ಅತೃಪ್ತರ ಬಗ್ಗಿಸಲು ಕೃಷ್ಣಾದಲ್ಲಿ ಸಿದ್ಧವಾಯ್ತು ಹೊಸ ಸೂತ್ರ

Published : Jul 09, 2019, 09:41 PM IST
ಅತೃಪ್ತರ ಬಗ್ಗಿಸಲು ಕೃಷ್ಣಾದಲ್ಲಿ ಸಿದ್ಧವಾಯ್ತು ಹೊಸ ಸೂತ್ರ

ಸಾರಾಂಶ

ಮುಂಬೈನಿಂದ ಅತೃಪ್ತರ ಕರೆದುಕೊಂಡು ಬರಲು ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ತೆರಳಲಿದ್ದಾರೆ. ಹಾಗಾದರೆ ಡಿಕೆಶಿ ಮತ್ತು ಎಚ್.ಡಿ.ಕುಮಾರಸ್ವಾಮಿ ಸಿದ್ಧಮಾಡಿಕೊಂಡಿರುವ ಹೊಸ ತಂತ್ರಗಳು ಏನು?

ಬೆಂಗಳೂರು[ಜು. 09]  ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಕುಮಾರಸ್ವಾಮಿ ಹಾಗೂ ಸಚಿವ ಡಿಕೆಶಿ ಮಹತ್ವದ ಮಾತುಕತೆ ನಡೆಸಿದ್ದು ಬಿಜೆಪಿಯ ಆಟಕ್ಕೆ ಪ್ರತಿತಂತ್ರ ರೂಪಿಸಿದ್ದಾರೆ.

ಜೆಡಿಎಸ್‌ ನಿಂದ ಮುಂಬೈಗೆ ಯಾವ ಯಾವ ನಾಯಕರನ್ನು ಜೊತೆಯಲ್ಲಿ ಕರೆದುಕೊಂಡು ಹೋಗಬೇಕು?  ಮುಂಬೈ ರೆಸಾರ್ಟ್ ನಲ್ಲಿರುವ ಅತೃಪ್ತ ಶಾಸಕರನ್ನು ಮನವೊಲಿಸಲು ಏನು ಮಾಡಬೇಕು? ಎಂಬುದರ ಬಗ್ಗೆ   ಚರ್ಚೆ ನಡೆಸಿದ್ದಾರೆ.

ಶಾಸಕರ ರಾಜೀನಾಮೆ ಮುಂದೇನು?  ಕಾನೂನು ಮತ್ತು ಸಂವಿಧಾನ ಏನು ಹೇಳುತ್ತದೆ?

ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ ಡಿಕೆಶಿ ಹಾಗೂ ಸಿಎಂ ಕುಮಾರಸ್ವಾಮಿ ರಿವರ್ಸ್ ಆಪರೇಶನ್ ಮಾಡುವ ಬಗ್ಗೆಯೂ ಪ್ಲ್ಯಾನ್ ರೂಪಿಸಿದ್ದಾರೆ.  ಬಿಜೆಪಿಯಲ್ಲಿರುವ ಕೆಲ ಶಾಸಕರನ್ನು ಸೆಳೆಯುವ ಬಗ್ಗೆ ಮಾತುಕತೆ ನಡೆದಿದದ್ದು ನಾಳೆ ಶಿವಕುಮಾರ್ ಏನು ಮಾಡುತ್ತಾರೆ ಎಂಬುದರ ಮೇಲೆ ದೋಸ್ತಿ ಸರಕಾರದ ಭವಿಷ್ಯ ನಿಂತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಶಾಸಕರಿಗೆ ಡಿ.ಕೆ.ಶಿವಕುಮಾರ್‌ ಔತಣಕೂಟ; 25ಕ್ಕೂ ಹೆಚ್ಚು ಶಾಸಕರು ಭಾಗಿ
ಸುತ್ತೋಲೆ ವಿವಾದಕ್ಕೆ ತೆರೆ.. ಹಾಲಿ ಪಿಯುಸಿ ಉಪನ್ಯಾಸಕರಿಗೆ ಇಲ್ಲ ಹಿಂಬಡ್ತಿ: ಸಚಿವ ಮಧು ಬಂಗಾರಪ್ಪ