
ಬೆಂಗಳೂರು(ಜೂ.5): ಪ್ರಸಿದ್ದ ಮಾಡೆಲ್ ಓಲ್ಯಾ ಲ್ಯಾಂಗಿಲ್ಲೆ ಅಪಾರ್ಟಮೆಂಟ್ ವೊಂದರಲ್ಲಿ ಹೆಣವಾಗಿ ಪತ್ತೆಯಾಗಿದ್ದಾರೆ. ಅತಿಯದ ಮದ್ಯ ಮತ್ತು ಡ್ರಗ್ಸ್ ಸೇವನೆ ಆಕೆಗೆ ಸಾವಿಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ರಾತ್ರಿ ಪಬ್ ವೊಂದರಲ್ಲಿ ಡಾ. ನವಲ್ ಪಾರೀಕ್ ಎಂಬ ವೈದ್ಯರನ್ನು ಪರಿಚಯ ಮಾಡಿಕೊಂಡ ಓಲ್ಯಾ, ಅತಿಯಾಗಿ ಮದ್ಯ ಸೇವಿಸಿ ಆತನ ಅಪಾರ್ಟಮೆಂಟ್ ಗೆ ಹೋಗಿದ್ದಾಳೆ. ಈ ವೇಳೆ ಡ್ರಗ್ಸ್ ಸೇವಿಸಿ ಆತನೊಂದಿಗೆ ಸೆಕ್ಸ್ ಕೂಡ ಮಾಡಿದ್ದಾಳೆ. ಮದ್ಯರಾತ್ರಿ ಓಲ್ಯಾಗೆ ತೊಂದರೆ ಶುರುವಾಗಿದ್ದು, ಆಸ್ಪತ್ರೆ ಸೇರಿಸುವ ಮುನ್ನವೇ ಆಕೆ ಮೃತಪಟ್ಟಳು ಎಂದು ವೈದ್ಯ ಪಾರೀಕ್ ಮಾಹಿತಿ ನೀಡಿದ್ದಾನೆ.
ಅತಿಯಾದ ಮದ್ಯ ಮತ್ತು ಡ್ರಗ್ಸ್ ಸೇವನೆಯಿಂದ ಓಲ್ಯಾಳ ಮೇಲೆ ದುಷ್ಪರಿಣಾಮ ಬೀರಿದ್ದು, ಇದರ ಪರಿವೇ ಇಲ್ಲದೇ ಆಕೆ ಸೆಕ್ಸ್ ನಲ್ಲಿ ನಿರತವಾಗಿದ್ದು ಆಕೆಯ ಸಾವಿಗೆ ಕಾರಣ ಎಂದು ವೈದ್ಯರು ತಿಳಿಸಿದ್ದಾರೆ. ಪೊಲೀಸರು ಡಾ. ಪಾರೀಕ್ ಮನೆ ಶೋಧ ನಡೆಸಿದಾಗ ಕೊಕೇನ್ ಪತ್ತೆಯಾಗಿದೆ ಎನ್ನಲಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಡಾ. ಪಾರೀಕ್ ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.