ಅನಾಥ ಮಕ್ಕಳ ಸಾಕುತ್ತಿದ್ದ ಅಜ್ಜನಿಗೆ 6.8 ಕೋಟಿ ರೂ. ಲಾಟರಿ!

Published : Jun 26, 2018, 02:19 PM ISTUpdated : Jun 26, 2018, 05:44 PM IST
ಅನಾಥ ಮಕ್ಕಳ ಸಾಕುತ್ತಿದ್ದ ಅಜ್ಜನಿಗೆ 6.8 ಕೋಟಿ ರೂ. ಲಾಟರಿ!

ಸಾರಾಂಶ

ಲಾಟರಿ ಹೊಡೆಯುವುದು ಅಂದ್ರೆ ಇದೇ ಇರಬೇಕು. ಅಥವಾ ಲಾಟರಿ ಹೊಡೆದರೆ ಹೀಗೆ ಹೊಡೆಯಬೇಕು. ಲಾಟರಿ ಡ್ರಾವೊಂದರಲ್ಲಿ ಮೂರು ಅನಾಥ ಮಕ್ಕಳ ಅಜ್ಜ ಬರೋಬ್ಬರಿ 1 ಮಿಲಿಯನ್ ಡಾಲರ್ ಬಹುಮಾನ ಗೆದ್ದಿದ್ದಾನೆ. ಇದೀಗ ಹೊಸ ಮನೆಯೊಂದನ್ನು ಖರೀದಿ ಮಾಡಬೇಕು ಎಂದು ಹುಡುಕುತ್ತಿದ್ದಾನೆ.

ಮೆಲ್ಬೋರ್ನ್(ಜೂ 26 ) ಲಾಟರಿ ಹೊಡೆಯುವುದು ಅಂದ್ರೆ ಇದೇ ಇರಬೇಕು ಅಥವಾ ಲಾಟರಿ ಹೊಡೆದರೆ ಹೀಗೆ ಹೊಡೆಯಬೇಕು. ಲಾಟರಿ ಡ್ರಾವೊಂದರಲ್ಲಿ ಮೂರು ಅನಾಥ ಮಕ್ಕಳ ಅಜ್ಜ ಬರೋಬ್ಬರಿ 1 ಮಿಲಿಯನ್ ಡಾಲರ್ ಅಂದರೆ ಬರೋಬ್ಬರಿ ಆರು ಕೋಟಿ ಎಂಭತ್ತು ಲಕ್ಷ ರೂಪಾಯಿ ಬಹುಮಾನ ಗೆದ್ದಿದ್ದಾನೆ. ಇದೀಗ ಹೊಸ ಮನೆಯೊಂದನ್ನು ಖರೀದಿ ಮಾಡಬೇಕು ಎಂದು ಹುಡುಕುತ್ತಿದ್ದಾನೆ.

ಮೆಲ್ಬೋರ್ನ್ಸ್ ಹೊರವಲಯದ ನಿವಾಸಿ ಅಜ್ಜನ ಸಂತಸಕ್ಕೆ ಇದೀಗ ಪಾರವಿಲ್ಲದಂತಾಗಿದೆ. ನನಗೆ ನಂಬಲಿಕ್ಕೆ ಸಾಧ್ಯವಾಗುತ್ತಿಲ್ಲ. ಇಂಥದ್ದೊಂದು ಕ್ಷಣ ಬರುತ್ತದೆ ಎಂದು ಭಾವಿಸಿಯೇ ಇರಲಿಲ್ಲ ಎಂದು ಅಜ್ಜ ಸಂಭ್ರಮ ವ್ಯಕ್ತಪಡಿಸಿದ್ದಾರೆ. ನಾನು ಮೂರು ಅನಾಥ ಮಕ್ಕಳನ್ನು ಸಾಕುತ್ತಿದ್ದೇನೆ. ನನಗೆ ನಿಜಕ್ಕೂ ಹಣದ ಅಗತ್ಯ ಇತ್ತು. ಅದೃಷ್ಟ ನನ್ನ ಪಾಲಿಗೆ ಬಂದು ನಿಂತಿದೆ ಎಂದಿದ್ದಾರೆ.

ಓಝೋ ಲಾಟರಿಯಲ್ಲಿ ಹಣ ಗೆದ್ದಿದ್ದು ಅಜ್ಜನಿಗೆ ಗೊತ್ತೆ ಇರಲಿಲ್ಲ. ಸಾಕಿದ್ದ ಮಕ್ಕಳನ್ನು ಶಾಲೆಗೆ ಬಿಟ್ಟು ಬರುವ ವೇಳೆ ಲಾಟರಿ ಸಂಸ್ಥೆಯ ಅಧಿಕಾರಿಗಳು ಅಜ್ಜನಿಗೆ ಸುದ್ದಿ ಮುಟ್ಟಿಸಿದ್ದಾರೆ. ಮೆಲ್ಬೋರ್ನ್ಸ್ ಹೊರವಲಯದ ನಿವಾಸಿಯಾಗಿದ್ದ ಬಡ ಅಜ್ಜ ಇದಿಗ ಒಂದೇ ದಿನ ಮಿಲೇನಿಯರ್ ಆಗಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರೈಲು ಟಿಕೆಟ್ ಬುಕಿಂಗ್‌ನಿಂದ ಪ್ರಯಾಣ , ಹಿರಿಯ ನಾಗರೀಕರಿಗಿದೆ ಭರ್ಜರಿ ವಿನಾಯಿತಿ
ಡಾ ಜಿ ಪರಮೇಶ್ವರ ರಾಜ್ಯದ ಸಿಎಂ ಆಗಬೇಕು, ರಾಜಕೀಯದಲ್ಲಿ ಸಂಚಲನ ಮೂಡಿಸೋ ಹೇಳಿಕೆ ಕೊಟ್ಟ ಕೇಂದ್ರ ಸಚಿವ ವಿ. ಸೋಮಣ್ಣ!