ಮೆಟ್ರೋ ನಿಲ್ದಾಣ: ವಸಂತನಗರ-ಬೆನ್'ಸೆಂಟ್ ಟೌನ್ ಏರಿಯಾಗಳ ನಡುವೆ ಜಿದ್ದಾಜಿದ್ದಿ

By Suvarna Web DeskFirst Published Nov 22, 2017, 11:15 AM IST
Highlights

ನಮ್ಮ ಮೆಟ್ರೋ  ಒಂದಲ್ಲಾ ಒಂದು ರೀತಿ ಸುದ್ದಿಯಾಗುತ್ತಲೇ ಇರುತ್ತದೆ. ಇದೀಗ ಮೆಟ್ರೋ ಕಾಮಗಾರಿ ಎರಡು ಏರಿಯಾಗಳ ನಡುವಿನ ಜಿದ್ದಾಜಿದ್ದಿಗೆ ಕಾರಣವಾಗಿದೆ. ಇವರಿಬ್ಬರ ಕಿತ್ತಾಟದಿಂದ ಗೊಂದಲಕ್ಕೆ ಸಿಲುಕಿದ ಬಿಎಂಆರ್​ಸಿಎಲ್ ಏನೂ ಮಾಡಲಾಗದೆ ಕೈ ಕಟ್ಟಿ ಕೂತಿದೆ.

ಬೆಂಗಳೂರು (ನ.22): ನಮ್ಮ ಮೆಟ್ರೋ  ಒಂದಲ್ಲಾ ಒಂದು ರೀತಿ ಸುದ್ದಿಯಾಗುತ್ತಲೇ ಇರುತ್ತದೆ. ಇದೀಗ ಮೆಟ್ರೋ ಕಾಮಗಾರಿ ಎರಡು ಏರಿಯಾಗಳ ನಡುವಿನ ಜಿದ್ದಾಜಿದ್ದಿಗೆ ಕಾರಣವಾಗಿದೆ. ಇವರಿಬ್ಬರ ಕಿತ್ತಾಟದಿಂದ ಗೊಂದಲಕ್ಕೆ ಸಿಲುಕಿದ ಬಿಎಂಆರ್​ಸಿಎಲ್ ಏನೂ ಮಾಡಲಾಗದೆ ಕೈ ಕಟ್ಟಿ ಕೂತಿದೆ.

ಮೆಟ್ರೋ ನಿಲ್ದಾಣವೊಂದು ಎರಡು ಏರಿಯಾಗಳ ಮಧ್ಯೆ ಜಿದ್ದಾಜಿದ್ದಿ ಹುಟ್ಟುಹಾಕಿದೆ.  ಹಾಗಂತ ಇವರ ಮಧ್ಯೆ ಜಿದ್ದಾಜಿದ್ದಿ ಇರೋದು ನಮ್ಮ ಏರಿಯಾದಲ್ಲಿ ನಿಲ್ದಾಣ ಬೇಕು ಅಂತಲ್ಲ. ಬೇಡ ಎಂದು. ಗೊಟ್ಟಿಗೆರೆ-ನಾಗವಾರ 2ನೇ ಹಂತದ ಸ್ಟೇಜ್ 6  ಮೆಟ್ರೋ ಸುರಂಗ ಮಾರ್ಗ ಕಾಮಗಾರಿ ವಸಂತ ನಗರ ಮತ್ತು ಬೆನ್ ಸೆಂಟ್ ಟೌನ್ ನಾಗರಿಕರ ಮಧ್ಯೆ ವಾರ್ ಹುಟ್ಟುಹಾಕಿದೆ.  ಕಂಟೋನ್ಮೆಂಟ್ ಬಳಿ ಮೆಟ್ರೋ ನಿಲ್ದಾಣಕ್ಕೆ ಮೊದಲ ಸರ್ವೇಯಲ್ಲಿ ಗುರುತಿಸಲಾಗಿತ್ತು. ಆದರೆ ಕಂಟೋನ್ಮೆಂಟ್'ನಿಂದ ಪಾಟ್ರಿಕ್ ಟೌನ್ ನಿಲ್ದಾಣಕ್ಕೆ ಸುರಂಗ ಮಾರ್ಗ ಕೊರೆಯಬೇಕಾದರೆ ಬೆನ್ ಸೆಂಟ್ ಟೌನ್ ಬಳಿಯ ದಿ. ರೆಸಿಡೆನ್ಸ್ ಮಾಗಲ್ಯ ಅಪಾರ್ಟ್ ಮೆಂಟ್ ಬಳಿ ಸುರಕ್ಷತ ಸಾಫ್ಟ್ ಪಾಯಿಂಟ್ ಮಾಡಬೇಕಾಗುತ್ತೆ.  ಆಗ ಸುಮಾರು 500 ಕ್ಕೂ ಹೆಚ್ಚು  ಮನೆಗಳು ನೆಲ ಸಮವಾಗಲಿವೆ. ಹೀಗಾಗಿ ಈ ಮಾರ್ಗ ಕೈಬಿಟ್ಟು, ಬಂಬೂ ಬಜಾರ್ ಟೂ, ಪಾಟ್ರಿಕ್ ಟೌನ್ ಮಾರ್ಗದಲ್ಲಿ ಮೆಟ್ರೊ ನಿಲ್ದಾಣ ಮಾಡುವಂತೆ  ಬೆನ್ ಸೆಂಟ್ ಟೌನ್ ನಿವಾಸಿಗಳು ಒತ್ತಾಯಿಸುತ್ತಿದ್ದಾರೆ.

