
ವಾಷಿಂಗ್ಟನ್(ಸೆ.28): ಉತ್ತರ ಕೊರಿಯಾದ ಮೇಲೆ ‘ಸೇನಾ ವಿಕಲ್ಪ’ಕ್ಕೂ ನಾವು ಸಿದ್ಧರಿದ್ದೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಅಲ್ಲದೆ, ಎಲ್ಲ ಸಮಾನ ಮನಸ್ಕ ದೇಶಗಳು ಈ ವಿಷಯದಲ್ಲಿ ಕೈಜೋಡಿಸಿ ಉತ್ತರ ಕೊರಿಯಾವನ್ನು ಏಕಾಂಗಿಗೊಳಿಸಬೇಕು ಎಂದು ಅವರು ಕರೆ ನೀಡಿದ್ದಾರೆ.
ಅಮೆರಿಕದ ಬಾಂಬರ್'ಗಳನ್ನು ಎದುರಿಸಲು ನಾವು ಸಿದ್ಧರಿದ್ದೇವೆ ಎಂದು ಉತ್ತರ ಕೊರಿಯಾ ವಿದೇಶಾಂಗ ಸಚಿವರು 2 ದಿವಸಗಳ ಹಿಂದೆ ಹೇಳಿದ್ದರು. ಇದರ ಬೆನ್ನಲ್ಲೇ ಟ್ರಂಪ್ ಅವರ ಈ ಉತ್ತರ ಬಂದಿದೆ.
‘ನಮ್ಮ ಮುಂದೆ ಎರಡು ಆಯ್ಕೆಗಳು (ವಿಕಲ್ಪಗಳು) ಇವೆ. ಅದರಲ್ಲಿ ಎರಡನೇ ಆಯ್ಕೆಗೆ (ಸೇನಾ ಕಾರ್ಯಾರಚಣೆ) ಕೂಡ ನಾವು ಸಿದ್ಧರಿದ್ದೇವೆ. ಆದರೆ ಇದು ಮೊದಲ ಆಯ್ಕೆಯಂತೂ ಅಲ್ಲ. ಈ ಆಯ್ಕೆಯನ್ನು ನಾವು ಆಯ್ದುಕೊಂಡಿದ್ದೇ ಆದಲ್ಲಿ ಅದು ಉತ್ತರ ಕೊರಿಯಾ ಪಾಲಿಗೆ ವಿನಾಶಕಾರಿಯಾಗುತ್ತದೆ. ಅನಿವಾರ್ಯ ಎಂದಾದಲ್ಲಿ ಆ ಆಯ್ಕೆಯನ್ನು ನಾವು ಆಯ್ದುಕೊಳ್ಳಲೇಬೇಕಾಗುತ್ತದೆ’ ಎಂದು ಸ್ಪೇನ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಟ್ರಂಪ್ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.