ಗೋರಿಯ ಚಾದರ್‌ನಲ್ಲಿ ಉಸಿರಾಟದ ಅನುಭವ!: ಮದ್ದೂರಿನ ದರ್ಗಾವೊಂದರಲ್ಲಿ ನಡೆಯಿತಂತೆ ವಿಸ್ಮಯ

Published : May 26, 2017, 11:07 AM ISTUpdated : Apr 11, 2018, 01:00 PM IST
ಗೋರಿಯ ಚಾದರ್‌ನಲ್ಲಿ ಉಸಿರಾಟದ ಅನುಭವ!: ಮದ್ದೂರಿನ ದರ್ಗಾವೊಂದರಲ್ಲಿ ನಡೆಯಿತಂತೆ ವಿಸ್ಮಯ

ಸಾರಾಂಶ

ಜಮ್ಕಾ ಮಖಾನ್‌ ಗೋರಿಯ ಚಾದರ್‌ನಲ್ಲಿ ಉಸಿರಾಟದ ಅನುಭವವಾಗಿದ್ದು ಜನರಲ್ಲಿ ಕುತೂಹಲ ಮೂಡಿಸಿದ ಘಟನೆ ಪಟ್ಟಣದ ಹೊಳೆ ಬೀದಿಯಲ್ಲಿರುವ ಹಜರತ್‌ ದರ್ಗಾದಲ್ಲಿ ನಡೆದಿದೆ.

ಮದ್ದೂರು(ಮೇ.26): ಜಮ್ಕಾ ಮಖಾನ್‌ ಗೋರಿಯ ಚಾದರ್‌ನಲ್ಲಿ ಉಸಿರಾಟದ ಅನುಭವವಾಗಿದ್ದು ಜನರಲ್ಲಿ ಕುತೂಹಲ ಮೂಡಿಸಿದ ಘಟನೆ ಪಟ್ಟಣದ ಹೊಳೆ ಬೀದಿಯಲ್ಲಿರುವ ಹಜರತ್‌ ದರ್ಗಾದಲ್ಲಿ ನಡೆದಿದೆ.

1914ರಲ್ಲಿ ಹಜರತ್‌ ದರ್ಗಾ ನಿರ್ಮಾಣವಾಗಿದ್ದು ಇದರಲ್ಲಿ ಗುಲ್ಜಾರ್‌ ಅಲೀಷ್‌, ಚಮಾಷ ವಲೀಬಾ, ಸೈದಾನಿ ಮೋಬಿ ಎಂಬ ಮೂರು ಮಹಾತ್ಮರ ಸಮಾಧಿಗಳಿವೆ. ಬುಧವಾರ ರಾತ್ರಿ ಹಿಂದೂ ಧರ್ಮೀಯ ಮಹಿಳೆಯೊಬ್ಬಳು ತಾಯತ ಕಟ್ಟಿಸಿಕೊಳ್ಳಲು ದರ್ಗಾಗೆ ಆಗಮಿಸಿದಾಗ ಮೂರು ಗೋರಿಗಳ ಚಾದರ ಅಲುಗಾಡಿದೆ. ಇದನ್ನು ಸಾವಿರಾರು ಮಂದಿ ದರ್ಗಾಗೆ ಬಂದ ಹಿನ್ನೆಲೆಯಲ್ಲಿ ನೂಕುನುಗ್ಗಲು ಉಂಟಾಯಿತು.

ಗುರುವಾರ ಬೆಳಗ್ಗೆ ಆಗಮಿಸಿದ ಜಿಲ್ಲಾಧಿಕಾರಿ ಜಿಯಾವುಲ್ಲಾ ಗೋರಿ ಮೇಲಿನ ಚಾದರ ತೆಗೆದು ಉಸಿರಾಟವನ್ನು ಪರಿಶೀಲಿಸುವಂತೆ ಗೋರಿಯ ಉಸ್ತುವಾರಿ ನೋಡಿಕೊಳ್ಳುವವರಿಗೆ ಹೇಳಿದರು. ಆದರೆ ಅದು ನಮ್ಮ ಸಂಪ್ರದಾಯ ಮತ್ತು ಭಾವನೆಗಳಿಗೆ ವಿರುದ್ಧವಾಗಿದೆ ಎಂದು ದರ್ಗಾದ ಮೌಲ್ವಿಗಳು ಚಾದರದ ಬಟ್ಟೆಯನ್ನು ತೆಗೆಯುವುದಕ್ಕೆ ನಿರಾಕರಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾತ್ರಿ ಕಣ್ಣೇ ಕಾಣೊಲ್ಲವೆಂದು ಹಗಲಿನಲ್ಲಿಯೇ ಕಿರುತೆರೆ ನಟ ಪ್ರವೀಣ್ ಮನೆಗೆ ಕನ್ನ ಹಾಕಿದ ಇರುಳು ಕುರುಡ!
ಜೂನಿಯರ್ ಇಂದಿರೆ, ಪ್ರಚಂಡ ಪ್ರಿಯಾಂಕಾ; ಬದ್ಧವೈರಿಗಳ ಬಾಯಲ್ಲೇ ಗುಣಗಾನ