ಬಿಬಿಸಿ ಬಾತ್ಮೀದಾರ,ಸಿಬ್ಬಂದಿಯ ನಿಷೇಧಕ್ಕೆ ಕೇಂದ್ರ ಪರಿಸರ ಮಂತ್ರಾಲಯ ಆಗ್ರಹ

By Suvarna Web DeskFirst Published Feb 28, 2017, 9:04 AM IST
Highlights

ಬಾತ್ಮೀದಾರ ಜಸ್ಟಿನ್ ರೌಲಟ್ ಹಾಗೂ ಆತನ ಸಿಬ್ಬಂದಿ ಅಸ್ಸಾಂ'ನ ಕಾಜಿರಂಗಾ ಹುಲಿ ಸಂರಕ್ಷಣ ಪ್ರದೇಶದಲ್ಲಿ 'ಒನ್ ವರ್ಲ್ಡ್: ಕನ್ಸರ್ವೇಶನ್ ಫಾರ್ ಕಿಲ್ಲಿಂಗ್' ಎಂಬ ಸಾಕ್ಷಚಿತ್ರ ನಿರ್ಮಿಸಲು ಆಗಮಿಸಿದ್ದು, ಆದರೆ ಈತ ಸಾಕ್ಷ್ಯಚಿತ್ರ ನಿರ್ಮಣಕ್ಕೂ ಮುನ್ನ ನೀಡಿರುವ ಸಾರಾಂಶವು ತಪ್ಪು ಮಾಹಿತಿಯಿಂದ ಕೂಡಿದ್ದು,ಅರಣ್ಯ ಇಲಾಖೆಯ ಕೆಲವೊಂದು ನಿಯಮಗಳನ್ನು ಗಾಳಿಗೆ ತೂರಿ ಅನುಮತಿ ನೀಡಬೇಕಾಗುತ್ತದೆ. ಅಲ್ಲದೆ ಆತ ನಿರ್ಮಿಸಲು ಹೊರಟಿರುವ ಸಾಕ್ಷಚಿತ್ರವು ಕೂಡ ವಿವಾದದಿಂದ ಕೂಡಿದೆ.

ನವದೆಹಲಿ(ಫೆ.28): ಕೇಂದ್ರ ಪರಿಸರ ಹಾಗೂ ಅರಣ್ಯ ಇಲಾಖೆಯು ಬಿಬಿಸಿಯ ದಕ್ಷಿಣ ಏಷ್ಯಾ ಬಾತ್ಮೀದಾರ ಜಸ್ಟಿನ್ ರೌಲಟ್ ಹಾಗೂ ಆತನ ಸಿಬ್ಬಂದಿಯನ್ನು ಭಾರತದಿಂದ 5 ವರ್ಷ ನಿಷೇಧಿಸುವುದರ ಜೊತೆ ವೀಸಾಗಳನ್ನು ರದ್ದುಗೊಳಿಸಲು ವಿದೇಶಾಂಗ ಇಲಾಖೆಯನ್ನು ಆಗ್ರಹಿಸಿದೆ.

ಬಾತ್ಮೀದಾರ ಜಸ್ಟಿನ್ ರೌಲಟ್ ಹಾಗೂ ಆತನ ಸಿಬ್ಬಂದಿ ಅಸ್ಸಾಂ'ನ ಕಾಜಿರಂಗಾ ಹುಲಿ ಸಂರಕ್ಷಣ ಪ್ರದೇಶದಲ್ಲಿ    'ಒನ್ ವರ್ಲ್ಡ್: ಕನ್ಸರ್ವೇಶನ್ ಫಾರ್ ಕಿಲ್ಲಿಂಗ್' ಎಂಬ ಸಾಕ್ಷಚಿತ್ರ ನಿರ್ಮಿಸಲು ಆಗಮಿಸಿದ್ದು, ಆದರೆ ಈತ ಸಾಕ್ಷ್ಯಚಿತ್ರ ನಿರ್ಮಣಕ್ಕೂ ಮುನ್ನ ನೀಡಿರುವ ಸಾರಾಂಶವು ತಪ್ಪು ಮಾಹಿತಿಯಿಂದ ಕೂಡಿದ್ದು,ಅರಣ್ಯ ಇಲಾಖೆಯ ಕೆಲವೊಂದು ನಿಯಮಗಳನ್ನು ಗಾಳಿಗೆ ತೂರಿ ಅನುಮತಿ ನೀಡಬೇಕಾಗುತ್ತದೆ. ಅಲ್ಲದೆ ಆತ ನಿರ್ಮಿಸಲು ಹೊರಟಿರುವ ಸಾಕ್ಷಚಿತ್ರವು ಕೂಡ ವಿವಾದದಿಂದ ಕೂಡಿದೆ.

ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹುಲಿ ಸಂರಕ್ಷಿತಾ ಪ್ರಾಧಿಕಾರ, ಅರಣ್ಯ ಇಲಾಖೆಯ ಡೆಪ್ಯುಟಿ ಐಜಿ  ಜಸ್ಟಿನ್ ಹಾಗೂ ಆತನ ತಂಡವನ್ನು 5 ವರ್ಷ ನಿಷೇಧಿಸಲು ಕೇಂದ್ರ ಅರಣ್ಯ ಇಲಾಖೆಗೆ ವರದಿ ಸಲ್ಲಿಸಿದ್ದು, ಈ ಆಧಾರದ ಮೇಲೆ ಇಲಾಖೆಯು ವಿದೇಶಾಂಗ ಮಂತ್ರಾಲಯಕ್ಕೆ ಮನವಿ ಮಾಡಿದೆ.

click me!