ಪ್ರಾಣಿ ಪ್ರೇಮಿ ಮುಗ್ಧ ಬಾಲಕನಿಗೆ ‘ಪೇಟಾ’ ತೊಡಿಸಿ ಗೌರವ

By Web DeskFirst Published Apr 27, 2019, 8:14 PM IST
Highlights

ಈ ಪುಟ್ಟ ಬಾಲಕನ ಸಾಧನೆಗೆ [People for the Ethical Treatment of Animals] ಪೇಟಾ  ಪ್ರಶಸ್ತಿ ನೀಡಿ ಸನ್ಮಾನಿಸಿದೆ.

ನವದೆಹಲಿ[ಏ. 27]   ಕೋಳಿಯೊಂದನ್ನು ಆಸ್ಪತ್ರೆಗೆ ದಾಖಲಿಸಿದ್ದ ಮುಗ್ಧ ಬಾಲಕನನ್ನು  ಪೇಟಾ ಗೌರವಿಸಿದೆ. 

ತನ್ನ ಸೈಕಲ್ಲಿಗೆ ಆಕಸ್ಮಿಕವಾಗಿ ಸಿಕ್ಕ ಕೋಳಿಯನ್ನು ಆರು ವರ್ಷದ ಈ ಬಾಲಕ ಕೂಡಲೆ ಆಸ್ಪತ್ರೆಗೆ ಕೊಂಡೊಯ್ದಿದ್ದ.  ಬಾಲಕ ಡೆರೆಕ್ ಸಿ ಲಾಲ್‍ಛನ್‌ಹಿಮಾಗೆ ಈಘ ಪೇಟಾ ಹಾಕಿ ಗೌರವ ನೀಡಲಾಗಿದೆ.

ಬಾಲಕ ಸೈಕಲ್ ತುಳಿಯುತ್ತಿರಬೇಕಾದರೆ ಪಕ್ಕದ ಮನೆಯ ಕೋಳಿ ಮರಿ ಸೈಕಲ್ ಅಡಿಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದೆ. ಇದ್ಯಾವುದನ್ನೂ ಅರಿಯದ ಡೆರೆಕ್ ಕೋಳಿ ಮರಿಯನ್ನು ಹಿಡಿದು ಮನೆಗೆ ಓಡಿದ್ದ.  ಒಂದು ಕೈನಲ್ಲಿ 10 ರೂ. ನೋಟು ಇನ್ನೊಂದು ಕೈನಲ್ಲಿ ಕೋಳಿಮರಿ ಹಿಡಿದ ಪೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ಪೇಟಾ ಬಾಲಕನನ್ನು ಕಂಪಾಸಿನಿಯೇಟ್ ಕಿಡ್ ಎಂಬ ಗೌರವ ನೀಡಿ ಸನ್ಮಾನಿಸಿದೆ.

click me!