ಚುನಾವಣಾ ಆಯೋಗಕ್ಕೆ ಯಾಮಾರಿಸಿದ್ರಾ ಸಿಎಂ ಇಬ್ರಾಹಿಂ..?

By Web DeskFirst Published Aug 31, 2018, 1:22 PM IST
Highlights
  • ಚುನಾವಣಾ ಆಯೋಗದ ಪ್ರಕಾರ ಎರಡು ಕಡೆ ವೋಟರ್ ಐಡಿ ಪಡೆಯುವುದು ಕಾನೂನು ಬಾಹಿರ
  • ಇಬ್ರಾಹಿಂ ವಿರುದ್ಧ ರಾಜ್ಯ ಚುನಾವಣಾ ಆಯೋಗಕ್ಕೆ  ದೂರು ನೀಡಲಿರುವ ಬಿಜೆಪಿ 

ಬೆಂಗಳೂರು: ವಿಧಾನ ಪರಿಷತ್ ಸದಸ್ಯ ಸಿಎಂ‌ ಇಬ್ರಾಹಿಂರಿಂದ ಕಾನೂನು ಉಲ್ಲಂಘನೆ ಅರೋಪ ಕೇಳಿ ಬಂದಿದೆ. 

ವಿಧಾನ ಪರಿಷತ್ತು ಸದಸ್ಯರಾಗಿರುವ ಇಬ್ರಾಹಿಂ ಎರಡೆರಡು ಕಡೆ ವೋಟರ್ ಐಡಿ ಹೊಂದಿದ್ದಾರೆ ಎಂದು ಹೇಳಲಾಗಿದೆ. ಶಿವಮೊಗ್ಗ ಜಿಲ್ಲೆಯ‌ ಭದ್ರಾವತಿ ವಿಧಾನಸಭಾ ಕ್ಷೇತ್ರ ಮತ್ತು ಬೆಂಗಳೂರು ಜಿಲ್ಲೆಯ ಶಿವಾಜಿನಗರ ಕ್ಷೇತ್ರ ಎರಡು ಕಡೆ ವೋಟರ್ ಐಡಿ ಹೊಂದಿದ್ದಾರೆ.

ಚುನಾವಣಾ ಆಯೋಗದ ಪ್ರಕಾರ ಎರಡು ಕಡೆ ವೋಟರ್ ಐಡಿ ಪಡೆಯುವುದು ಕಾನೂನು ಬಾಹಿರ. ಎಂ.ಎಲ್.ಸಿ ಆಸೆಗೆ ಕಾನೂನು ಬಾಹಿರವಾಗಿ ವೋಟರ್ ಐಡಿ ಪಡೆದ್ರಾ ಇಬ್ರಾಹಿಂ ಎಂಬ ಅನುಮಾನಗಳು ಹುಟ್ಟಿಕೊಂಡಿವೆ.

ಈ ಬಗ್ಗೆ ರಾಜ್ಯ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ನೀಡಲು ಮುಂದಾಗಿದೆ.  ವಿರೋಧ ಪಕ್ಷ ನಾಯಕ ಪದ್ಮನಾಭರೆಡ್ಡಿ ನೇತೃತ್ವದಲ್ಲಿ ನಾಳೆ‌ ಚುನಾವಣಾ ಆಯೋಗಕ್ಕೆ ದೂರು ನೀಡಲಿದ್ದಾರೆ.

click me!