ಬೆಂಗಳೂರಲ್ಲಿ ಕನ್ನಡ ಧ್ವಜಸ್ತಂಭ ಕೆಡವಲು ದುಷ್ಕರ್ಮಿಗಳ ಯತ್ನ

Published : Jul 23, 2017, 12:34 PM ISTUpdated : Apr 11, 2018, 01:10 PM IST
ಬೆಂಗಳೂರಲ್ಲಿ ಕನ್ನಡ ಧ್ವಜಸ್ತಂಭ ಕೆಡವಲು ದುಷ್ಕರ್ಮಿಗಳ ಯತ್ನ

ಸಾರಾಂಶ

* ಬೆಂಗಳೂರಿನ ಜೆಸಿ ನಗರದ ಟಿವಿ ಟವರ್ ಬಳಿ ಕನ್ನಡ ಧ್ವಜ ಕಂಬ ಕೆಡವಲು ಯತ್ನ * ಈ ಹಿಂದೆಯೂ ಕನ್ನಡ ಧ್ವಜ ಕಂಬವನ್ನು ಕೆಡವಲಾಗಿತ್ತು   * ಮತ್ತೆ ಹೊಸದಾಗಿ ಕಂಬವನ್ನು ನಿಲ್ಲಿಸಿದ್ದ ಯುವಕ ಸಂಘ   * ಘಟನಾ ಸ್ಥಳಕ್ಕೆ ಕನ್ನಡಪರ ಸಂಘಟನೆಗಳ ಆಗಮನ

ಬೆಂಗಳೂರು(ಜುಲೈ 23): ಕನ್ನಡ ವಿರೋಧಿ ದುಷ್ಕರ್ಮಿಗಳು ನಗರದಲ್ಲಿ ಮತ್ತೊಮ್ಮೆ ಆಟಾಟೋಪ ಮೆರೆದಿದ್ದಾರೆ. ಜೆಸಿ ನಗರದ ಟಿವಿ ಟವರ್ ಬಳಿ ಕನ್ನಡ ಧ್ವಜದ ಕಂಬವನ್ನು ಕೆಡವುವ ಪ್ರಯತ್ನ ನಡೆದಿರುವುದು ಬೆಳಕಿಗೆ ಬಂದಿದೆ. ಧ್ವಜಸ್ತಂಭ ಆ್ಯಸಿಡ್ ಹಾಕಿ ನಾಶ ಮಾಡಲು ಯತ್ನಿಸಲಾಗಿದೆ. ಸಮೀಪದ ಅಪಾರ್ಟ್'ಮೆಂಟ್'ನ ನಿವಾಸಿಗಳು ಈ ಕೃತ್ಯ ಎಸಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಕನ್ನಡಪರ ಸಂಘಟನೆಗಳು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾಋಎ.

ಈ ಹಿಂದೆಯೂ ಇದೇ ಕನ್ನಡ ಧ್ವಜ ಕಂಬವನ್ನು ಕೆಡವಲಾಗಿತ್ತು. ಆದರೆ, ಏರಿಯಾದ ಯುವಕರ ಸಂಘವು ಹೊಸ ಕಂಬವನ್ನು ನೆಟ್ಟಿತ್ತು. ಇದೀಗ, ಮತ್ತೊಮ್ಮೆ ಕಂಬವನ್ನು ಕಿತ್ತುಹಾಕಲು ಯತ್ನಿಸಿರುವುದು ಕನ್ನಡ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೈಸೂರು ಏಕತಾ ಮಹಲ್‌ ವಿವಾದ, ಕೋರ್ಟ್ ಮೆಟ್ಟಲೇರಿದ ರಾಜಮಾತೆ ಪ್ರಮೋದಾದೇವಿ!
ವಿಮಾನದ ಬಾಲಕ್ಕೆ ಪ್ಯಾರಾಚೂಟ್ ಸಿಲುಕಿ15,000 ಅಡಿ ಎತ್ತರದಲ್ಲಿ ನೇತಾಡಿದ ಸ್ಕೈಡೈವರ್ ಬದುಕುಳಿದಿದ್ದು ಹೇಗೆ? ವೀಡಿಯೋ