ವಿಸರ್ಜನೆಯಾದ ಗಣೇಶ ಮೂರ್ತಿ ಕೆರೆಯಿಂದ ಹೊರಕ್ಕೆ ತೆಗೆದು ಜಾಗೃತಿ ಮೂಡಿಸುತ್ತಿದೆ ಧಾರವಾಡದ ಗ್ರೀನ್ ಆರ್ಮಿ

By Internet DeskFirst Published Sep 14, 2016, 5:19 AM IST
Highlights

ಧಾರವಾಡ(ಸೆ.14): ಗಣೇಶನ ಹಬ್ಬ ಮುಗಿದಿದ್ದೂ ಆಯಿತು. ಈಗ ಎಲ್ಲೆಲ್ಲು ಗಣೇಶ ವಿಸರ್ಜನೆ ಜೋರಾಗಿ ನಡೆಯುತ್ತಿದೆ. ಆದರೆ ಧಾರವಾಡ ಈ ಯುವಕರು ವಿಸರ್ಜನೆಯಾದ ವಿಗ್ರಹಗಳನ್ನು ನೀರಿನಿಂದ ಹೊರ ತೆಗೆಯುತ್ತಿದ್ದಾರೆ. ಯಾಕೆ ಅಂತಾ ಗೊತ್ತಾ? ಈ ಸ್ಟೋರಿ ನೋಡಿ.

ಧಾರವಾಡದಲ್ಲಿ ಪ್ರತಿಷ್ಟಾಪಿಸಲಾಗಿರುವ ಗಣೇಶ ಮೂರ್ತಿಗಳನ್ನು ಅಲ್ಲಿನ ಕೆಲಗೇರಿ ಕೆರೆಯಲ್ಲಿ ವಿಸರ್ಜನೆ ಮಾಡುತ್ತಾರೆ. ಆದರೆ ಅಲ್ಲಿ ವಿಸರ್ಜಿಸಲಾದ ಪ್ಲಾಸ್ಟರ್ ಆಫ್ ಪ್ಯಾರಿಸ್‌'ನಿಂದ ನಿರ್ಮಾಣ ಮಾಡಲಾಗಿದೆ. ಇವು ಎಷ್ಟೇ ದಿನ ನೀರಿನಲ್ಲಿದ್ದರು ಕರಗುವುದಿಲ್ಲ. ಇಷ್ಟೇ ಅಲ್ಲದೆ ಲೇಪಿಸಿರುವ ಬಣ್ಣವೂ ವಿಷಕಾರಿ. ಹೀಗಾಗಿ ಇವುಗಳನ್ನ ನೀರಿನಲ್ಲಿ ಹೆಚ್ಚು ದಿನ ಬಿಟ್ರೆ ಜಲಚರಗಳ ಜೀವಕ್ಕೆ ಕುತ್ತು ಎಂಬುದನ್ನ ಅರಿತ ಗ್ರೀನ್ ಆರ್ಮಿ ಕಾರ್ಯಕರ್ತರು ಹೊಸ ಅಭಿಯಾನ ಶುರುಮಾಡಿದ್ದಾರೆ.

ಮುಂಜಾನೆಯೇ ಕೆರೆಯ ಬಳಿ ತೆರೆಳೋ ಕಾರ್ಯಕರ್ತರು, ವಿಸಜರ್ನೆಯಾಗಿರುವ ಮೂರ್ತಿಗಳ ಬಗ್ಗೆ ಮಾಹಿತಿ ಪಡೆಯುತ್ತಾರೆ. ಬಳಿಕ ನೀರಿಗಿಳಿದು ಆ ವಿಗ್ರಹಗಳನ್ನು ಹೊರ ತೆಗೆಯುತ್ತಾರೆ. ಈ ರೀತಿ ಮಾಡುವುದರಿಂದ ನೀರಿನ ಮಾಲಿನ್ಯವನ್ನು ತಪ್ಪಿಸುವುದರೊಂದಿಗೆ, ನೀರಿನಲ್ಲಿ ಕರಗದ ಪಿಓಪಿ ಮೂರ್ತಿಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಇವರ ುದ್ದೇಶವಾಗಿದೆ.

ಕಳೆದ ಮೂರು ದಿನಗಳಿಂದ ವಿಸರ್ಜನೆಯಾಗಿದ್ದ ಹಲವು ವಿಗ್ರಹಗಳನ್ನ ಹೊರ ತೆಗೆದಿದ್ದಾರೆ. ಈ ಮೂಲಕ ಕೆರೆಗಳ ಆರೋಗ್ಯ ಕಾಪಾಡಲು ದಿಟ್ಟ ಹೆಜ್ಜೆ ಇಟ್ಟಿರುವ ಗ್ರೀನ್ ಆರ್ಮಿ ಕಾರ್ಯಕರ್ತರಿಗೆ ಒಂದು ಸಲಾಂ.

click me!