ವಿವಾಹದ ಆಮಂತ್ರಣ ಪತ್ರಿಕೆಯಿಂದಲೂ ಎಲ್ಲ ರೀತಿಯಲ್ಲೂ ವೈಭವಪೂರಿತವಾಗಿ ರೆಡ್ಡಿಯವರು ಎಲ್ಲರ ಗಮನ ಸೆಳೆದು ವಿವಾದಕ್ಕೀಡಾಗಿದ್ದಾರೆ.
ಗಣಿ ಧಣಿ ಜನಾರ್ದನ್ ರೆಡ್ಡಿ ಮಗಳು ಬ್ರಾಹ್ಮಿಣಿ ಮದುವೆ ಹೈದರಾಬಾದ್'ನ ಉದ್ಯಮಿ ರಾಜೀವ್ ರೆಡ್ಡಿಯೊಂದಿಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ನಡೆಯುತ್ತಿದೆ. ವಿವಾಹದ ಆಮಂತ್ರಣ ಪತ್ರಿಕೆಯಿಂದಲೂ ಎಲ್ಲ ರೀತಿಯಲ್ಲೂ ವೈಭವಪೂರಿತವಾಗಿ ರೆಡ್ಡಿಯವರು ಎಲ್ಲರ ಗಮನ ಸೆಳೆದು ವಿವಾದಕ್ಕೀಡಾಗಿದ್ದಾರೆ.
ರೆಡ್ಡಿಯವರ ವಿಶೇಷ ಇನ್ನೊಂದು ಬಗೆಯದಾಗಿದೆ. ಊಟವಾದ ಮೇಲೆ ಪಾನ್ ಬೀಡ ನೀಡುವುದಕ್ಕೆ ಮುಂಬೈನಿಂದ ಚಲುವೆಯರನ್ನು ಕರೆಸಿದ್ದು ಅವರು ಖ್ಯಾತ ಮಾಡಲ್'ಗಳಾಗಿದ್ದಾರೆ. ಅಂದ ಹಾಗೇ ಈ ಮಾಡಲ್'ಗಳಿಗೆ ಪಾನ್ ಬೀಡಾಕ್ಕಿಂತ ಹತ್ತು ಪಟ್ಟು ಹೆಚ್ಚು ಖರ್ಚು ಮಾಡಿದ್ದಾರಂತೆ ರೆಡ್ಡಿಯವರು. ಎಲ್ಲ ಖರ್ಚು ವೆಚ್ಚಗಳಿಗೂ ಆದಾಯ ತೆರಿಗೆ ಇಲಾಖೆ ಕಣ್ಣಿಟ್ಟಿರುವುದಂತೂ ಸುಳ್ಳಲ್ಲ.