ಸಂಕಷ್ಟದಿಂದ ಪಾರಾಗಲು ದೇವರ ಮೊರೆ ಹೋದ ಡಿಕೆಶಿ! ಗಾಣಗಾಪೂರದ ದತ್ತಾತ್ರೇಯ ಸನ್ನಿಧಿಗೆ ಡಿಕೆಶಿ ಭೇಟಿ! ದತ್ತಾತ್ರೇಯನಿಗೆ ವಿಶೇಷ ಪೂಜೆ ಸಲ್ಲಿಸಲಿರುವ ಡಿಕೆಶಿ! ಕಲಬುರಗಿ ಜಿಲ್ಲೆ ಅಫಜಲಪುರ ತಾ. ಗಾಣಗಾಪೂರ! ವೀರಭದ್ರೇಶ್ವರ ಜಾತ್ರೆಯಲ್ಲೂ ಸಚಿವ ಡಿಕೆಶಿ ಭಾಗಿ
ಕಲಬುರುಗಿ(ಸೆ.16): ಐಟಿ ಪ್ರಕರಣದಲ್ಲಿ ಜಾಮೀನು ಸಿಗುತ್ತಿದ್ದಂತೆ ಸಚಿವ ಡಿ.ಕೆ. ಶಿವಕುಮಾರ್ ದೇವರ ಮೊರೆ ಹೋಗಿದ್ದಾರೆ. ಇಲ್ಲಿನ ಗಾಣಗಾಪೂರದ ದತ್ತಾತ್ರೇಯ ಸನ್ನಿಧಿಗೆ ಭೇಟಿ ನೀಡಲಿರುವ ಡಿಕೆಶಿ, ವಿಶೇಷ ಪೂಜೆ ಸಲ್ಲಿಸಲಿದ್ದಾರೆ.
ಕಲಬುರಗಿ ಜಿಲ್ಲೆ ಅಫಜಲಪುರ ತಾ. ಗಾಣಗಾಪೂರದಲ್ಲಿನ ದತ್ತಾತ್ರೇಯ ದೇವಸ್ಥಾನಕ್ಕೆ ಭೇಟಿ ನೀಡಲಿರುವ ಡಿಕೆಶಿ, ಗುರು ದ್ವಾರಕನಾಥ್ ಸೂಚನೆಯಂತೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.
ಇನ್ನು ವೆಂಕಟಬೆನ್ನೂರ್ ಗ್ರಾಮದ ವೀರಭದ್ರೇಶ್ವರ ಜಾತ್ರೆಯಲ್ಲೂ ಸಚಿವ ಡಿಕೆಶಿ ಭಾಗಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.