DySP ಗಣಪತಿ ನಿಗೂಢ ಸಾವು; ಸಿಬಿಐ ಎಫ್'ಐಆರ್'ನಲ್ಲಿ ಮತ್ತೆ ಜಾರ್ಜ್ ಹೆಸರು

Published : Oct 26, 2017, 08:50 PM ISTUpdated : Apr 11, 2018, 12:55 PM IST
DySP ಗಣಪತಿ ನಿಗೂಢ ಸಾವು; ಸಿಬಿಐ ಎಫ್'ಐಆರ್'ನಲ್ಲಿ ಮತ್ತೆ ಜಾರ್ಜ್ ಹೆಸರು

ಸಾರಾಂಶ

DySP ಗಣಪತಿ ನಿಗೂಢ ಸಾವು ಪ್ರಕರಣದಲ್ಲಿ  ಕಾಂಗ್ರೆಸ್​'ಗೆ ಮತ್ತೊಮ್ಮೆ ಮುಜುಗರವಾಗಿದೆ. ಸಿಬಿಐ ಅಧಿಕಾರಿಗಳ FIR ​ನಲ್ಲಿ ಜಾರ್ಜ್  ಹೆಸರು ಕೇಳಿ ಬಂದಿದೆ. ಸಿಬಿಐ ನಡೆಸುತ್ತಿರುವ ತನಿಖೆಯಲ್ಲಿ ಜಾರ್ಜ್ ಹೆಸರು ಉಲ್ಲೇಖವಾಗಿರುವ ಮಾಹಿತಿ  ರಾಷ್ಟ್ರೀಯ ಸುದ್ದಿ ವಾಹಿನಿಗಳಲ್ಲಿ  ಬಹಿರಂಗವಾಗಿದೆ.

ಬೆಂಗಳೂರು (ಅ.26): DySP ಗಣಪತಿ ನಿಗೂಢ ಸಾವು ಪ್ರಕರಣದಲ್ಲಿ  ಕಾಂಗ್ರೆಸ್​'ಗೆ ಮತ್ತೊಮ್ಮೆ ಮುಜುಗರವಾಗಿದೆ. ಸಿಬಿಐ ಅಧಿಕಾರಿಗಳ FIR ​ನಲ್ಲಿ ಜಾರ್ಜ್  ಹೆಸರು ಕೇಳಿ ಬಂದಿದೆ. ಸಿಬಿಐ ನಡೆಸುತ್ತಿರುವ ತನಿಖೆಯಲ್ಲಿ ಜಾರ್ಜ್ ಹೆಸರು ಉಲ್ಲೇಖವಾಗಿರುವ ಮಾಹಿತಿ  ರಾಷ್ಟ್ರೀಯ ಸುದ್ದಿ ವಾಹಿನಿಗಳಲ್ಲಿ  ಬಹಿರಂಗವಾಗಿದೆ.

ಸಾವಿಗೂ ಮುನ್ನ  ‘ನನಗೆ ಏನಾದರೂ ಆದರೆ, ಈ ಮೂವರೇ ಕಾರಣ’ ಎಂದು ಮಾಧ್ಯಮಗಳಿಗೆ  ಗಣಪತಿ ಹೇಳಿಕೆ ನೀಡಿದ್ದರು.  ಅದರಲ್ಲಿ  ಸಚಿವ ಕೆ.ಜೆ. ಜಾರ್ಜ್, ಐಪಿಎಸ್ ಅಧಿಕಾರಿ ಪ್ರಣಬ್ ಮೊಹಂತಿ, ಐಪಿಎಸ್ ಅಧಿಕಾರಿ ಎ.ಎಂ. ಪ್ರಸಾದ್ ಹೆಸರು ಕೇಳಿ ಬಂದಿತ್ತು.  ಇದೇ ಪ್ರಕರಣದಲ್ಲಿ ಸಚಿವ ಜಾರ್ಜ್  ರಾಜಿನಾಮೆ ಕೂಡಾ ನೀಡಿದ್ದರು.  ನಂತರ  ಕ್ಲೀನ್​ಚಿಟ್  ಪಡೆದು ಮತ್ತೆ ಸಚಿವರಾಗಿದ್ದರು.  ಇದೀಗ ಜಾರ್ಜ್ ಹೆಸರು ಮತ್ತೆ  ಕೇಳಿ ಬಂದಿದೆ.

 ಡಿವೈಎಸ್‌ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಕಳೆದ ಸೆ.05ರಂದು ಸುಪ್ರೀಂ ಕೋರ್ಟ್ ಆದೇಶಿಸಿತ್ತು.

ಗಣಪತಿ ಆತ್ಮಹತ್ಯೆ ಪ್ರಕರಣದ ಸಿಐಡಿ ತನಿಖೆ ನಡೆಯುತ್ತಿರುವಾಗಲೇ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಗಣಪತಿ ಕುಟುಂಬದವರು ಕೋರಿದ್ದರು. ಇದಕ್ಕೆ ಸರ್ಕಾರ ನಿರಾಕರಿಸಿದಾಗ ಗಣಪತಿ ತಂದೆ ಕುಶಾಲಪ್ಪ ಮತ್ತು ತಾಯಿ ಪೂವಮ್ಮ ಅವರು ಹೈಕೋರ್ಟ್ ಏಕ ಸದಸ್ಯ ಪೀಠದ ಮುಂದೆ ಅರ್ಜಿ ಸಲ್ಲಿಸಿದ್ದರು. ಆದರೆ ಹೈಕೋರ್ಟ್’ನಲ್ಲಿ  ಅರ್ಜಿ ವಜಾಗೊಂಡಿತ್ತು.

ನಂತರ ವಿಭಾಗೀಯ ಪೀಠಕ್ಕೆ ಅರ್ಜಿ ಸಲ್ಲಿಸಿದ್ದ ಗಣಪತಿ ಕುಟುಂಬ, ಅಲ್ಲೂ ಅರ್ಜಿ ವಜಾಗೊಂಡಿತ್ತು.

ನಂತರ ಗಣಪತಿ ಪೋಷಕರು ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಸುಪ್ರೀಂಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿಯನ್ನು ಸಲ್ಲಿಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮನೆಗೆ ಮರಳುತ್ತಿದ್ದ ವೈದ್ಯೆ ಹಿಂಬಾಲಿಸಿ ಕಿರುಕುಳ, ಬೆಂಗಳೂರಲ್ಲಿ ತಡರಾತ್ರಿ ಬೆಚ್ಚಿ ಬೀಳಿಸಿದ ಘಟನೆ
ಔಷಧಿ ಖರೀದಿ ಟೆಂಡರ್‌ ತನಿಖೆಗೆ ತಜ್ಞರ ಸಮಿತಿ: ಸಚಿವ ಶರಣ ಪ್ರಕಾಶ್‌ ಪಾಟೀಲ್‌