ಝಿಕಾ ವೈರಾಣು ಕೊಲ್ಲಲು ಸಿಂಪಡಿಸಿದ ಕೀಟನಾಶಕಕ್ಕೆ 46 ಜೇನು ಗೂಡುಗಳು ಬಲಿ

Published : Sep 14, 2016, 06:39 AM ISTUpdated : Apr 11, 2018, 12:58 PM IST
ಝಿಕಾ ವೈರಾಣು ಕೊಲ್ಲಲು ಸಿಂಪಡಿಸಿದ ಕೀಟನಾಶಕಕ್ಕೆ 46 ಜೇನು ಗೂಡುಗಳು ಬಲಿ

ಸಾರಾಂಶ

ವಿಮಾನದ ಮೂಲಕ ಸಿಂಪಡಿಸಿದ ರಾಸಾಯನಿಕದ ಪರಿಣಾಮ ಸುಮಾರು 46 ಜೇನುಗೂಡುಗಳು ಏಕಕಾಲದಲ್ಲಿ ನಾಶವಾಗಿವೆ.

ನವದೆಹಲಿ ( ಸೆ.14): ಇತ್ತೀಚೆಗೆ ಎಲ್ಲೆಡೆ ಕಾಣಿಸಿಕೊಂಡು ಭೀತಿ ಹುಟ್ಟಿಸಿದ್ದ 'ಝಿಕಾ' ಪರಿಣಾಮದಿಂದಾಗಿ ಜನ ತತ್ತರಿಸಿ ಹೋಗಿದ್ದರು. ಈ ಝಿಕಾ ವೈರಾಣುಗಳನ್ನು ನಾಶ ಪಡಿಸಲು ಸಿಂಪಡಿಸಿದ ಕೀಟನಾಶಕದ ಪರಿಣಾಮ ಮೂರು ಮಿಲಿಯನ್ ಜೇನು ನೊಣಗಳು ಸಾವನ್ನಪ್ಪಿದ ಸಂಗತಿ ದಕ್ಷಿಣ ಕೆರೋಲಿನಾ ದಲ್ಲಿ ನಡೆದಿದೆ. ವಿಮಾನದ ಮೂಲಕ ಸಿಂಪಡಿಸಿದ ರಾಸಾಯನಿಕದ ಪರಿಣಾಮ ಸುಮಾರು 46 ಜೇನುಗೂಡುಗಳು ಏಕಕಾಲದಲ್ಲಿ ನಾಶವಾಗಿವೆ.

ಯಾವುದೇ ಮುನ್ಸೂಚನೆ ಇಲ್ಲದೆ ಮತ್ತು ಯಾವ  ಅಧಿಕೃತ ಸೂಚನೆಯನ್ನೂ ನೀಡದೆ ರಾಸಾಯನಿಕ ಸಿಂಪಡಿಸಿದುದರ ಪರಿಣಾಮ ಜೇನುಹುಳುಗಳನ್ನು ಸಂರಕ್ಷಿಸುವುದಕ್ಕಾಗಿ ಕೃತಕವಾಗಿ ತಯಾರಿಸಿದ್ದ 46 ಗೂಡುಗಳಲ್ಲಿನ ಜೇನು ಹುಳುಗಳು ನಾಶವಾಗಿವೆ. ಎಂದು ಜೇನು ಸಾಕಿದ ಚಾರ್ಲ್ಸ್ಟನ್ ಪೋಸ್ಟ್ ಎಂಬುವವರು ಬೇಸರ ವ್ಯಕ್ತ ಪಡಿಸಿದುದಾಗಿ ಝೀ ನ್ಯೂಸ್ ವರಧಿ ಮಾಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗೃಹಲಕ್ಷ್ಮಿ ಫಲಾನುಭವಿಗಳಿಗೆ ಗುಡ್ ನ್ಯೂಸ್ ಕೊಟ್ಟ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್! ಖಾತೆಗೆ ಯಾವಾಗ ಬರುತ್ತೆ ಹಣ? ಇಲ್ಲಿದೆ ವಿವರ
ಪ್ರೀತಿ ವಿರೋಧಿಸಿದ ತಂದೆಯನ್ನು ಗೆಳೆಯನ ಜೊತೆ ಸೇರಿ ಮಸಣಕ್ಕೆ ಅಟ್ಟಿದ ಪಾಪಿ ಮಗಳು