(ವಿಡಿಯೋ)ನಾಪತ್ತೆಯಾದ ರೈತ ಹೆಬ್ಬಾವಿನ ಹೊಟ್ಟೆಯಲ್ಲಿ ಪತ್ತೆ!

Published : Mar 30, 2017, 08:50 AM ISTUpdated : Apr 11, 2018, 01:08 PM IST
(ವಿಡಿಯೋ)ನಾಪತ್ತೆಯಾದ ರೈತ ಹೆಬ್ಬಾವಿನ ಹೊಟ್ಟೆಯಲ್ಲಿ ಪತ್ತೆ!

ಸಾರಾಂಶ

ಜಮೀನಿಗೆ ಆಗಮಿಸಿದ್ದ ರೈತನೋರ್ವನನ್ನು ದೈತ್ಯ ಹೆಬ್ಬಾವೊಂದು ನುಂಗಿ ಹಾಕಿರುವ ಘಟನೆ ಇಂಡೋನೇಷ್ಯಾದಲ್ಲಿ ವರದಿಯಾಗಿದೆ.

ಜಕಾರ್ತ(ಮಾ.30): ಜಮೀನಿಗೆ ಆಗಮಿಸಿದ್ದ ರೈತನೋರ್ವನನ್ನು ದೈತ್ಯ ಹೆಬ್ಬಾವೊಂದು ನುಂಗಿ ಹಾಕಿರುವ ಘಟನೆ ಇಂಡೋನೇಷ್ಯಾದಲ್ಲಿ ವರದಿಯಾಗಿದೆ.

ಸುಲಾವೆಸಿ ಪೂರ್ವ ದ್ವೀಪದ ಸಾಲುಬಿರೊ ಗ್ರಾಮದ ರೈತನನ್ನು ದೈತ್ಯ ಹೆಬ್ಬಾವು ನುಂಗಿದ್ದು, ಹೆಬ್ಬಾವನ್ನು ಹಿಡಿದು ಅದರ ಹೊಟ್ಟೆಯನ್ನು ಸೀಳಿದಾಗ ರೈತನ  ಶವ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ. ಮೃತ ರೈತನನ್ನು ಅಕ್ಬರ್ ಎಂದು ಗುರುತಿಸಲಾಗಿದ್ದು, ಸಾಲುಬಿರೋ ಗ್ರಾಮದಲ್ಲಿ ಈತ ತಾಳೆ ಹಣ್ಣು ಬೆಳೆದಿದ್ದ. ಹಣ್ಣುಕೊಯ್ಯಲು ತೆರಳಿದ್ದ ವೇಳೆ ಆತ ನಾಪತ್ತೆಯಾಗಿದ್ದ.

ಈತನ ಶೋಧಕ್ಕಾಗಿ ಇಡೀ ಗ್ರಾಮಸ್ಥರು ಜಮೀನಿಗೆ ಆಗಮಿಸಿದ್ದಾಗ ಅಲ್ಲಿ ದೈತ್ಯ ಹೆಬ್ಬಾವು ಪತ್ತೆಯಾಗಿತ್ತು ಮತ್ತು ಹಾವಿನ ಹೊಟ್ಟೆ ದೈತ್ಯಾಕಾರದಲ್ಲಿ ಊದಿಕೊಂಡಿತ್ತು. ಅಲ್ಲದೆ ಅದೇ ಜಮೀನಿನಲ್ಲಿ ರೈತ ಅಕ್ಬರ್ ಧರಿಸಿದ್ದ ಬೂಟುಗಳು  ಮತ್ತು ಸಮೀಪದಲ್ಲಿ ಆತ ಜಮೀನಿಗೆ ತಂದಿದ್ದ ಕೆಲ ಕೃಷಿ ಸಲಕರಣೆಗಳು ಪತ್ತೆಯಾಗಿತ್ತು. ಇದರಿಂದ ಅನುಮಾನಗೊಂಡ ರೈತರು ಹಾವನ್ನು ಹಿಡಿದು,ಹೊಟ್ಟೆ ಸೀಳಿದಾಗ ಮನುಷ್ಯನ ಶವ ಪತ್ತೆಯಾಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಎಚ್‌ಡಿಕೆ ಮನುವಾದಿ ಆಗಿದ್ದಾರೆ ಎಂದ ಸಿದ್ದು: ಸಿದ್ದರಾಮಯ್ಯ ಮಜಾವಾದಿ ಎಂದ ಎಚ್‌ಡಿಕೆ
ವಿರೋಧದ ಮಧ್ಯೆ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಶಂಕು