ಸ್ಮಾರ್ಟ್ ಸಿಟಿ ಮಾಡಿ ಅಂತ 15 ಕೋಟಿ ಕೊಟ್ರೆ ಕಸಾಯಿಖಾನೆಗೆ ಕೊಟ್ಟ ಸಚಿವ

Published : Oct 07, 2018, 03:23 PM IST
ಸ್ಮಾರ್ಟ್ ಸಿಟಿ ಮಾಡಿ ಅಂತ 15 ಕೋಟಿ ಕೊಟ್ರೆ ಕಸಾಯಿಖಾನೆಗೆ ಕೊಟ್ಟ ಸಚಿವ

ಸಾರಾಂಶ

ಸ್ಮಾರ್ಟ್ ಸಿಟಿ ಮಾಡಿ ಅಂತ 15 ಕೋಟಿ ರೂಪಾಯಿ ಕೊಟ್ರೆ ಕಾಂಗ್ರೆಸ್ ಸಚಿವ ಮಾಡಿದ್ದೇನು ಗೊತ್ತಾ..?

ಮಂಗಳೂರು, [ಅ.07]: ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ಯುಟಿ ಖಾದರ್ ದೊಡ್ಡ ವಿವಾದಕ್ಕೀಡಾಗಿದ್ದಾರೆ. ಮಂಗಳೂರನ್ನ ಸ್ಮಾರ್ಟ್ ಸಿಟಿ ಮಾಡಿ ಅಂತ ಕೊಟ್ಟಿರೋ 15 ಕೋಟಿ ಹಣವನ್ನ ಅಕ್ರಮಗಳ ಆರೋಪ ಹೊತ್ತಿರುವ ಕುದ್ರೋಳಿ ಕಸಾಯಿಖಾನೆಗೆ ಕೊಟ್ಟು ವಿವಾದಕ್ಕೆ ಕಾರಣರಾಗಿದ್ದಾರೆ.

 ಕದ್ದ ದನಗಳನ್ನೆಲ್ಲಾ ಕುದ್ರೋಳಿ ಕಸಾಯಿಖಾನೆಯಲ್ಲೇ ವಧೆ ಮಾಡಲಾಗುತ್ತದೆ ಎಂಬ ಆರೋಪವಿದೆ. ಆದ್ರೆ ಈಗ ಅದೇ ಕಸಾಯಿಖಾನೆಯ ಅಭಿವೃದ್ಧಿಗೆ ಸಚಿವ ಯುಟಿ ಖಾದರ್ 15 ಕೋಟಿ ರೂಪಾಯಿ ಅನುದಾನ ನೀಡಿರೋದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. 

ಒಂದೆಡೆ ಗೋಶಾಲೆಗಳಿಗೆ ಕೊಡಬೇಕಾದ ಅನುದಾನ ಇನ್ನೂ ಮಂಜೂರಾಗಿಲ್ಲ. ಇದ್ರಿಂದ ಗೋ ಶಾಲೆಗಳು ಸರ್ಕಾರ ಮುಂದೆ ಕೈಯೊಡ್ಡುವ ಪರಿಸ್ಥಿತಿ ನಿರ್ಮಾಣವಾಗಿದೆ.  ಈ ನಡುವೆ ಯು.ಟಿ. ಖಾದರ್ ಒಂದೇ ಕಸಾಯಿಖಾನೆಗೆ 15 ಕೋಟಿ ಅನುದಾನ ನೀಡಿದ್ದು ಎಷ್ಟು ಸರಿ ಎಂದು ಆಕ್ರೋಶಗಳು ವ್ಯಕ್ತವಾಗಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪರೀಕ್ಷೆಗೂ ಮುನ್ನ ದ್ವಿತೀಯ PUC ಮತ್ತು SSLC ಪ್ರಶ್ನೆಪತ್ರಿಕೆ ಲೀಕ್ ಆಯ್ತಾ? ಹಣಕ್ಕೆ ಬೇಡಿಕೆ ಇಟ್ಟು ಇನ್ಸ್ಟಾದಲ್ಲಿ ಪೋಸ್ಟ್!
ಶಿಮ್ಲಾದಲ್ಲಿ ಹೈಡ್ರಾಮಾ: ದೆಹಲಿ ಪೊಲೀಸರ ವಿರುದ್ಧ ಹಿಮಾಚಲ ಪೊಲೀಸರಿಂದ ಎಫ್ಐಆರ್ ಬಂಧನ ಬಿಡುಗಡೆ: ಆಗಿದ್ದೇನು?