ಇಲಿಗಳು ಎಟಿಎಂನ ಹಣ ತಿಂದಿದ್ದು ಬೆಂಗಳೂರಲ್ಲಲ್ಲ ಅಸ್ಸಾಂನ ತಿನ್ಸುಕಿಯಾದಲ್ಲಿ

First Published Jun 20, 2018, 9:13 AM IST
Highlights

‘ಬೆಂಗಳೂರಿನ ಮತ್ತಿಕೆರೆಯ ಎಟಿಎಂನಲ್ಲಿ ಇಲಿರಾಯನ ಕಸರತ್ತು’ ಎಂಬ ಬರಹದೊಂದಿಗೆ ಎಟಿಎಂನಲ್ಲಿ ಲಕ್ಷಾಂತರ ರು. ಮೌಲ್ಯದ ನೋಟುಗಳನ್ನು ಇಲಿಗಳು ತಿಂದುಹಾಕಿವೆ ಎಂಬ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದ್ದವು. ಆದರೆ ಈ ಘಟನೆ ನಡೆದಿದ್ದು ಬೆಂಗಳೂರಿನಲ್ಲಲ್ಲ, ಬದಲಾಗಿ ಅಸ್ಸಾಂನ ತಿನ್ಸುಕಿಯಾ ಜಿಲ್ಲೆಯಲ್ಲಿ ತಿನ್ಸುಕಿಯಾದ ಲೈಪುಲಿ ಪ್ರದೇಶದ ಭಾರತೀಯ ಸ್ಟೇಟ್‌ ಬ್ಯಾಂಕ್‌ ಎಟಿಎಂ ಮೇ 20ರಿಂದ ತಾಂತ್ರಿಕ ಕಾರಣಗಳಿಂದ ಬಂದ್‌ ಆಗಿತ್ತು. ಆಗ ಮೂಷಿಕಗಳು ಅದ್ಹೇಗೋ ಎಟಿಎಂ ಯಂತ್ರದ ಒಳಗೆ ಪ್ರವೇಶಿಸಿವೆ. 

ಗುವಾಹಟಿ  (ಜೂ. 20):  ಬೆಂಗಳೂರಿನ ಮತ್ತಿಕೆರೆಯ ಎಟಿಎಂನಲ್ಲಿ ಇಲಿರಾಯನ ಕಸರತ್ತು’ ಎಂಬ ಬರಹದೊಂದಿಗೆ ಎಟಿಎಂನಲ್ಲಿ ಲಕ್ಷಾಂತರ ರು. ಮೌಲ್ಯದ ನೋಟುಗಳನ್ನು ಇಲಿಗಳು ತಿಂದುಹಾಕಿವೆ ಎಂಬ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದ್ದವು. ಆದರೆ ಈ ಘಟನೆ ನಡೆದಿದ್ದು ಬೆಂಗಳೂರಿನಲ್ಲಲ್ಲ. 

ಬದಲಾಗಿ ಅಸ್ಸಾಂನ ತಿನ್ಸುಕಿಯಾ ಜಿಲ್ಲೆಯಲ್ಲಿ ತಿನ್ಸುಕಿಯಾದ ಲೈಪುಲಿ ಪ್ರದೇಶದ ಭಾರತೀಯ ಸ್ಟೇಟ್‌ ಬ್ಯಾಂಕ್‌ ಎಟಿಎಂ ಮೇ 20ರಿಂದ ತಾಂತ್ರಿಕ ಕಾರಣಗಳಿಂದ ಬಂದ್‌ ಆಗಿತ್ತು. ಆಗ ಮೂಷಿಕಗಳು ಅದ್ಹೇಗೋ ಎಟಿಎಂ ಯಂತ್ರದ ಒಳಗೆ ಪ್ರವೇಶಿಸಿವೆ. ಯಂತ್ರದೊಳಗಿದ್ದ 29 ಲಕ್ಷ ರು.ನಲ್ಲಿ 12.38 ಲಕ್ಷ ರು. ಮೌಲ್ಯದ ನೋಟುಗಳನ್ನು ತಿಂದುಹಾಕಿದ್ದವು. ಉಳಿದ 17 ಲಕ್ಷ ರು. ಸುರಕ್ಷಿತವಾಗಿದೆ. ಸೋಮವಾರ ಈ ಕೃತ್ಯ ಬೆಳಕಿಗೆ ಬಂದಿದೆ.ಈ ಸಂಬಂಧ ನೋಟು ತುಂಬುವ ಗ್ಲೋಬಲ್‌ ಸಲ್ಯೂಷನ್‌ ಎಂಬ ಹೊರಗುತ್ತಿಗೆ ಕಂಪನಿ ತಿನ್ಸುಕಿಯಾ ಠಾಣೆಯಲ್ಲಿ ದೂರು ದಾಖಲಿಸಿದೆ.

click me!