಸ್ಥಾಯಿ ಸಮಿತಿ ಕೇಳಿರುವ ಪ್ರಶ್ನೆಗಳಿಗೆ ಉತ್ತರಿಸಿದೆ.

ನ.8ರ ಹೊತ್ತಿಗೆ 15.44 ಲಕ್ಷ  ಕೋಟಿ ಮೌಲ್ಯದ 500 ಹಾಗೂ 1000 ಮುಖಬೆಲೆಯ ನೋಟುಗಳು ಚಲಾವಣೆಯಲ್ಲಿದ್ದವು, ಡಿ.10ರವರೆಗೆ 12.44 ಲಕ್ಷ ಕೋಟಿ ಮೌಲ್ಯದ ನೋಟುಗಳು ಬ್ಯಾಂಕುಗಳಿಗೆ ವಾಪಾಸು ಬಂದಿವೆಯೆಂದು ರಿಸರ್ವ ಬ್ಯಾಂಕ್ ಹೇಳಿತ್ತು.

click me!