ಮಾರ್ಗ ಬದಲಾವಣೆ ಮಾಡುವಂತೆ ಬಿಎಂಆರ್'ಸಿಎಲ್ ಗೆ ಬೆನ್ ಸೆಂಟ್ ಟೌನ್ ನಿವಾಸಿಗಳು  ಈಗಾಗಲೇ ಮನವಿಯನ್ನೂ ಸಲ್ಲಿಸಿದ್ದಾರೆ. ಸರ್ಕಾರಕ್ಕೂ ಮನವಿ ಸಲ್ಲಿಸಲು ಸಹಿ ಸಂಗ್ರಹ ನಡೆಸುತ್ತಿದ್ದಾರೆ. ಆದರೆ, ಕಂಟೋನ್ಮೆಂಟ್ ಬಳಿಯೇ ಮೆಟ್ರೋ ನಿಲ್ದಾಣ ನಿರ್ಮಾಣ ಮಾಡಿ ಎಂದು ಇತ್ತ ವಸಂತನಗರ ನಿವಾಸಿಗಳು ಒತ್ತಡ ಹಾಕುತ್ತಿದ್ದಾರೆ.

ಬಂಬೂ ಬಜಾರ್ ಬಳಿ ಮೊಟ್ರೋ ನಿಲ್ದಾಣ ನಿರ್ಮಾಣ ಮಾಡಿದ್ರೆ, ಬಿಬಿಎಂಪಿ ಗ್ರೌಂಡ್ ನಲ್ಲಿ  ಸುರಕ್ಷತ ಸಾಫ್ಟ್ ಪಾಯಿಂಟ್ ಬರಲಿದೆ. ಯಾವುದೇ ನಿವಾಸಿಗಳಿಗೆ ತೊಂದರೆಯಾಗಲ್ಲ. ಆದರೂ ವಸಂತನಗರ ನಿವಾಸಿಗಳು ಈಗ ಕ್ಯಾತೆ ತೆಗೆದ ಪರಿಣಾಮ  ಬಿಎಂಆರ್​ಸಿಎಲ್ ಗೊಂದಲದಲ್ಲಿದೆ. ಸರ್ಕಾರವೇ ಮಧ್ಯ ಪ್ರವೇಶಿಸಬೇಕಾದ ಅನಿವಾರ್ಯತೆ ಎದುರಾಗಿದೆ.

click me!