
ಬೆಂಗಳೂರು: ಸುಗ್ಗಿ ಹಬ್ಬವನ್ನು ಎಲ್ಲೆಡೆ ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತಿದೆ. ಈ ಸಂಭ್ರಮಕ್ಕೆ ಅನೇಕರು ವಿಧವಿಧವಾಗಿ ಶುಭ ಕೋರಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ಕನ್ನಡದಲ್ಲಿಯೇ ಟ್ವೀಟ್ ಮಾಡಿ, ಶುಭ ಕೋರಿದ್ದಾರೆ.
'ಸಮಸ್ತ ಕನ್ನಡಿಗರಿಗೆ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು, ಈ ಸುಗ್ಗಿ ಹಬ್ಬ ಎಲ್ಲರ ಬಾಳಲ್ಲಿ ಸಂತಸ, ಸಾಮರಸ್ಯ, ಸಮೃದ್ಧಿ ಮತ್ತು ಆರೋಗ್ಯವನ್ನು ನೀಡಲಿ ಎಂದು ನಾನು ಹಾರೈಸುತ್ತೇನೆ,' ಎಂದು ಮೋದಿ ಶುಭ ಕೋರಿದ್ದಾರೆ.
;
'ಕಹಿ ನೆನಪು ಮರೆಯಾಗಲಿ, ಸಿಹಿ ನೆನಪು ಚಿರವಾಗಲಿ, ಹೊಸ ದಿನಗಳಲ್ಲಿ ನೀವು, ಕಂಡ ಕನಸು ನನಸಾಗಲಿ ನಿಮಗೆ ಮತ್ತು ನಿಮ್ಮ ಕುಟುಂಬದವರಿಗೆ ಮಕರ ಸಂಕ್ರಾಂತಿಯ ಶುಭಾಶಯಗಳು,' #HappySankranthi ಎಂದು ರಾಹುಲ್ ಶುಭ ಹಾರೈಸಿದ್ದಾರೆ.
ಮಕರ ಸಂಕ್ರಾಂತಿ ಶುಭಾಶಯಗಳೆಂದು ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ, ಹೇಳಿದ್ದಾರೆ,
'ಎಳ್ಳು ಬೆಲ್ಲದ 'ಸವಿ', ಕಬ್ಬಿನ 'ಸಿಹಿ' ಹೊಸ ಚೈತನ್ಯ ತರಲಿ, ಶಾ೦ತಿ, ಸಮೃದ್ಧಿ, ಸೌಹಾದ೯ತೆಯನ್ನು ಇಮ್ಮಡಿಸಲಿ, ನವಪಥದಲ್ಲಿರುವ ಸೂಯ೯ ಅಭಿವೃದ್ಧಿಯ ಕ್ರಾ೦ತಿ ಬೆಳಗಿಸಲಿ,' ಎಂದು ನಟಿ, ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಟ್ವೀಟ್ ಮಾಡಿದ್ದಾರೆ.
'ಕಬ್ಬಿನ ಸಿಹಿಯನ್ನು ಹೀರುತ್ತಾ, ಎಳ್ಳು ಬೆಲ್ಲಾ ಸವಿಯುತ್ತಾ ಸವಿ ಮಾತುಗಳಿಂದ ವರ್ಷದ ಮೊದಲನೇ ಹಬ್ಬವನ್ನು ಸ್ವಾಗತಿಸೋಣ,' ಎಂದು ನಟ ತೂಗುದೀಪ ದರ್ಶನ್ ಶುಭ ಹಾರೈಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.