ಲ್ಯಾಪ್‌ಟಾಪ್‌ ಕಲಿಯದಿದ್ದರೆ ನೇಪಾಳ ಸಚಿವರಿಗೆ ಗೇಟ್‌ಪಾಸ್‌

First Published May 31, 2018, 11:18 AM IST
Highlights

ಕೆಲಸ ಮಾಡದ ಸೋಮಾರಿ ಸಚಿವರನ್ನು ವಜಾ ಮಾಡುವುದನ್ನು ನೋಡಿದ್ದೇವೆ. ಆದರೆ, ನೇಪಾಳದಲ್ಲಿ ಮಾತ್ರ ಹಾಗಲ್ಲ. ಸಚಿವರು ತಮ್ಮ ಹುದ್ದೆಯನ್ನು ಉಳಿಸಿಕೊಳ್ಳಬೇಕು ಎಂದಾದರೆ ಲ್ಯಾಪ್‌ಟಾಪ್‌ ಬಳಸುವುದನ್ನು ಕಲಿಯಲೇ ಬೇಕು. ಇಲ್ಲವಾದರೆ ಅವರು ಮಂತ್ರಿ ಹುದ್ದೆಯನ್ನು ಕಳೆದುಕೊಳ್ಳಲಿದ್ದಾರೆ!

ಕಠ್ಮಂಡು: ಕೆಲಸ ಮಾಡದ ಸೋಮಾರಿ ಸಚಿವರನ್ನು ವಜಾ ಮಾಡುವುದನ್ನು ನೋಡಿದ್ದೇವೆ. ಆದರೆ, ನೇಪಾಳದಲ್ಲಿ ಮಾತ್ರ ಹಾಗಲ್ಲ. ಸಚಿವರು ತಮ್ಮ ಹುದ್ದೆಯನ್ನು ಉಳಿಸಿಕೊಳ್ಳಬೇಕು ಎಂದಾದರೆ ಲ್ಯಾಪ್‌ಟಾಪ್‌ ಬಳಸುವುದನ್ನು ಕಲಿಯಲೇ ಬೇಕು. ಇಲ್ಲವಾದರೆ ಅವರು ಮಂತ್ರಿ ಹುದ್ದೆಯನ್ನು ಕಳೆದುಕೊಳ್ಳಲಿದ್ದಾರೆ!

ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಓಲಿ ತಮ್ಮ ಸಚಿವ ಸಂಪುಟದ ಹೊಸ ಸಚಿವರಿಗೆ ಇಂಥದ್ದೊಂದು ಎಚ್ಚರಿಕೆ ನೀಡಿದ್ದಾರೆ. ಮುಂದಿನ 6 ತಿಂಗಳಿನಲ್ಲಿ ಅವರು ತಮ್ಮ ಪ್ರಧಾನಿ ಕಚೇರಿಯನ್ನು ಕಾಗದ ರಹಿತ ಮಾಡಲು ಮುಂದಾಗಿದ್ದಾರೆ. ಆ ಬಳಿಕ ಎಲ್ಲಾ ಸಭೆಗಳಿಗೆ ಪೇಪರ್‌ ಬದಲು ಲ್ಯಾಪ್‌ಟಾಪ್‌ ಬಳಸಲಾಗುತ್ತದೆ.

ಇದರ ಪೂರ್ವ ತಯಾರಿಯಾಗಿ ಸಚಿವರು ಲ್ಯಾಪ್‌ಟಾಪ್‌ ಕಲಿಯುವಂತೆ ಸೂಚಿಸಲಾಗಿದೆ. ಹೀಗಾಗಿ ಪ್ರಧಾನಿಯ ಈ ನಿರ್ಧಾರ ಸಚಿವರನ್ನು ಪೇಚಿಗೆ ಸಿಲುಕಿಸಿದೆ.

click me!