ಅಶ್ಲೀಲ ಫೋಟೋ ಇಟ್ಟುಕೊಳ್ಳುವುದು ಅಪರಾಧವಲ್ಲ: ಕೋರ್ಟ್

Published : Jun 10, 2019, 03:07 PM IST
ಅಶ್ಲೀಲ ಫೋಟೋ ಇಟ್ಟುಕೊಳ್ಳುವುದು ಅಪರಾಧವಲ್ಲ: ಕೋರ್ಟ್

ಸಾರಾಂಶ

ಮಹಿಳೆಯ ಅಶ್ಲೀಲ ಫೋಟೋಗಳನ್ನು ಹೊಂದಿದ ಮಾತ್ರಕ್ಕೆ ಅದು ಶಿಕ್ಷಾರ್ಹ ಅಪರಾಧವಾಗುವುದಿಲ್ಲ. ಆದರೆ ಮಹಿಳೆಯ ಅಶ್ಲೀಲ ಫೋಟೋಗಳನ್ನು ಪ್ರಕಟಿಸುವುದು ಮತ್ತು ವಿತರಿಸುವುದು ಕಾನೂನನಿನಡಿ ಶಿಕ್ಷಾರ್ಹವಾಗಿರುತ್ತದೆ ಎಂದು ಪ್ರಕರಣವೊಂದರಲ್ಲಿ ಕೋರ್ಟ್ ಹೇಳಿದೆ.

ತಿರುವನಂತಪುರಂ, (ಜೂನ್.19): ಅಶ್ಲೀಲ ಫೋಟೋಗಳನ್ನು ಇಟ್ಟುಕೊಳ್ಳುವುದು ಅಪರಾಧವಲ್ಲ ಎಂದು ಕೇರಳ ಹೈಕೋರ್ಟ್ ತೀರ್ಪು ನೀಡಿದೆ.

ಮಹಿಳೆಯರ ಅಸಭ್ಯ ಪ್ರದರ್ಶನ ತಡೆ ಕಾಯಿದೆ ಅಡಿ ಮಹಿಳೆಯ ಅಶ್ಲೀಲ ಫೋಟೋಗಳನ್ನು ಹೊಂದಿದ ಮಾತ್ರಕ್ಕೆ ಅದು ಶಿಕ್ಷಾರ್ಹ ಅಪರಾಧವಾಗುವುದಿಲ್ಲ. ಆದರೆ ಮಹಿಳೆಯ ಅಶ್ಲೀಲ ಫೋಟೋಗಳನ್ನು ಪ್ರಕಟಿಸುವುದು ಮತ್ತು ವಿತರಿಸುವುದು ಕಾನೂನನಿನಡಿ ಶಿಕ್ಷಾರ್ಹವಾಗಿರುತ್ತದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಈ ಮೂಲಕ 2008ರಲ್ಲಿ ಓರ್ವ ಪುರುಷ ಮತ್ತು ಮಹಿಳೆಯ ವಿರುದ್ಧದ ದಾಖಲಾಗಿದ್ದ ಪ್ರಕರಣವನ್ನು ರದ್ದುಗೊಳಿಸಿದೆ.

ಕತುವಾ ರೇಪ್ ಕೇಸ್: ಅರ್ಚಕ ಸೇರಿ 6 ಮಂದಿ ದೋಷಿ!

ಏನಿದು ಪ್ರಕರಣ?:
ಕೊಲ್ಲಂ ಪೊಲೀಸರು ಬಸ್ ನಿಲ್ದಾಣದಲ್ಲಿ  ಶಂಕಿತ ಓರ್ವ ಮಹಿಳೆ ಹಾಗೂ ಪುರುಷನನ್ನು ವಿಚಾರಣೆ ನಡೆಸಿ, ಬ್ಯಾಗ್‍ನಲ್ಲಿದ್ದ ಕ್ಯಾಮೆರಾವನ್ನು ವಶಕ್ಕೆ ಪಡೆದಿದ್ದರು.

ಈ ವೇಳೆ ಪುರುಷನ ಕ್ಯಾಮೆರಾದಲ್ಲಿ ಮಹಿಳೆಯ ಅಶ್ಲೀಲ ಫೋಟೋಗಳಿದ್ದವು. ಹೀಗಾಗಿ ಇಬ್ಬರನ್ನೂ ಬಂಧಿಸಿ, ಕ್ಯಾಮೆರಾವನ್ನು ವಶಕ್ಕೆ ಪಡೆದಿದ್ದ ಪೊಲೀಸರು, ಪ್ರಕರಣ ದಾಖಲಿಸಿಕೊಂಡಿದ್ದರು.

ಈ ಕುರಿತು ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್, ಕ್ಯಾಮೆರಾದಲ್ಲಿರುವ ಫೋಟೋಗಳನ್ನು ಪ್ರಕಟಿಸಿದ್ದಾರೆ ಎಂಬುದಕ್ಕೆ ಯಾವುದೇ ಸೂಕ್ತ ದಾಖಲೆಗಳಿಲ್ಲ. ಅಶ್ಲೀಲ ಫೋಟೋಗಳನ್ನು ಇಟ್ಟುಕೊಳ್ಳುವುದು ಅಪರಾಧವಲ್ಲ. ಹೀಗಾಗಿ ಆರೋಪಿಗಳ ವಿರುದ್ಧ ಪ್ರಕರಣವನ್ನು ರದ್ದುಗೊಳಿಸಲಾಗಿದೆ ಎಂದು ಕೋರ್ಟ್ ತಿಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Bengaluru: ಲವ್ ಮಾಡು, ಇಲ್ಲಾಂದ್ರೆ ಸಾಯ್ತೀನಿ: ಪೊಲೀಸ್ ಇನ್ಸ್‌ಪೆಕ್ಟರ್‌ಗೆ ಕಿರುಕುಳ ಕೊಟ್ಟ ಖತರ್ನಾಕ್ ಲೇಡಿ
ಸರ್ಕಾರಿ ನೇಮಕಾತಿ ವಿಳಂಬ: ಮನನೊಂದು ಧಾರವಾಡ ರೈಲು ಹಳಿಗೆ ಸಿಲುಕಿ ಯುವತಿ ದಾರುಣ ಸಾವು!