ಕವರ್ ಸ್ಟೋರಿ ಸುದ್ದಿಗೆ ಸದನದಲ್ಲಿ ಭಾರಿ ಚರ್ಚೆ

Published : Jun 07, 2017, 12:01 AM ISTUpdated : Apr 11, 2018, 12:47 PM IST
ಕವರ್ ಸ್ಟೋರಿ ಸುದ್ದಿಗೆ ಸದನದಲ್ಲಿ ಭಾರಿ ಚರ್ಚೆ

ಸಾರಾಂಶ

ಸರ್ಕಾರದ ಯೋಜನೆಗಳಲ್ಲಿ ಆಗುತ್ತಿರುವ ಅಕ್ರಮಗಳು ಹಾಗೂ ಭ್ರಷ್ಟ ಅಧಿಕಾರಿಗಳ ಅಟಾಟೋಪವನ್ನ ಸುವರ್ಣ ನ್ಯೂಸ್'ನ ಕವರ್ ಸ್ಟೋರಿ ತಂಡ ಎಳೆಎಳೆಯಾಗಿ ಬಿಚ್ಚಿಟ್ಟಿತ್ತು. ಇದೀಗ, ಸುವರ್ಣ ನ್ಯೂಸ್'ನಲ್ಲಿ ಪ್ರಸಾರವಾದ ಮೂರು ವರದಿಗಳು ನಿನ್ನೆ ನಡೆದ ಸದನದಲ್ಲಿ ಪ್ರಸ್ತಾಪವಾಗಿವೆ.

ಬೆಂಗಳೂರು(ಜೂ.06): ಸರ್ಕಾರ ಯೋಜನೆಗಳನ್ನೇನೋ ಜರಿಗೊಳಿಸುತ್ತೆ. ಆದರೆ, ಈ ಯೋಜನೆಯ ಲಾಭ ಪಡೆಯುವವರು ಜನರಲ್ಲ. ಬದಲಾಗಿ ರಾಜ್ಯದ ಭ್ರಷ್ಟ ಅಧಿಕಾರಿಗಳು. ಹೌದು, ಸರ್ಕಾರ ನಡೆಯುವ ಅಕ್ರಮಗಳ ಕುರಿತು ಸುವರ್ಣ ನ್ಯೂಸ್ ಕವರ್ ಸ್ಟೋರಿ ತಂಡ ಎಳೆಎಳೆಯಾಗಿ ರಾಜ್ಯದ ಜನತೆಯ ಮುಂದಿಟ್ಟಿತ್ತು. ಸುವರ್ಣ ನ್ಯೂಸ್ ಕವರ್ ಸ್ಟೋರಿ ತಂಡದ ಈ ವರದಿ ನಿನ್ನೆ ಸದನದಲ್ಲಿ ಭಾರೀ ಚರ್ಚೆಯಾಗಿದೆ.

ಸರ್ಕಾರದ ಯೋಜನೆಗಳಲ್ಲಿ ಆಗುತ್ತಿರುವ ಅಕ್ರಮಗಳು ಹಾಗೂ ಭ್ರಷ್ಟ ಅಧಿಕಾರಿಗಳ ಅಟಾಟೋಪವನ್ನ ಸುವರ್ಣ ನ್ಯೂಸ್'ನ ಕವರ್ ಸ್ಟೋರಿ ತಂಡ ಎಳೆಎಳೆಯಾಗಿ ಬಿಚ್ಚಿಟ್ಟಿತ್ತು. ಇದೀಗ, ಸುವರ್ಣ ನ್ಯೂಸ್'ನಲ್ಲಿ ಪ್ರಸಾರವಾದ ಮೂರು ವರದಿಗಳು ನಿನ್ನೆ ನಡೆದ ಸದನದಲ್ಲಿ ಪ್ರಸ್ತಾಪವಾಗಿವೆ.

