ನಾನೇನು ಗೋಲಿ ಆಡಲು ಹೋಗಿರಲಿಲ್ಲ : ಶಾಸಕರ ಉಡಾಫೆ ಉತ್ತರ

Published : Sep 26, 2017, 08:23 PM ISTUpdated : Apr 11, 2018, 12:59 PM IST
ನಾನೇನು ಗೋಲಿ ಆಡಲು ಹೋಗಿರಲಿಲ್ಲ : ಶಾಸಕರ ಉಡಾಫೆ ಉತ್ತರ

ಸಾರಾಂಶ

ಶಾಸಕರ ಈ ವರ್ತನೆಗೆ ಬೇಸತ್ತ ವಾಲ್ಮಿಕಿ ಸಮುದಾಯದ ಮುಖಂಡರು ಸಭೆಯನ್ನ ಬಹಿಷ್ಕರಿಸಿ ಹೊರೆ ನಡೆದರು. ನಂತರ ಸಮುದಾಯದ ಮುಖಂಡರ ಅನುಪಸ್ಥಿತಿಯಲ್ಲಿ ಶಾಸಕರು ಹಾಗೂ ತಹಶಿಲ್ದಾರ್ ಸಭೆಯನ್ನು ಮುಂದುವರೆಸಿ ಕಾರ್ಯಕ್ರಮದ ರೂಪುರೇಷುಗಳ ಬಗ್ಗೆ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ತಿಳಿಸಿದರು.

ನೆಲಮಂಗಲ(ಸೆ.26): ವಾಲ್ಮಿಕಿ ಜಯಂತಿ ದಿನಾಚರಣೆ ಪೂರ್ವಭಾವಿ ಸಭೆಯಲ್ಲಿ ಜೆಡಿಎಸ್ ಶಾಸಕ ಉದ್ಧಟತನದ  ಉತ್ತರ ನೀಡಿದ್ದಾರೆ.

ಪಟ್ಟಣದ ತಾಲೂಕು ಕಚೇರಿಯಲ್ಲಿ ಏರ್ಪಡಿಸಿದ್ದ  ವಾಲ್ಮಿಕಿ ಜಯಂತಿಯಲ್ಲಿ ಶಾಸಕ ಶ್ರೀನಿವಾಸ ಮೂರ್ತಿ ತಡವಾಗಿ ಆಗಮಿಸಿದ್ದಾರೆ. ಇದನ್ನು ವೇದಿಕೆಯಲ್ಲಿದ್ದ ಮುಖಂಡರು ಪ್ರಶ್ನಿಸಿದರು. ಅದಕ್ಕೆ ಉಡಾಫೆ ಉತ್ತರ ನೀಡಿದ ಶಾಸಕರು ಇದುವರೆಗೂ ನಾನು ಗೋಲಿ ಆಡಲು ಹೋಗಿರಲಿಲ್ಲ' ಎಂದು ಉದ್ಧಟತನದಿಂದ ವರ್ತಿಸಿದ್ದಾರೆ.

ಶಾಸಕರ ಈ ವರ್ತನೆಗೆ ಬೇಸತ್ತ ವಾಲ್ಮಿಕಿ ಸಮುದಾಯದ ಮುಖಂಡರು ಸಭೆಯನ್ನ ಬಹಿಷ್ಕರಿಸಿ ಹೊರೆ ನಡೆದರು. ನಂತರ ಸಮುದಾಯದ ಮುಖಂಡರ ಅನುಪಸ್ಥಿತಿಯಲ್ಲಿ ಶಾಸಕರು ಹಾಗೂ ತಹಶಿಲ್ದಾರ್ ಸಭೆಯನ್ನು ಮುಂದುವರೆಸಿ ಕಾರ್ಯಕ್ರಮದ ರೂಪುರೇಷುಗಳ ಬಗ್ಗೆ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ತಿಳಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ಹಾಗೆ ಅಂದಿದ್ದು ನಿಜ, ಆದರೆ ನಾನು ಬೇರೆ ಸರ್ಕಾರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾಗ ತಡವಾಗುವ ಬಗ್ಗೆ ಸಭೆಯ ಅಧ್ಯಕ್ಷರಿಗೆ ದೂರವಾಣಿ ಮುಖಾಂತರ ತಿಳಿಸಿದ್ದೆ. ಹಾಗೂ ನಾನು ಯಾವುದೇ ಸಮುದಾಯವನ್ನು ಕಡೆಗಣಿಸಿಲ್ಲ. ಕೆಲವರು ಉದ್ದೇಶಪೂರ್ವಕವಾಗಿ ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಿದ್ದಾರೆ ಎಂದು ಸಮಜಾಯಿಷಿ ನೀಡಿದರು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕನ್ನಡ ಭಾಷೆ ಕಲಿಸದ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ: ಸಚಿವ ಮಧು ಬಂಗಾರಪ್ಪ
ಹೆಣ್ಣು ಭ್ರೂಣ ಹತ್ಯೆ ತಡೆಗೆ ಪ್ರತಿ ಜಿಲ್ಲೆಗೆ ನೋಡಲ್‌ ಅಧಿಕಾರಿ ನೇಮಕ: ಸಚಿವ ದಿನೇಶ್‌ ಗುಂಡೂರಾವ್‌