ಶಿವಲಿಂಗದಲ್ಲಿ ಮೂಡಿದ ಜಡೇಶ್ವರ ಮೂರ್ತಿ‌ಯಾಕಾರ, ಏನಿದು ಪವಾಡ?

First Published Jul 7, 2018, 9:13 AM IST
Highlights

ಪ್ರಕೃತಿಯಲ್ಲಿ ಸಾಕಷ್ಟು ಪವಾಡಗಳು ನಡೆಯುತ್ತಲೇ ಇರುತ್ತದೆ. ಆದರೆ, ಕೆಲವೊಂದಕ್ಕೆ ವೈಜ್ಞಾನಿಕ ಕಾರಣ ನೀಡುವಲ್ಲಿ ಯಶಸ್ವಿಯಾದರೂ, ಮತ್ತೆ ಕೆಲವೊಂದು ತರ್ಕಕ್ಕೆ ನಿಲುಕುವಂತೆ ಇರುವುದಿಲ್ಲ. ಅಂಥ ಪವಾಡಗಳ ಸಾಲಿಗೆ ಮತ್ತೊಂದು ಸೇರ್ಪಡೆಯಾಗಿದೆ, ಓದಿ ಈ ಸುದ್ದಿಯನ್ನು...

ಬೆಳಗಾವಿ (ಜು.7): ಇದ್ದಕ್ಕಿದ್ದಂತೆ ಶಿವಲಿಂಗದ ಮೇಲೆ ಜಡೇಶ್ವರ ಮೂರ್ತಿಯಾಕಾರದ ಚಿತ್ರ ಮೂಡಿದ್ದು, ಹಲವು ಅಚ್ಚರಿ, ಆಶ್ಚರ್ಯಗಳಿಗೆ ಕಾರಣವಾಗಿದೆ. ಪವಾಡದಂಥ ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ಜನರು ಎಲ್ಲೆಡೆಯಿಂದ ಆಗಮಿಸುತ್ತಿದ್ದಾರೆ. ತಮ್ಮ ಮೊಬೈಲ್‌ನಲ್ಲಿ ಫೋಟೋ ತೆಗೆದುಕೊಂಡು, ಸಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಬೆಳಗಾವಿ ಜಿಲ್ಲೆಯ ರಾಮದುಗ೯ ಪಟ್ಟಣದಲ್ಲಿ ನಡೆದ ಈ ಘಟನೆ ಅಚ್ಚರಿ ಮೂಡಿಸಿದೆ. ಪಟ್ಟಣದ ಹೊರವಲಯದ 78 ಅಡಿ ಎತ್ತರದ ಬೃಹತ್ ಶಿವನಮೂತಿ೯ ಕೆಳಭಾಗದಲ್ಲಿರೋ ಶಿವಲಿಂಗದಲ್ಲಿ ಇಂಥದ್ದೊಂದು ಅದ್ಭುತ ಸೃಷ್ಟಿಯಾಗಿದೆ. ನಾಲ್ಕು ತಿಂಗಳ ಹಿಂದೆಯಷ್ಟೇ ಈ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ. 

ಮಹಾರಾಷ್ಟ್ರದ ಸ್ವಾಮೀಜಿಯೊಬ್ಬರು ಸ್ಥಳಕ್ಕೆ ಆಗಮಿಸಿ, ಈ ಬಗ್ಗೆ ತಿಳಿಸಿದಾಗ ವಿಸ್ಮಯವನ್ನು ದೇವಾಲಯದ ಅಚ೯ಕರು ಗಮನಿಸಿದ್ದಾರೆ.

ಶಿವಲಿಂಗದಲ್ಲಿ ಸಾಕ್ಷಾತ್ ಜಡೇಶ್ವರ ಮೂತಿ೯ ಆಕಾರ ಕಂಡು ಪೂಜೆ ಪುನಸ್ಕಾರ ನಡೆಸುತ್ತಿದ್ದಾರೆ ಭಕ್ತರು.

click me!