ರಾಜ್ಯದಲ್ಲಿ ಜಾನುವಾರುಗಳ ಮೇವಿನ ಹೆಸರಲ್ಲಿ ನಡೆಯುತ್ತಿದ್ದ ಕೋಟಿ ಕೋಟಿ ಹಗರಣವನ್ನ ಈ ಎರಡು ವರದಿ ಎಳೆ ಎಳೆಯಾಗಿ ರಾಜ್ಯದ ಜನತೆಯ ಮುಂದಿಟ್ಟಿತ್ತು. ಮಾರ್ಚ್ 10ರಂದು ಕಟುಕ ಸರ್ಕಾರ ಎಂಬ ಶೀರ್ಷಿಕೆಯಡಿ ಪ್ರಸಾರವಾದ ಕವರ್ ಸ್ಟೋರಿ ವರದಿಯಲ್ಲಿ ಚಾಮರಾಜನಗರ ಸೇರಿದಂತೆ ಹಲವೆಡೆ ಜಾನುವಾರುಗಳು ಮೇವಿಲ್ಲದೆ ಸಾವನ್ನಪ್ಪುತ್ತಿರುವ ವರದಿಯನ್ನ ವಿಸ್ತೃತವಾಗಿ ಪ್ರಸಾರ ಮಾಡಿತ್ತು. ಇದರ ಬೆನ್ನಲ್ಲೇ, ಈ ರೀತಿ ಗೋವುಗಳ ಸಾವಿಗೆ ಕಾರಣವಾದ ಮೇವು ಹಗರಣವನ್ನೂ  ಕವರ್ ಸ್ಟೋರಿ ತಂಡ ಪ್ರಸಾರ ಮಾಡಿತ್ತು. ಅಲ್ಲದೇ, ರಾಜ್ಯದ ಗೋವುಗಳ ರಕ್ಷಣೆಗಾಗಿ ಸುವರ್ಣ ನ್ಯೂಸ್ ಗೋವು-ನೋವು ಅಭಿಯಾನ ಕೂಡ ಮಾಡಿತ್ತು. ಈ ಎರಡು ವರದಿಗಳು ಸದನದಲ್ಲಿ ಪ್ರಸ್ತಾಪವಾದವು.

ವಿಧಾನಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದ ಜಗದೀಶ್​ ಶೆಟ್ಟರ್​, ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಗೋಶಾಲೆಗಳ ಮೇವು ಪೊರೈಕೆಯಲ್ಲಿ ನಡೆದಿರುವ ಅವ್ಯವಹಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಿಡಿ ಕಾರಿದರು.

ದುರುಪಯೋಗ ಒಪ್ಪಿಕೊಂಡ ಕೃಷಿ ಸಚಿವರು

ಕೃಷಿ ಭಾಗ್ಯ ಯೋಜನೆಯಲ್ಲಿ ನಡೆದಿರುವ ಕೋಟಿ ಕೋಟಿ ರೂಪಾಯಿ ಅಕ್ರಮದ ಕುರಿತು ಜೂನ್ 2ರಂದು ಸುವರ್ಣ ನ್ಯೂಸ್ ಕೃಷಿ ದೌರ್ಭಾಗ್ಯ ಎಂಬ ಶೀರ್ಷಿಕೆಯಡಿ ವರದಿ ಪ್ರಸಾರವಾಗಿತ್ತು. ಈ ಕುರಿತು ಕಾಂಗ್ರೆಸ್'ನ ಹೆಚ್.ಎಂ. ರೇವಣ್ಣ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೃಷಿ ಸಚಿವ ಕೃಷ್ಣಭೈರೇಗೌಡ, ಕೃಷಿಭಾಗ್ಯ ದುರುಪಯೋಗ ಒಪ್ಪಿಕೊಂಡರು. ಅಲ್ಲದೆ ಈ ಬಗ್ಗೆ ತನಿಖೆ ನಡೆಸಿ ತಪಿತಸ್ಥರ ವಿರುದ್ದ ಕ್ರಮ ತೆಗೆದುಕೊಳ್ತೀವಿ ಅಂತಲೂ ಸಚಿವರು ಭರವಸೆ ನೀಡಿದರು.

ಸುವರ್ಣ ನ್ಯೂಸ್ ನ ವರದಿಗಳು ಸರ್ಕಾರದ ಗಮನ ಸೆಳೆದಿದ್ದು, ಕೋಟಿ ಕೋಟಿ ಅಕ್ರಮ ನಡೆದಿರುವ ಬಗ್ಗೆ ಸರ್ಕಾರದ ಕಣ್ಣು ತೆರೆಸಿದೆ. ಕೊಟ್ಟ ಭರವಸೆಯಂತೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡರೆ ನಾವು ಶ್ರಮ ಪಟ್ಟು ಮಾಡಿದ ವರದಿಯೂ ಸಾರ್ಥಕವಾದಂತೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
ಪೌರತ್ವ ಸಿಗುವ ಮುನ್ನವೇ ವೋಟರ್‌ ಲಿಸ್ಟ್‌ನಲ್ಲಿ ಹೆಸರು, ಸೋನಿಯಾ ಗಾಂಧಿಗೆ ನೋಟಿಸ್‌ ಕೊಟ್ಟ ದೆಹಲಿ ಕೋರ್ಟ್!