
ಚೆನ್ನೈ(ಫೆ.18): ವಿಶ್ವಾಸಮತವಾದ ಇಂದು ತಮಿಳುನಾಡು ವಿಧಾನಸಭೆಯಲ್ಲಿ ಅನೇಕ ರಾಜಕೀಯ ಹೈಡ್ರಾಮ ನಡೆಯಿತು. ಹಲವು ನಾಟಕೀಯ ಬೆಳವಣಿಗೆಯ ಮಧ್ಯಯೂ ಮುಖ್ಯಮಂತ್ರಿ ಕೆ. ಪಳಿನಿಸ್ವಾಮಿ ವಿಶ್ವಾಸಮತ ಗೆದ್ದಿದ್ದಾರೆ. ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ಆರೋಪಿಸಿ ಮರೀನಾ ಬೀಚ್'ನಲ್ಲಿ ತಮ್ಮ ಡಿಎಂಕೆ ಶಾಸಕರೊಂದಿಗೆ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ವಿರೋಧ ಪಕ್ಷದ ನಾಯಕ ಎಂ.ಕೆ. ಸ್ಟಾಲಿನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಈ ನಡುವೆ ಸದನದಿಂದ ಹೊರಬಂದು ಹರಿದ ಶರ್ಟ್ ಪ್ರದರ್ಶನ ಮಾಡಿದ ಸ್ಟಾಲಿನ್ 'ಸ್ಪೀಕರ್ ಧನಪಾಲ್ ನನ್ನ ಬಟ್ಟೆಯನ್ನು ಹರಿದರು, ಚೆನ್ನಾಗಿ ಥಳಿಸಿದರು. ನಂತರ ತಾವೇ ತಮ್ಮ ಶರ್ಟ್ ಹರಿದುಕೊಂಡು ನಮ್ಮನ್ನು ದೂರುತ್ತಿದ್ದಾರೆ.ಪೊಲೀಸರು ನಮ್ಮನ್ನು ಬಲವಂತವಾಗಿ ಹೊರಹಾಕಿದ್ದು, ಘಟನೆಯ ಬಗ್ಗೆ ರಾಜ್ಯಪಾಲರಿಗೆ ದೂರು ನೀಡುತ್ತೇವೆ ಎಂದು ತಿಳಿಸಿದ್ದಾರೆ.
88 ಶಾಸಕರ ಉಚ್ಚಾಟನೆ
ವಿಧಾನಸಭೆಯಲ್ಲಿ ಗದ್ದಲ ಮಾಡಿದ ಹಿನ್ನೆಲೆಯಲ್ಲಿ ಡಿಎಂಕೆಯ 88 ಶಾಸಕರನ್ನು ಸ್ವೀಕರ್ ಧನಪಾಲ್ ಉಚ್ಚಾಟಿಸಿದ್ದಾರೆ. ಗದ್ದಲ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ತಮಿಳುನಾಡು ವಿಧಾನಸಭೆ ಸುತ್ತಾಮುತ್ತ 2 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.