ತನ್ವೀರ್ ಸೇಠ್ ಕೂಡಲೇ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ಈಶ್ವರಪ್ಪ ಒತ್ತಾಯ

By Suvarna Web DeskFirst Published Nov 10, 2016, 3:24 PM IST
Highlights

ಸರ್ಕಾರಿ ಕಾರ್ಯಕ್ರಮದಲ್ಲಿ ಅಶ್ಲೀಲ ವೀಡಿಯೋ ವೀಕ್ಷಿಸಿದ ತನ್ವೀರ್ ಸೇಠ್ ಅವರ ಕೂಡಲೇ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಂಡನತಕ್ಕೆ ಬೀಳದೇ ಅವರನ್ನು ಸಂಪುಟದಿಂದ ಕೈಬಿಡಬೇಕೆಂದು ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಆಗ್ರಹಿಸಿದ್ದಾರೆ.

ಶಿವಮೊಗ್ಗ (ನ.10): ಸರ್ಕಾರಿ ಕಾರ್ಯಕ್ರಮದಲ್ಲಿ ಅಶ್ಲೀಲ ವೀಡಿಯೋ ವೀಕ್ಷಿಸಿದ ತನ್ವೀರ್ ಸೇಠ್ ಅವರ ಕೂಡಲೇ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಂಡನತಕ್ಕೆ ಬೀಳದೇ ಅವರನ್ನು ಸಂಪುಟದಿಂದ ಕೈಬಿಡಬೇಕೆಂದು ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಆಗ್ರಹಿಸಿದ್ದಾರೆ.

ಟಿಪ್ಪು ಜಯಂತಿಯ ಸರ್ಕಾರಿ ಕಾರ್ಯಕ್ರಮದಲ್ಲಿ ಸಚಿವ ತನ್ವೀರ್ ಸೇಠ್ ಅವರು ಅಶ್ಲೀಲ ವೀಡಿಯೋ ನೋಡಿದ ಘಟನೆಗೆ ನಗರದಲ್ಲಿ ಗುರುವಾರ ಪ್ರತಿಕ್ರಿಯಿಸಿದ ಅವರು, ಜನಸಾಮಾನ್ಯರೇ ಆಗಲಿ, ಯಾರೇ ಆಗಲಿ ಬೇರೆಬೇರೆ ಕಾನೂನುಗಳಿಲ್ಲ. ಇದು ಕಾನೂನಿನ ಸ್ಪಷ್ಟ ಉಲ್ಲಂಘನೆ. ಅದರಲ್ಲೂ ಸರ್ಕಾರಿ ಕಾರ್ಯಕ್ರಮದಲ್ಲಿ ಈ ರೀತಿಯ ವರ್ತನೆ ತಪ್ಪು. ತನ್ವೀರ್ ಸೇಠ್ ಅವರು ಯಾವುದೇ ಸಮರ್ಥನೆ ನೀಡಬಾರದು. ಅವರು ಕೂಡಲೇ ರಾಜಿನಾಮೆ ನೀಡಬೇಕು ಎಂದರು.

ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ ಹೇಳಿಕೆ ಆಶ್ಚರ್ಯವನ್ನುಂಟು ಮಾಡಿತು. ಅಧಿಕಾರಿಗಳಿಂದ ವರದಿ ತರಿಸಿಕೊಳ್ಳುತ್ತೇನೆ ಎಂದು ಅವರು ಹೇಳುತ್ತಿದ್ದಾರೆ. ಯಾವ ಅಧಿಕಾರಿ ಸಚಿವರ ವಿರುದ್ಧ ವರದಿ ನೀಡುತ್ತಾರೆ? ಮುಖ್ಯಮಂತ್ರಿಯವರು ಕಾಮುಕನ ರಕ್ಷಣೆಗೆ ಮುಂದಾಗಿದ್ದಾರೆ ಎಂದು ಟೀಕಿಸಿದರು.

ಮುಖ್ಯಮಂತ್ರಿಯವರು ಎಲ್ಲ ಪ್ರಕರಣದಲ್ಲೂ ಹೀಗೆಯೇ ಮಾಡುತ್ತಿದ್ದಾರೆ. ಕೊಲೆ ಪ್ರಕರಣಗಳಲ್ಲೂ ಸಹ ಮೊದಲು ಬೇರೆ ರೀತಿ ಮಾತನಾಡಿ ನಂತರ ಒಪ್ಪಿಕೊಳ್ಳುತ್ತಾರೆ ಎಂದರು.

ಬಿಜೆಪಿ ಮಂತ್ರಿಗಳು ಇದೇ ರೀತಿ ಕೆಲಸ ಮಾಡಿದಾಗ ಅವರು ಮಾಡಿದ್ದು ತಪ್ಪು ಎಂದು ಒಪ್ಪಿಕೊಂಡೆವು. ಅವರನ್ನು ಮಂತ್ರಿಸ್ಥಾನದಿಂದ ಹೊರಗೆ ಕಳಿಸಿದೆವು. ಅದೇ ರೀತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ರಮ ಕೈಗೊಳ್ಳಲಿ. ತನ್ವೀರ್ ಸೇಠ್ ಅವರಿಂದ ರಾಜಿನಾಮೆ ಪಡೆಯಲಿ ಎಂದರು.

click me!