ಬಾಯಲ್ಲಿ ಅಭಿವೃದ್ಧಿ ಮಾತು.. ಕಲಾಪಕ್ಕೆ ಚಕ್ಕರ್: ಇಲ್ಲಿದೆ ಚಕ್ಕರ್ ಹೊಡೆದವರ ಲಿಸ್ಟ್, ಟಾಪ್ 1 ಯಾರು ಗೊತ್ತಾ?

Published : Sep 27, 2017, 08:53 AM ISTUpdated : Apr 11, 2018, 12:44 PM IST
ಬಾಯಲ್ಲಿ ಅಭಿವೃದ್ಧಿ ಮಾತು.. ಕಲಾಪಕ್ಕೆ ಚಕ್ಕರ್: ಇಲ್ಲಿದೆ ಚಕ್ಕರ್ ಹೊಡೆದವರ ಲಿಸ್ಟ್, ಟಾಪ್ 1 ಯಾರು ಗೊತ್ತಾ?

ಸಾರಾಂಶ

ಚುನಾವಣೆಗೂ ಮುನ್ನ ಕ್ಷೇತ್ರದ ಬಗ್ಗೆ ಮತದಾರನ ಮುಂದೆ ಸಿಕ್ಕಾಪಟ್ಟೆ ಬಡಾಯಿ ಕೊಚ್ಚಿಕೊಳ್ಳುವ ನಾಯಕರು ಗೆದ್ದ ಮೇಲೆ ಮುಗಿದೇ ಹೋಯ್ತು. ಕೆಲವರಂತೂ ಕ್ಷೇತ್ರದಕಡೆ ತಲೇನೂ ಹಾಕಲ್ಲ, ಹೋಗ್ಲಿ  ಕಲಾಪದಲ್ಲಾದರೂ ಹಾಜರಾಗಿ ತಮ್ಮ ಕ್ಷೇತ್ರದ ಸಮಸ್ಯೆ ಬಗ್ಗೆ ಚರ್ಚಿಸ್ತಾರಾ. ಅದೂ ಇಲ್ಲ.. ಕಾಂಗ್ರೆಸ್ ಸರ್ಕಾರ 2013ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದ 2017 ಜೂನವರೆಗೆ 218 ದಿನ ಕಲಾಪ ನಡೆದಿದೆ. ಕೆಲವರಂತೂ ಎರಡಂಕಿ ದಿನಗಳನ್ನೂ ದಾಟಿಲ್ಲ.

ಬೆಂಗಳೂರು(ಸೆ.27): ಚುನಾವಣೆಗೂ ಮುನ್ನ ಕ್ಷೇತ್ರದ ಬಗ್ಗೆ ಮತದಾರನ ಮುಂದೆ ಸಿಕ್ಕಾಪಟ್ಟೆ ಬಡಾಯಿ ಕೊಚ್ಚಿಕೊಳ್ಳುವ ನಾಯಕರು ಗೆದ್ದ ಮೇಲೆ ಮುಗಿದೇ ಹೋಯ್ತು. ಕೆಲವರಂತೂ ಕ್ಷೇತ್ರದಕಡೆ ತಲೇನೂ ಹಾಕಲ್ಲ, ಹೋಗ್ಲಿ  ಕಲಾಪದಲ್ಲಾದರೂ ಹಾಜರಾಗಿ ತಮ್ಮ ಕ್ಷೇತ್ರದ ಸಮಸ್ಯೆ ಬಗ್ಗೆ ಚರ್ಚಿಸ್ತಾರಾ. ಅದೂ ಇಲ್ಲ.. ಕಾಂಗ್ರೆಸ್ ಸರ್ಕಾರ 2013ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದ 2017 ಜೂನವರೆಗೆ 218 ದಿನ ಕಲಾಪ ನಡೆದಿದೆ. ಕೆಲವರಂತೂ ಎರಡಂಕಿ ದಿನಗಳನ್ನೂ ದಾಟಿಲ್ಲ.

ಕಲಾಪಕ್ಕೆ ಚಕ್ಕರ್ ಹೊಡೆದವರಲ್ಲಿ ಅಂಬರೀಶ್ ಟಾಫ್ ಒನ್ ಸ್ಥಾನದಲ್ಲಿದ್ದರೆ, ಸಚಿವ ಸಂತೋಷ್ ಲಾಡ್ ನಂತರದ ಸ್ಥಾನದಲ್ಲಿದ್ದಾರೆ. ಹೀಗೆ ಕಲಾಪಕ್ಕೆ ಚಕ್ಕರ್ ಹೊಡೆದ ಟಾಪ್ 8 ಮಂದಿ ನೋಡುವುದಾದರೆ.

1. ಅಂಬರೀಶ್ - 04 ದಿನ ಮಾತ್ರ ಹಾಜರು

2. ಸಂತೋಷ್ ಲಾಡ್ - 05 ದಿನ ಹಾಜರು

3. ಸಂಭಾಜೀ ಪಾಟೀಲ್ - 62 ದಿನ ಹಾಜರು

4. ಗಣೇಶ ಹುಕ್ಕೇರಿ - 63 ದಿನ ಹಾಜರು

5. ಇಕ್ಬಾಲ್ ಅನ್ಸಾರಿ - 71 ದಿನ ಹಾಜರು

6. ಆನಂದ ಸಿಂಗ್ - 82 ದಿನ ಹಾಜರು

7. ಎಸ್. ರಘು - 85 ದಿನ ಹಾಜರು

8. ಸುರೇಶ ಬಾಬು - 88 ದಿನ ಹಾಜರು

ಇವರಷ್ಟೇ ಅಲ್ಲ, ಕಲಾಪಕ್ಕೆ ಚಕ್ಕರ್ ಹೊಡೆದವರ ದೊಡ್ಡ ಲಿಸ್ಟೇ ಇದೆ. ತಮ್ಮ ತಮ್ಮ ಕ್ಷೇತ್ರಕ್ಕೆ ಸರ್ಕಾರ ನೀಡಿದ ಅನುದಾನ, ಅದರ ಬಳಕೆ, ಅಥವಾ ಅನುದಾನದ ಕೊರತೆ ಇದೆಲ್ಲದರ ಬಗ್ಗೆ ಚರ್ಚಿಸೋಕೆ ಸದನ ವೇದಿಕೆ. ಆದರೆ, ಇಂಥಾ ವೇದಿಕೆಗೆ ಹಾಜರಾಗಿಲ್ಲ ಎಂದರೆ ಯಾವ ಪುರುಷಾರ್ಥಕ್ಕೆ ಇವರು ಒಂದು ಕ್ಷೇತ್ರವನ್ನ ಪ್ರತಿನಿಧಿಸ್ತಾರೆ. ಕೇವಲ ಸರ್ಕಾರಿ ಸವಲತ್ತು ಪಡಿಯೋಕಾ ಅನ್ನೋದು ಜನಸಾಮಾನ್ಯರ ಪ್ರಶ್ನೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕನ್ನಡ ಭಾಷೆ ಕಲಿಸದ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ: ಸಚಿವ ಮಧು ಬಂಗಾರಪ್ಪ
ಹೆಣ್ಣು ಭ್ರೂಣ ಹತ್ಯೆ ತಡೆಗೆ ಪ್ರತಿ ಜಿಲ್ಲೆಗೆ ನೋಡಲ್‌ ಅಧಿಕಾರಿ ನೇಮಕ: ಸಚಿವ ದಿನೇಶ್‌ ಗುಂಡೂರಾವ್‌